KGF 2: ಚಿತ್ರದಲ್ಲಿ ಯಾವುದೇ ಸಂದೇಶ ಇಲ್ಲ: ನಿರ್ದೇಶಕ ಪ್ರಶಾಂತ್ ನೀಲ್ ಟ್ರೋಲ್!
ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಾಲು, ಸಾಲಾಗಿ ತೆಲುಗು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. 'ಕೆಜಿಎಫ್ 2' ಬಳಿಕ ಪ್ರಶಾಂತ್ ಹಿಂದೆ ಬಿದ್ದಿದ್ದಾರೆ ಟಾಲಿವುಡ್ ಸ್ಟಾರ್ ನಟರು. ತೆಲುಗಿನ ಸ್ಟಾರ್ ನಟರ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಪ್ರಶಾಂತ್ ನೀಲ್. ಕನ್ನಡದಲ್ಲಿ ಮಾಡಿರುವುದು 3 ಚಿತ್ರಗಳ ಮಾತ್ರ. 'ಉಗ್ರಂ' ಬಳಿಕ ಕೆಜಿಎಫ್ ನಿರ್ದೇಶಿಸಿದ್ದರು. ಈಗ 'ಕೆಜಿಎಫ್ 2' ಬಿಡುಗಡೆಯಾಗಬೇಕಿದೆ. ಆದರೆ ಅದಾಗಲೇ ದೊಡ್ಡ,
ದೊಡ್ಡ ಚಿತ್ರಗಳ ನಿರ್ದೇಶಕ ಎನಿಸಿಕೊಳ್ಳುತ್ತಿದ್ದಾರೆ ಪ್ರಶಾಂತ್, ಇನ್ಮುಂದೆ ತೆಲುಗಿನಲ್ಲಿ ಬ್ಯುಸಿ ಆಗಲಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ 'ಕೆಜಿಎಫ್' ಸಿನಿಮಾದ ರೂವಾರಿ. ಚಿತ್ರದ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ ಚಿತ್ರದ ಪ್ರಚಾರ ಭರದಿಂದ ಸಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಪರಿಕಲ್ಪನೆಯಲ್ಲಿ ಸಿನಿಮಾವನ್ನು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಈಗ ಈ ಸಾಲಿನಲ್ಲಿ 'ಕೆಜಿಎಫ್ 2' ರೆಡಿಯಾಗಿದೆ.

ಪ್ರಶಾಂತ್ ನೀಲ್ ಈಗ ಟ್ರೋಲ್‌ಗೆ ತುತ್ತಾಗಿದ್ದಾರೆ. ಅವರು ನೀಡಿದ್ದ ಒಂದು ಹೇಳಿಕೆ ಈಗ ಭಾರಿ ಚರ್ಚೆಗೆ ಕಾರಣ ಆಗಿದೆ. 'ಕೆಜಿಎಫ್' ಚಿತ್ರದಲ್ಲಿ ಸಂದೇಶ ಇಲ್ಲ ಎನ್ನುವ ಬಗ್ಗೆ ಇವರ ಹೇಳಿಕೆಯಿಂದ ಚರ್ಚೆ ಆಗುತ್ತಿದೆ. ಚಿತ್ರದಲ್ಲಿ ಸಂದೇಶ ಇಲ್ಲ ಎಂದು ಹೇಳಿ ಪ್ರಶಾಂತ್ ನೀಲ್ ಟ್ರೋಲ್ ಆಗುತ್ತಿದ್ದಾರೆ.
ಅಷ್ಟಕ್ಕೂ ಆಗಿರೋದು ಇಷ್ಟೇ, ಸಂದರ್ಶನ ಒಂದರಲ್ಲಿ ಪ್ರಶಾಂತ್‌ಗೆ 'ಕೆಜಿಎಫ್' ಚಿತ್ರದ ಮೂಲಕ ಯಾವ ಸಂದೇಶವನ್ನು ಸಮಾಜಕ್ಕೆ ನೀಡುತ್ತೀರಿ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ನಿರ್ದೇಶಕ ಪ್ರಶಾಂತ್ ನೀಲ್, "ನಾನು ಸಿನಿಮಾ ಮಾಡುವುದು ಮನೋರಂಜನೆ ನೀಡಲು, ಸಂದೇಶ ನೀಡಲು ಅಲ್ಲ". ಎಂದಿದ್ದಾರೆ. ಹಾಗಾಗಿ ಪ್ರಶಾಂತ್ ಈ ಹೇಳಿಕೆ ಕೆಲವರ ಕೋಪಕ್ಕೆ ಕಾರಣ ಆಗಿದ್ದು, ಇನ್ನು ಕೆಲವರು ಪ್ರಶಾಂತ್ ನೀಲ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಸಿನಿಮಾ ಒಂದು ಸಮೂಹ ಮಾಧ್ಯಮ. ಸಿನಿಮಾ ನೋಡಿ ಜನರ ಮನಸ್ಸು ಪರಿವರ್ತನೆಗೊಳ್ಳುವ ಸಾಧ್ಯತೆ ಇರುತ್ತದೆ. ಆದರೆ 'ಕೆಜಿಎಫ್'ನಲ್ಲಿ ಕ್ರೌರ್ಯವನ್ನು ಮೆರೆಸಲಾಗಿದೆ ಎಂದೂ ಹಲವರು ಕಮೆಂಟ್ ಮಾಡಿದ್ದಾರೆ. ಸಂದೇಶ ಇಲ್ಲ, ಸಂದೇಶ ಕೊಡುವುದಿಲ್ಲ ಎಂದು ಪ್ರಶಾಂತ್ ಹೇಳಿದ್ದೇ ಈಗ ಟ್ರೋಲ್ ಆಗುತ್ತಿದೆ.
Recommended Video

ಆದರೆ ಇನ್ನು ಕೆಲವರು, ಸಿನಿಮಾದಲ್ಲಿ ಇರಬೇಕಾದದ್ದು ಕೇವಲ ಮನೋರಂಜನೆ. ಸಂದೇಶ ಕೊಟ್ಟು ಅವರ ಚಿಂತನೆಗಳನ್ನು ಜನರ ಮೇಲೆ ಹೇರುವುದು ಸರಿಯಲ್ಲ ಎಂದಿದ್ದಾರೆ. ಒಟ್ಟಾರೆ, ಪ್ರಶಾಂತ್ ನೀಲ್ ಕೊಟ್ಟ ಈ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದನ್ನೆಲ್ಲಾ ಹೊರತುಪಡಿಸಿ ಸಂದೇಶ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿಯಲು 'ಕೆಜಿಎಫ್ 2' ಚಿತ್ರವನ್ನು ನೋಡಬೇಕಾಗುತ್ತದೆ.


Click it and Unblock the Notifications











