2022: ಬಾಕ್ಸಾಫೀಸ್‌ನಲ್ಲಿ 'KGF 2' ನಂ. 1!

'ಕೆಜಿಎಫ್ 2' ಸಿನಿಮಾ ರಿಲೀಸ್ ಆದ ಬಳಿಕ ಕನ್ನಡ ಸಿನಿಮಾ ರಂಗವನ್ನು ಇಡಿ ವಿಶ್ವವೇ ತಿರುಗಿ ನೋಡುವಂತಾಗಿದೆ. 'ಕೆಜಿಎಫ್ 2' ಸಿನಿಮಾ ವಿಶ್ವಾದಾದ್ಯಂತ ಅಬ್ಬರಿಸಿದ ಪರಿಗೆ ಕನ್ನಡದಲ್ಲಿ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಬಂದರೂ ಕೂಡ ಒಂದು ಮಟ್ಟಿಗಿನ ನಿರೀಕ್ಷೆ ಹುಟ್ಟುಹಾಕುತ್ತಿವೆ. ಇದೇ ನಿಟ್ಟಿನಲ್ಲಿ ವಿಕ್ರಾಂತ್ ರೋಣ ಮತ್ತು 777 ಚಾರ್ಲಿ ಸದ್ದು ಮಾಡಿವೆ.

ಇನ್ನು 'ಕೆಜಿಎಫ್ 2' ಸಿನಿಮಾ ಹಲವಾರು ವಿಚಾರಗಳಲ್ಲಿ ದಾಖಲೆಯನ್ನು ಬರೆದಿದೆ. 'ಕೆಜಿಎಫ್ 2' ಸಿನಿಮಾ ರಿಲೀಸ್ ಆದ ದಿನದಿಂದಲೂ ಕನ್ನಡ ಸಿನಿಮಾರಂಗದ, ಭಾರತೀಯ ಸಿನಿಮಾರಂಗದ ಬಾಕ್ಸಾಫೀಸಿನಲ್ಲಿ ದಾಖಲೆಯ ಸುರಿಮಳೆಯನ್ನೇ ಸುರಿಸಿದೆ. ಪ್ರಾದೇಶಿಕ ಸಿನಿಮಾವೊಂದು ಈ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ಯಾರೂ ಊಹಿಸಿರಲಿಲ್ಲ. ಅಷ್ಟರಮಟ್ಟಿಗೆ ದಾಖಲೆಯನ್ನು ಬರೆದು ವಿಶ್ವದ ಗಮನ ಸೆಳೆದಿರುವ ಕೀರ್ತಿ ಕೆಜಿಎಫ್‌ಗೆ ಸಲ್ಲುತ್ತದೆ.

'ಕೆಜಿಎಫ್ 2' ಮತ್ತೊಂದು ಹೊಸ ದಾಖಲೆ ಹುಟ್ಟುಹಾಕಿದೆ. 'ಕೆಜಿಎಫ್ 2' ಒಟ್ಟಾರೆ ಬಾಕ್ಸಾಫೀಸ್ ಗಳಿಕೆಯಲ್ಲಿ ಲೆಕ್ಕಾಚಾರದ ಮೂಲಕ, ಕೆಜಿಎಫ್ ಚಿತ್ರ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ. 2022 ರಲ್ಲಿ ವಿಶ್ವಾದ್ಯಂತ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಏಕೈಕ ಸಿನಿಮಾ ಕೆಜಿಎಫ್ 2 ಎನಿಸಿಕೊಂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ....

ರಾಜಮೌಳಿ ದಾಖಲೆ ಪುಡಿ, ಪುಡಿ!

ರಾಜಮೌಳಿ ದಾಖಲೆ ಪುಡಿ, ಪುಡಿ!

ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡು ನಂ.1 ಸ್ಥಾನದಲ್ಲಿದ್ದು ನಿರ್ದೇಶಕ ರಾಜಮೌಳಿಗೆ ಸಿನಿಮಾ ಅದು ಬಾಹುಬಲಿ. ಬಾಹುಬಲಿ 2 ಸಿನಿಮಾ ರಿಲೀಸ್ ಆಗಿ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಗಳಿಕೆಯಲ್ಲಿ ಕಂಡ ಚಿತ್ರ ಎನ್ನುವ ಖ್ಯಾತಿ ಪಡೆದುಕೊಂಡಿದೆ. ಈ ಚಿತ್ರದ ಬಳಿಕ ರಾಜಮೌಳಿ ನಿರ್ದೇಶನದ RRR ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ಬಂತು. ಸಿನಿಮಾ ಅಂದುಕೊಂಡ ಮಟ್ಟಿಗೆ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಗಳಿಕೆ ಕಂಡಿದೆ. ಈ ಚಿತ್ರದ ಗಳಿಕೆಯನ್ನು ಕೂಡ ಮತ್ಯಾವ ಸಿನಿಮಾ ಮುಟ್ಟಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಕನ್ನಡದ ಕೆಜಿಎಫ್ ಸಿನಿಮಾ RRR ಗಳಿಕೆಯನ್ನು ನಿರಾಯಾಸವಾಗಿ ಹೊಡೆದು ಹಾಕಿದೆ. ಹಾಗಾಗಿ 2022ರಲ್ಲಿ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಕೆಜಿಎಫ್ 2.

