KGF 2 Hindi Collection: 200 ಕೋಟಿ ದಾಟಿ ಬಾಲಿವುಡ್‌ಗೆ ಶಾಕ್ ಕೊಟ್ಟ 'ಕೆಜಿಎಫ್ 2' ರೆಕಾರ್ಡ್!

ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ 'ಕೆಜಿಎಫ್ ಚಾಪ್ಟರ್ 2' ಅದ್ಧೂರಿಯಾಗಿ ಬಿಡುಗಡೆಯಾಗಿದೆ. 'ಕೆಜಿಎಫ್ 2' ಬಹು ಭಾಷೆಗಳಲ್ಲಿ ತೆರೆಗೆ ಬಂದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಆದರೆ ವಿಶೇಷವಾಗಿ ಗಮನ ಸೆಳೆದಿರುವುದು ಹಿಂದಿ ಭಾಗದಲ್ಲಿ ಮಾಡಿರುವ ಗಳಿಕೆ.

'ಕೆಜಿಎಫ್ 2' ಉತ್ತರ ಭಾರತದಲ್ಲಿ ಸದ್ದು ಮಾಡಲಿದೆ ಎನ್ನುವ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಇರೋ ಬರೋ ದಾಖಲೆಗಳನ್ನು ಮುರಿದು, ನೀರಿಕ್ಷೆಗಳನ್ನು ಮೀರಿ ಮುನ್ನುಗ್ಗುತ್ತಿದೆ 'ಕೆಜಿಎಫ್ 2'. ಹಿಂದಿ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದಾಖಲೆ ಮೇಲೆ, ದಾಖಲೆ ಬರೆಯುತ್ತಿದೆ.

ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಯಾವ ಖಾನ್‌ಗಳು, ಕಪೂರ್‌ಗಳು ಇಲ್ಲ ಈಗ ಏನಿದ್ದರೂ ರಾಕಿ ಭಾಯ್ ಹವಾ. ಬಾಲಿವುಡ್‌ನಲ್ಲಿ ಈಗ ಕೆಜಿಎಫ್ ಚಿತ್ರವೇ ನಂಬರ್‌ 1 ಆಗಿ ಬಿಟ್ಟಿದೆ. 'ಕೆಜಿಎಫ್ 2' ಗಳಿಕೆ ಮತ್ತಷ್ಟು ಹೆಚ್ಚಾಗಿದ್ದು, ಬಾಲಿವುಡ್‌ಗೆ ಶಾಕ್ ಕೊಟ್ಟಿದೆ.

ಹಿಂದಿಯಲ್ಲಿ 'ಕೆಜಿಎಫ್ 2' 200 ಕೋಟಿ ಗಳಿಕೆ!

ಹಿಂದಿಯಲ್ಲಿ 'ಕೆಜಿಎಫ್ 2' 200 ಕೋಟಿ ಗಳಿಕೆ!

'ಕೆಜಿಎಫ್ 2' ಚಿತ್ರ ರಿಲೀಸ್‌ಗೂ ಮುನ್ನ ನಾರ್ತ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿತ್ತು. ಕೆಜಿಎಫ್ ಭಾಗ ಒಂದು ಬಾಲಿವುಡ್‌ನಲ್ಲಿ ಕಮಾಲ್ ಮಾಡಿತ್ತು. ಹಾಗಾಗಿ ಈ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಇತ್ತು. ಅಂತೆಯೇ ಇರುವ ನಿರೀಕ್ಷೆಗಳನ್ನು ಉಳಿಸಿಕೊಂಡು ದಾಖಲೆ ಮಾಡಿದೆ 'ಕೆಜಿಎಫ್ 2'. ಬಾಲಿವುಡ್ ಬೆರಗಾಗುವಂತಹ ದಾಖಲೆ ಮಾಡಿದ ಕೆಜಿಎಫ್ 2 ಈಗ ಕೇವಲ ಹಿಂದ ಭಾಷಿಕ ಪ್ರದೇಶದಲ್ಲಿ ಮಾತ್ರವೇ 200 ಕೋಟಿ ಗಳಿಕೆ ಮಾಡಿದೆ.

5 ದಿನಕ್ಕೆ ಹಿಂದಿಯಲ್ಲಿ 'ಕೆಜಿಎಫ್ 2' 200 ಕೋಟಿ!

5 ದಿನಕ್ಕೆ ಹಿಂದಿಯಲ್ಲಿ 'ಕೆಜಿಎಫ್ 2' 200 ಕೋಟಿ!

