''ಈ ಫೋಟೋ ನಂದಲ್ಲ'' ಅಂದ್ರು ರಾಕಿಂಗ್ ಸ್ಟಾರ್
Recommended Video
ನಟ ಯಶ್ ಅವರ ಒಂದು ಫೋಟೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಕಿ ಬಾಯ್ ಹೊಸ ವೇಷ ನೋಡಿದ್ದ ಅಭಿಮಾನಿಗಳು ಮನಸಾರೆ ಲೈಕ್, ಕಾಮೆಂಟ್ ನೀಡಿದ್ದರು. ಆದರೆ, ಇದೀಗ ಆ ಫೋಟೋ ಯಶ್ ರದ್ದೇ ಅಲ್ಲವಂತೆ.
ಉದ್ದ ಗಡ್ಡ ಹಾಗೂ ಉದ್ದ ಕೂದಲು ಬಿಟ್ಟು ಕನ್ನಡಿ ಮುಂದೆ ನಿಂತು ತೆಗೆದ ಫೋಟೋ ಸಖತ್ ಆಗಿತ್ತು. ಈ ಫೋಟೋದಲ್ಲಿ ಯಶ್ ಪೋಸ್ ನೀಡಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ''ಈ ಫೋಟೋ ನನ್ನದಲ್ಲ'' ಎಂದು ಯಶ್ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಯಶ್ ನನ್ನದಲ್ಲ ಎಂದ ಮೇಲೆ, ಸೇಮ್ ಟು ಸೇಮ್ ಯಶ್ ರೀತಿಯೇ ಇರುವ ಆ ಫೋಟೋ ಯಾರದ್ದು? ಎನ್ನುವ ಕುತೂಹಲ ಶುರುವಾಗಿದೆ.

ಅಂದಹಾಗೆ, 'ಕೆಜಿಎಫ್' ಸಿನಿಮಾಗಾಗಿ ಯಶ್ ಉದ್ದ ಗಡ್ಡ ಹಾಗೂ ಕೂದಲು ಬಿಟ್ಟಿದ್ದು, ಪಾರ್ಟ್ 2 ನಲ್ಲಿಯೂ ಅದು ಮುಂದುವರೆದಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಶುರು ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಯಶ್ ಕೂಡ ತಮ್ಮ ಟೀಮ್ ಸೇರಿಕೊಳ್ಳಲಿದ್ದಾರಂತೆ.
'ಕೆಜಿಎಫ್ ಚಾಪ್ಟರ್ 2' ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ವಿಜಯ ಕಿರಗಂದೂರು ನಿರ್ಮಾಣ ಇದೆ. ಮೊದಲ ಅಧ್ಯಾಯದಲ್ಲಿ ಕೆಲಸ ಮಾಡಿದ್ದ ತಂಡವೇ ಇಲ್ಲಿಯೂ ಮುಂದುವರೆಯಲಿದೆ.


Click it and Unblock the Notifications











