For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಕೊರಿಯಾದಲ್ಲಿ 'ಕೆಜಿಎಫ್ 2' ಕ್ರೇಜ್: ಕೊರಿಯಾ ಬಾಕ್ಸಾಫೀಸ್‌ನಲ್ಲೂ ರಾಕಿ ರೆಕಾರ್ಡ್!

  |

  ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ 'ಕೆಜಿಎಫ್ 2' ಭರ್ಜರಿಯಾಗಿ ಓಡುತ್ತಿದೆ. ಚಿತ್ರ ರಿಲೀಸ್ ಅಗಿ ತಿಂಗಳು ಆದರು ಸಿನಿಮಾ ಕಲೆಕ್ಷನ್‌ಗೆ ಬ್ರೇಕ್ ಬಿದ್ದಿಲ್ಲ. 'ಕೆಜಿಎಫ್ 2' ದಿನದಿಂದ ದಿನಕ್ಕೆ ಒಂದೊಂದೇ ಹೊಸ ಜಾಗವನ್ನು ಎಕ್ಸ್‌ಪ್ಲೋರ್ ಮಾಡುತ್ತಿದೆ.

  ಇಷ್ಟು ದಿನ ಭಾರತದಾದ್ಯಂತ ರಿಲೀಸ್ ಆಗಿ, ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿತ್ತು. ಈಗ ಸಿನಿಮಾ ವಿಶ್ವಾದ್ಯಂತ ಹಲವು ದೇಶಗಳಿಗೆ ಎಂಟ್ರಿ ಕೊಡುತ್ತಿದೆ. 'ಕೆಜಿಎಫ್ 2' ಸಿನಿಮಾ ಯಾವುದೋ ಒಂದು ಪ್ರಾಂತ್ಯದ ಆಡಿಯನ್ಸ್‌ಗೆ ಸೀಮಿತವಾಗಿಲ್ಲ. ಹಾಗಾಗಿ ಸಿನಿಮಾ ಎಲ್ಲಿ ರಿಲೀಸ್ ಆದರು ಪ್ರೇಕ್ಷರು ಒಪ್ಪಿಕೊಲ್ಳುತ್ತಿದ್ದಾರೆ, ಮೆಚ್ಚಿಕೊಳ್ಳುತ್ತಾ ಇದ್ದಾರೆ.

  25ನೇ ದಿನದ ಬಳಿಕ ಮತ್ತೆ ಚಿಗುರಿದ 'ಕೆಜಿಎಫ್ 2' ಕಲೆಕ್ಷನ್ : 26ನೇ ದಿನವೂ ಭರ್ಜರಿ ಗಳಿಕೆ! 25ನೇ ದಿನದ ಬಳಿಕ ಮತ್ತೆ ಚಿಗುರಿದ 'ಕೆಜಿಎಫ್ 2' ಕಲೆಕ್ಷನ್ : 26ನೇ ದಿನವೂ ಭರ್ಜರಿ ಗಳಿಕೆ!

  ಈಗಾಗಲೇ ಹಲವು ದೇಶಗಳಲ್ಲಿ ತೆರೆಕಂಡು 'ಕೆಜಿಎಫ್ 2' ಉತ್ತಮ ರೆಸ್ಪಾನ್ಸ್ ಜೊತೆಗೆ ಕಲೆಕ್ಷನ್ ಕೂಡ ಮಾಡಿದೆ. ಒಂದೊಂದೆ ಹೆಜ್ಜೆಯನ್ನು ಮುಂದೆ ಇಡುತ್ತಿರುವ 'ಕೆಜಿಎಫ್ 2', ಈಗ ದಕ್ಷಿಣ ಕೊರಿಯಾಗೆ ಎಂಟ್ರಿ ಕೊಟ್ಟಿದೆ. ದಕ್ಷಿಣ ಕೊರಿಯಾದಲ್ಲಿ 'ಕೆಜಿಎಫ್ 2' ಹವಾ ಜೋರಾಗಿದೆ.

  'ಕೆಜಿಎಫ್ 2'ಗೆ ಬೋಲ್ಡ್ ಆದ ಬಾಲಿವುಡ್‌ ನಟ ರಣ್ವೀರ್ ಸಿಂಗ್!'ಕೆಜಿಎಫ್ 2'ಗೆ ಬೋಲ್ಡ್ ಆದ ಬಾಲಿವುಡ್‌ ನಟ ರಣ್ವೀರ್ ಸಿಂಗ್!

  ಸೌತ್ ಕೊರಿಯಾದಲ್ಲಿ ಕನ್ನಡ ಸಿನಿಮಾ 'ಕೆಜಿಎಫ್ 2' ಕ್ರೇಜ್!

  ಸೌತ್ ಕೊರಿಯಾದಲ್ಲಿ ಕನ್ನಡ ಸಿನಿಮಾ 'ಕೆಜಿಎಫ್ 2' ಕ್ರೇಜ್!