ಕೆಜಿಎಫ್ 2 ನೋಡ, ನೋಡುತ್ತಿದ್ದಂತೆಯೇ ದಾಖಲೆಯ ಸುರಿ ಮಳೆ ಸುರಿಸುತ್ತಾ ಇದೆ. ಅದರಲ್ಲೂ ಹಿಂದಿ ಮಂದಿಗೆ ಕೆಜಿಎಫ್ 2 ದೊಡ್ಡ ಶಾಕ್ ಕೊಟ್ಟಿದೆ. ಚಿತ್ರ ರಿಲೀಸ್ ಆದ 5 ದಿನಕ್ಕೆ 200 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಇದು ಹಿಂದಿಯಲ್ಲಿ ಅತಿ ವೇಗವಾಗಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಈ ಬಗ್ಗೆ ಟ್ರೇಡ್ ವಿಶ್ಲೇಶಕ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಬಾಹುಬಲಿ ದಾಖಲೆಯನ್ನು ಮುರಿದ 'ಕೆಜಿಎಫ್ 2'!

ಬಾಹುಬಲಿ ದಾಖಲೆಯನ್ನು ಮುರಿದ 'ಕೆಜಿಎಫ್ 2'!

ಇನ್ನು ಬಾಹುಬಲಿ ಚಿತ್ರ ಕೂಡ ಹಿಂದಿಯಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಬಾಹುಬಲಿ 6 ದಿನಕ್ಕೆ 200 ಕೋಟಿ ಗಳಿಕೆ ಮಾಡಿತ್ತು. ಆದರೆ 'ಕೆಜಿಎಫ್ 2' ಚಿತ್ರ 4 ದಿನಕ್ಕೆ 200 ಕೋಟಿ ರೂ. ಗಳಿಕೆ ಮಾಡಿ ಬಾಹುಬಲಿ ದಾಖಲೆಯನ್ನು ಮುರಿದಿದೆ. ಈ ಯಶಸ್ಸು ಬಾಲಿವುಡ್‌ನಲ್ಲಿ ಮಂದಿಗೆ ಶಾಕ್ ಕೊಟ್ಟಿರೋದಂತೂ ಹೌದು. ಅಲ್ಲದೆ ಹಿಂದಿ ಬೆಲ್ಟ್‌ನಲ್ಲಿ, ಹಿಂದಿ ಚಿತ್ರಗಳನ್ನು ಹಿಮ್ಮೆಟ್ಟಿ ದೊಡ್ಡ ಮಟ್ಟದ ಓಪನಿಂಗ್ ಪಡೆದ ಮೊದಲ ಚಿತ್ರ ಎನ್ನುವ ಖ್ಯಾತಿ ಪಡೆದುಕೊಂಡಿದೆ.

'ಕೆಜಿಎಫ್ 2' 53 ಕೋಟಿ ಗಳಿಸಿ ಮೊದಲ ದಿನವೇ ದಾಖಲೆ!

'ಕೆಜಿಎಫ್ 2' 53 ಕೋಟಿ ಗಳಿಸಿ ಮೊದಲ ದಿನವೇ ದಾಖಲೆ!

ಬಾಲಿವುಡ್‌ನಲ್ಲಿ ಅಲ್ಲಿನ ಹಿಂದಿ ಚಿತ್ರಗಳು ಮಾಡಿದ ದಾಖಲೆಯನ್ನು ಮುರಿದು ಹೊಸ ಇತಿಹಾಸ ಮಾಡಿದೆ 'ಕೆಜಿಎಫ್ 2'. ಹಿಂದಿಯಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಅಂದರೆ ಅದು ಟೈಗರ್‌ ಶ್ರಾಫ್, ಹೃತಿಕ್ ರೋಷನ್ ಅಭಿನಯದ 'ವಾರ್'. ಈ ಚಿತ್ರ 51.60 ಕೋಟಿ ಓಪನಿಂಗ್ ಪಡೆದುಕೊಂಡು ದಾಖಲೆ ಬರೆದಿತ್ತು. ಆದರೆ ಈಗ 'ಕೆಜಿಎಫ್ 2', 53.95 ಕೋಟಿ ಗಳಿಕೆ ಮಾಡಿ ವಾರ್ ಸಿನಿಮಾದ ದಾಖಲೆಯನ್ನು ಮುರಿದಿದೆ. ಈ ಮೂಲಕ 'ಕೆಜಿಎಫ್ 2' ನಂಬರ್ 1 ಆಗಿದೆ.

More from Filmibeat

English summary
KGF 2 Gives Big Shock To Bollywood By Collecting 200 Crore In 5 Days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X