ಕೆಜಿಎಫ್ 2, 1000 ಕೋಟಿಯ ಅಂದಾಜಿನ ಲೆಕ್ಕಾಚಾರ!

ಕೆಜಿಎಫ್ 2, 1000 ಕೋಟಿಯ ಅಂದಾಜಿನ ಲೆಕ್ಕಾಚಾರ!

ಕರ್ನಾಟಕ : ಅಂದಾಜು ₹ 185.70 ಕೋಟಿ

ತೆಲುಗು ರಾಜ್ಯಗಳು: ಅಂದಾಜು ₹ 136.85 ಕೋಟಿ

ತಮಿಳು ನಾಡು : ಅಂದಾಜು ₹ 114.25 ಕೋಟಿ

ಕೇರಳ : ಅಂದಾಜು ₹ 68.60 ಕೋಟಿ

ಹಿಂದಿ : ಅಂದಾಜು ₹ 525 ಕೋಟಿ

ಓವರ್‌ಸೀಸ್ : ಅಂದಾಜು ₹ 202.60 ಕೋಟಿ

ವರ್ಲ್ಡ್ ವೈಡ್ ಕಲೆಕ್ಷನ್ : ಅಂದಾಜು ₹ 1233.00 ಕೋಟಿ

KGF 2 ದಾಖಲೆ ಮುರಿಯಲು ಸಾಧ್ಯವೇ?

KGF 2 ದಾಖಲೆ ಮುರಿಯಲು ಸಾಧ್ಯವೇ?

ಕೆಜಿಎಫ್ 2 ಸಿನಿಮಾ ಮಾಡಿರುವ ದಾಖಲೆಯನ್ನು ಸದ್ಯಕ್ಕೆ ಯಾವ ಸಿನಿಮಾವು ಸರಿಗಟ್ಟುವ ಹಾಗೆ ಕಾಣುತ್ತಿಲ್ಲ. ಬಾಲಿವುಡ್ ಸೇರಿದಂತೆ ಹಲವು ಸಿನಿಮಾಗಳು ದೊಡ್ಡ ಬಜೆಟ್‌ನಲ್ಲಿ ತಯಾರಾಗಿ, ದೊಡ್ಡ ಮಟ್ಟದಲ್ಲಿ, ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆದರೂ ಕೂಡ ದಾಖಲೆಯ ಮಟ್ಟಕ್ಕೆ ಸದ್ದು ಮಾಡಿಲ್ಲ. ಬೇರೆ ಯಾವ ಸಿನಿಮಾಗಳು ಕೂಡ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ ಎನ್ನುವ ಸೂಚನೆಯನ್ನು ಕೊಟ್ಟಿಲ್ಲ. ಸಲಾರ್, ಆದಿ ಪುರುಷ್ ಸಿನಿಮಾಗಳ ಮೇಲೆ ಮಾತ್ರ ನಿರೀಕ್ಷೆ ಇದೆ. ಆದರೆ ಈ ಚಿತ್ರಗಳು ಈ ವರ್ಷದಲ್ಲಿ ತೆರೆಗೆ ಬರುವುದು ಬಹುತೇಕ ಅನುಮಾನ.

ದಾಖಲೆಗೆ ಮತ್ತೊಂದು ಕೆಜಿಎಫ್ ಬರಬೇಕೆ?

ದಾಖಲೆಗೆ ಮತ್ತೊಂದು ಕೆಜಿಎಫ್ ಬರಬೇಕೆ?

ಇನ್ನು ಭಾರತ ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಯಶಸ್ಸು ಕೊಟ್ಟಿದ್ದು ನಿರ್ದೇಶಕ ರಾಜಮೌಳಿ, ಅದು ಬಾಹುಬಲಿ ಸಿನಿಮಾದ ಮೂಲಕ. ಹಾಗಾಗಿ ಸದ್ಯ ಕೆಜಿಎಫ್ ಸೃಷ್ಟಿ ಮಾಡಿರುವ ದಾಖಲೆಯನ್ನು ಮುರಿಯಲು, ನಿರ್ದೇಶಕ ರಾಜಮೌಳಿಯೆ ಬರಬೇಕಾಗುತ್ತದೆ. ಅಥವಾ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾ ಸಲಾರ್ ಮೂಲಕ ಕೆಜಿಎಫ್ ಚಿತ್ರದ ದಾಖಲೆಯನ್ನು ಸರಿಗಟ್ಟ ಬಹುದಾಗಿದೆ. ಇಲ್ಲವಾದರೆ ಪ್ರಶಾಂತ್ ನೀಲ್ ಯಶ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಕೆಜಿಎಫ್ ಚಿತ್ರವೇ ತಯಾರಾಗಬೇಕು. ಆದರೆ 2022ರಲ್ಲಿ ಕೆಜಿಎಫ್ ಮಾಡಿರುವ ದಾಖಲೆ ಮಾತ್ರ ಬೇರೆ ಯಾರು ಮುರಿಯಲು ಸಾಧ್ಯವಿಲ್ಲ.

More from Filmibeat

English summary
KGF 2 Is No 1 At 2022 Box Office Collection World Wide, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X