  'ಕೆಜಿಎಫ್ 2' ಚಿತ್ರದ ಹವಾ ವಿಶ್ವದಾದ್ಯಂತ ಪಸರಿಸಿದೆ. ಸದ್ಯ 'ಕೆಜಿಎಫ್ 2' ಕ್ರೇಜ್ ದಕ್ಷಿಣ ಕೊರಿಯಾದ ತನಕ ತಲುಪಿದೆ. ದಕ್ಷಿಣ ಕೊರಿಯಾದಲ್ಲಿ ತೆರೆಕಾಣುತ್ತಿರುವ ಮೊದಲ ಕನ್ನಡ ಸಿನಿಮಾ ಎನ್ನುವ ಕೀರ್ತಿಗೆ ಪಾತ್ರವಾಗಿದೆ 'ಕೆಜಿಎಫ್ 2'. ವರದಿಗಳ ಪ್ರಕಾರ ಸೌತ್ ಕೊರೊಯಾದಲ್ಲೂ 'ಕೆಜಿಎಫ್ 2' ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಸಿನಿಮಾದ ಬಗ್ಗೆ ಜನರಲ್ಲಿ ಹೆಚ್ಚಿನ ಕ್ರೇಜ್ ಮೂಡಿದೆ.

  ದಕ್ಷಿಣ ಕೊರಿಯಾದ ಫ್ಯಾನ್ಸ್ 'ಕೆಜಿಎಫ್ 2' ಮೆಚ್ಚುಗೆ!

  ದಕ್ಷಿಣ ಕೊರಿಯಾದ ಫ್ಯಾನ್ಸ್ 'ಕೆಜಿಎಫ್ 2' ಮೆಚ್ಚುಗೆ!

  ದಕ್ಷಿಣ ಕೊರಿಯಾದಲ್ಲಿ ಕೆಜಿಎಫ್ 2 ಚಿತ್ರದ ಶೋಗಳನ್ನು ನಿಯಮಿತವಾಗಿ ಪ್ರದರ್ಶನ ಮಾಡಲಾಗಿದೆ. ಜೊತೆಗೆ ಹೆಚ್ಚಿನ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿಲ್ಲ. ಆದರೂ ಕೂಡ ಅಲ್ಲಿನ ಪ್ರೇಕ್ಷಕರನ್ನು 'ಕೆಜಿಎಫ್ 2' ಸೆಳೆದಿದೆಯಂತೆ. ಅಲ್ಲಿನ ಅಭಿಮಾನಿಯೊಬ್ಬರು, 'ಕೆಜಿಎಫ್ ಚಾಪ್ಟರ್: 2' ಪ್ರದರ್ಶನ ಸೀಮಿತವಾಗಿದ್ದರೂ, ಹೆಚ್ಚಿನ ಭಾಷೆಗಳಲ್ಲಿ ರಿಲೀಸ್ ಆಗದೇ ಇದ್ದರೂ, ಕೊರಿಯಾದಲ್ಲಿ ಭಾರಿ ಯಶಸ್ಸನ್ನು ಕಂಡಿದೆ. ಸಿನಿಮಾದ ಭಾವನಾತ್ಮಕ ಪರಿಣಾಮ ಇದೆ" ಎಂದು ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಸೌತ್ ಕೊರಿಯಾದಲ್ಲಿ ರಾಕಿ ಭಾಯ್ ಹವಾ!

  ಸೌತ್ ಕೊರಿಯಾದಲ್ಲಿ ರಾಕಿ ಭಾಯ್ ಹವಾ!

  ಕೊರಿಯಾದಲ್ಲಿ 'ಕೆಜಿಎಫ್ 2' ಚಿತ್ರದಲ್ಲಿ ರಾಕಿಭಾಯ್‌ ಅನ್ನು ತೆರೆಯ ಮೇಲೆ ನೋಡಿದ ಜನ ಮೆಚ್ಚಿ ಕೊಂಡಾಡುತ್ತಿದ್ದಾರೆ. ಸದ್ಯ ಉತ್ತರ ಕೊರಿಯಾದಲ್ಲೂ ಕನ್ನಡದ ನಟ ಯಶ್‌ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ 'ಕೆಜಿಎಫ್ 2' ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ 3ನೇ ಸಿನಿಮಾ ಆಗಿದೆ. RRR ಚಿತ್ರದ ದಾಖಲೆಯನ್ನು ಮುರಿದು ಬಿಟ್ಟಿದೆ. ಹಿಂದಿಯಲ್ಲಿ 'ಕೆಜಿಎಫ್ 2' 400 ಕೋಟಿ ರೂ ಗಳಿಕೆ ಕಂಡಿದೆ.

  ಮುಂದುವರೆದ ಕೆಜಿಎಫ್ 2 ಬಾಕ್ಸಾಫೀಸ್ ಬೇಟೆ!

  ಮುಂದುವರೆದ ಕೆಜಿಎಫ್ 2 ಬಾಕ್ಸಾಫೀಸ್ ಬೇಟೆ!

  ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದಾದ್ಯಂತ ಹಲ್‌ಚಲ್ ಎಬ್ಬಿಸಿತ್ತು. ಕಳೆದ 29 ದಿನಗಳಲ್ಲಿ 'ಕೆಜಿಎಫ್ 2' ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಕೊಂಚ ಕಮ್ಮಿಯಾಗಿದ್ದರೂ, ಅದು ಬೇರೆ ಸಿನಿಮಾಗಳಿಗೆ ಹೋಲಿಸಿದರೆ ಉತ್ತಮ ಗಳಿಕೆ ಎಂದೇ ಹೇಳಬಹುದು. ಈ 29 ದಿನಗಳಲ್ಲಿ ಸಿನಿಮಾದ ಒಟ್ಟು ಗಳಿಕೆ 1175.63 ಕೋಟಿ ಗಳಿಸಿದೆ. ಈ 29 ದಿನಗಳಲ್ಲಿ 'ಕೆಜಿಎಫ್ 2' ಗಳಿಕೆ ಹೀಗಿದೆ.

  English summary
  KGF 2 Craze Is High In South korea, New Record Soon

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion