1 ನಿಮಿಷದ 'ಕೆಜಿಎಫ್ 2' ಆಡಿಷನ್ ಗೆ ಹನುಮಂತನ ಬಾಲಕ್ಕಿಂತ ಉದ್ದದ ಸಾಲು
Recommended Video
'ಕೆಜಿಎಫ್ 2' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾರು ತಾನೆ ಮಿಸ್ ಮಾಡಿಕೊಳ್ಳುತ್ತಾರೆ. ಸಣ್ಣ ಪಾತ್ರ ಆದರೂ ಸರಿ, ಡೈಲಾಗ್ ಇಲ್ಲ ಅಂದರೂ ಓಕೆ 'ಕೆಜಿಎಫ್' ಎಂಬ ಮಹಾ ಸಿನಿಮಾದಲ್ಲಿ ನಮ್ಮ ಮುಖ ಕಂಡರೆ ಸಾಕು ಎನ್ನುವ ಆಸೆ ಅದೆಷ್ಟೋ ಜನರಿಗೆ ಇದೆ.
'ಕೆಜಿಎಫ್ 2' ಸಿನಿಮಾದ ನಿಜವಾದ ಕ್ರೇಜ್ ಈಗ ಶುರುವಾಗಿದೆ. ಇಂದು ಸಿನಿಮಾ ಕೆಲವು ಪಾತ್ರಗಳಿಗೆ ಆಡಿಷನ್ ನಡೆಯುತ್ತಿದೆ. ಮಲ್ಲೇಶ್ವರಂ ನಲ್ಲಿ ನಡೆಯುತ್ತಿರುವ ಆಡಿಷನ್ ಗಾಗಿ ಬಂದಿರುವವರ ಸಂಖ್ಯೆ ನೋಡಿದರೆ ನಿಜಕ್ಕೂ ಆಶ್ಚರ್ಯ ಆಗುತ್ತಿದೆ. ಹನುಮಂತನ ಬಾಲದ ರೀತಿ ಆಡಿಷನ್ ಸಾಲು ಉದ್ದವಾಗಿ ಇದೆ.
ಆಡಿಷನ್ ಗಾಗಿ ಕಾದು ನಿಂತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಷ್ಟೊಂದು ಜನರನ್ನು ಹೇಗೆ ಆಡಿಷನ್ ಮಾಡುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಒಂದೇ ಒಂದು ದಿನ ಆಡಿಷನ್ ಗೆ ಅವಕಾಶ ನೀಡಿದ್ದು, ಇಂದು ಹೇಗೆ ಅಷ್ಟೊಂದು ಜನರ ಆಡಿಷನ್ ನಡೆಯುತ್ತದೆಯೇ ಏನೋ.

ಮಲ್ಲೇಶ್ವರಂ ನ GM Rejoyz ನಲ್ಲಿ ಚಿತ್ರದ ಆಡಿಷನ್ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ 4 ಗಂಟೆಯವರೆಗೆ ಆಡಿಷನ್ ಮಾಡಲಾಗುತ್ತದೆ. ಇದರಲ್ಲಿ ಭಾಗಿಯಾಗುವವರಿಗೆ ಒಂದು ನಿಮಿಷದಲ್ಲಿ ತಮ್ಮ ಪ್ರತಿಭೆ ಅವಕಾಶ ನೀಡಲಾಗುತ್ತಿದೆ. 8 ರಿಂದ 16 ವರ್ಷದ ಮಕ್ಕಳು ಹಾಗೂ 25 ವರ್ಷದ ಯುವಕರು ಆಡಿಷನ್ ನಲ್ಲಿ ಭಾಗಿಯಾಗಲು ಅರ್ಹರಾಗಿರುತ್ತಾರೆ.
'ಕೆಜಿಎಫ್ 2' ಯಶ್ ಶ್ರೀನಿಧಿ ಶೆಟ್ಟಿ ನಟನೆಯ ಸಿನಿಮಾವಾಗಿದೆ. ಹೊಂಬಾಳೆ ಫಿಲ್ಮ್ಸ್ ಸಿನಿಮಾದ ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











