'ಅಧೀರ'ನ ಪೋಸ್ಟರ್ ವಿನ್ಯಾಸ ಮಾಡಿದ್ದು ರವಿ ಬಸ್ರೂರ್ ಸಂಬಂಧಿ
Recommended Video
ನಿನ್ನೆ (ಜುಲೈ 29) ರಂದು 'ಕೆಜಿಎಫ್ 2' ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಬಾಲಿವುಡ್ ನಟ ಸಂಜಯ್ ದತ್ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಧೀರ ಪಾತ್ರದ ಫಸ್ಟ್ ಲುಕ್ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಪಡೆದಿದೆ.
ಚಿತ್ರದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ, ಈ ಪೋಸ್ಟರ್ ಸಿದ್ಧ ಮಾಡಿರುವುದು ಸಂಗೀತ ನಿರ್ದೇಶನ ರವಿ ಬಸ್ರೂರ್ ಅವರ ಸಂಬಂಧಿ ಕಾರ್ತಿಕ್ ಬಸ್ರೂರ್.

ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿರುವ ಕಾರ್ತಿಕ್ ಬಸ್ರೂರ್ ಸಿನಿಮಾ ಜರ್ನಿಯ ವಿವರ ನೀಡಿದ್ದಾರೆ. ಕಾರ್ತಿಕ್ ಬಸ್ರೂರ್ ಚಿತ್ರರಂಗಕ್ಕೆ ಬರಲು ಮುಖ್ಯ ಕಾರಣವೇ ರವಿ ಬಸ್ರೂರ್ ಅಂತೆ. ಈ ಹಿಂದೆ ಅವರ 'ಕಟಕ' ಚಿತ್ರದಲ್ಲಿ ಕಾರ್ತಿಕ್ ಕೆಲಸ ಮಾಡಿದ್ದರು.

ಬರೀ ಸಂಜಯ್ ದತ್ ಪೋಸ್ಟರ್ ಅಲ್ಲದೆ, ಈ ಹಿಂದಿನ ಕೆಜಿಎಫ್ ಪೋಸ್ಟರ್ ಪೇಂಟಿಂಗ್ ಕೂಡ ಕಾರ್ತಿಕ್ ಬರೆದಿದ್ದರು. ಫೇಸ್ ಪೇಂಟಿಂಗ್, ವ್ಯಕ್ತಿ ಚಿತ್ರ ರಚಿಸುವುದರ ಜೊತೆಗೆ ಕಾರ್ತಿಕ್ ಯಕ್ಷಗಾನ, ಭರತನಾಟ್ಯ ಹಾಗೂ ಹಾಡುತ್ತಾರೆ.

ಅಧೀರನ ಪೋಸ್ಟರ್ ಇಡೀ ತಂಡಕ್ಕೆ ಇಷ್ಟ ಆಗಿದ್ದು, ಸಂಜಯ್ ದತ್ ಕೂಡ ಮೆಚ್ಚಿಕೊಂಡಿದ್ದಾರೆ. ಪೋಸ್ಟರ್ ವಿನ್ಯಾಸ ಮಾಡಿದ ನನಗೆ ಇದನ್ನು ನೋಡಿ ಬಹಳ ಖುಷಿ ಆಗುತ್ತಿದೆ ಎಂದರು ಕಾರ್ತಿಕ್.


Click it and Unblock the Notifications











