ಇನ್ನೆಷ್ಟು ಸಿನಿಮಾಗಳನ್ನು ಮಣಿಸಲಿದೆ 'ಕೆಜಿಎಫ್ 2'

'ಕೆಜಿಎಫ್ 2' ಸಿನಿಮಾ ಬಹುದೊಡ್ಡ ಹಿಟ್ ಆಗಿದೆ. ಬಿಡುಗಡೆ ಆಗಿ 12 ದಿನಗಳ ನಂತರವೂ ಭರ್ಜರಿ ಕಲೆಕ್ಷನ್ ಅನ್ನು ಹಾಗೆಯೇ ಮುಂದುವರೆಸಿದೆ.

'ಕೆಜಿಎಫ್ 2' ಸಿನಿಮಾದ ಕಲೆಕ್ಷನ್‌ನಲ್ಲಿ ದೊಡ್ಡ ಪ್ರಮಾಣದ ಇಳಿಕೆ ಕಂಡು ಬರುತ್ತಿಲ್ಲ ಬದಲಿಗೆ ವೀಕೆಂಡ್‌ಗಳಲ್ಲಿ ಈಗಲೂ ಬಹಳ ಒಳ್ಳೆಯ ಕಲೆಕ್ಷನ್ ಅನ್ನೇ ಈ ಸಿನಿಮಾ ಮಾಡುತ್ತಿದೆ.

'ಕೆಜಿಎಫ್ 2' ಸಿನಿಮಾದ ಕಲೆಕ್ಷನ್ ಕಂಡು ಇತರೆ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತಿದ್ದಾರೆ. ಆದರೆ ಕೆಲವು ನಿರ್ಮಾಪಕರು ಧೈರ್ಯ ಮಾಡಿ ಸಿನಿಮಾ ಬಿಡುಗಡೆ ಮಾಡಿದರಾದರೂ 'ಕೆಜಿಎಫ್ 2' ಆಸು-ಪಾಸು ಬಿಡುಗಡೆ ಆದ ಬಹುತೇಕ ಸಿನಿಮಾಗಳು ನೆಲಕಚ್ಚಿವೆ.

'ಕೆಜಿಎಫ್' ಮೊದಲ ಭಾಗ ಬಿಡುಗಡೆ ಆದಾಗ ಅದರ ಜೊತೆಗೆ ಶಾರುಖ್ ಖಾನ್ ನಟನೆಯ 'ಜೀರೋ' ಸಿನಿಮಾ ಬಿಡುಗಡೆ ಆಗಿತ್ತು, ಆದರೆ 'ಜೀರೋ' ಸಿನಿಮಾ ಮಕಾಡೆ ಮಲಗಿತು. 'ಕೆಜಿಎಫ್' ಸಿನಿಮಾ ಭಾರಿ ದೊಡ್ಡ ಹಿಟ್ ಆಯಿತು. 'ಕೆಜಿಎಫ್ 2' ಸಿನಿಮಾ ಬಿಡುಗಡೆ ಸಮಯದಲ್ಲಿಯೂ ಅದೇ ರಿಪೀಟ್ ಆಗಿದೆ.

'ಬೀಸ್ಟ್' ಸಿನಿಮಾ ಮಕಾಡೆ ಮಲಗಿತು

'ಬೀಸ್ಟ್' ಸಿನಿಮಾ ಮಕಾಡೆ ಮಲಗಿತು

'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಒಂದು ದಿನ ಮುಂಚಿತವಾಗಿ ಬಿಡುಗಡೆ ಆಗಿದ್ದ ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಮಕಾಡೆ ಮಲಗಿತು. ಆರಂಭದ ಒಂದು ದಿನ ಒಳ್ಳೆಯ ಕಲೆಕ್ಷನ್ ಮಾಡಿತಾದರೂ 'ಕೆಜಿಎಫ್ 2' ಮುಂದೆ ಆ ಸಿನಿಮಾ ನಿಲ್ಲಲಾಗಲಿಲ್ಲ. ತಮಿಳುನಾಡಿನಲ್ಲಿಯೇ ಗಳಿಕೆಯಲ್ಲಿ ವಿಜಯ್ ಸಿನಿಮಾವನ್ನು ಹಿಂದಿಕ್ಕಿದ 'ಕೆಜಿಎಫ್ 2' 75 ಕೋಟಿಗೂ ಹೆಚ್ಚು ಹಣವನ್ನು ಗುಡ್ಡೆ ಹಾಕಿತು.

'ಕೆಜಿಎಫ್ 2' ಹೊಡೆತದಿಂದ ತಪ್ಪಿಕೊಳ್ಳಲಾಗದ 'ಜೆರ್ಸಿ'

'ಕೆಜಿಎಫ್ 2' ಹೊಡೆತದಿಂದ ತಪ್ಪಿಕೊಳ್ಳಲಾಗದ 'ಜೆರ್ಸಿ'

'ಜೆರ್ಸಿ' ಹಿಂದಿಯ 'ಜೆರ್ಸಿ' ಸಿನಿಮಾ 'ಕೆಜಿಎಫ್ 2' ಸಿನಿಮಾದ ಜೊತೆಗೆ ಬಿಡುಗಡೆ ಆಗಲು ತಯಾರಿ ನಡೆಸಿತ್ತು, ಪೋಸ್ಟರ್‌, ಪ್ರಚಾರ ಕಾರ್ಯಗಳೆಲ್ಲವನ್ನೂ ಮಾಡಲಾಗಿತ್ತು. ಆದರೆ ಅದೇಕೋ ನಿರ್ಮಾಪಕರು ಮನಸ್ಸು ಬದಲಿಸಿ 'ಕೆಜಿಎಫ್ 2' ಬಿಡುಗಡೆಯಾದ ಮರು ವಾರ ಸಿನಿಮಾವನ್ನು ಬಿಡುಗಡೆ ಆದರೂ ಫಲಿತಾಂಶ ಒಂದೇ ಆಯಿತು. ಜೆರ್ಸಿ ಬಿಡುಗಡೆ ಆದ ದಿನ ಸಿನಿಮಾ ಗಳಿಸಿದ ಹಣ, ಅದೇ ದಿನ 'ಕೆಜಿಎಫ್ 2' ಗಳಿಸಿದ ಹಣಕ್ಕಿಂತಲೂ ಕಡಿಮೆಯಾಗಿತ್ತು!

'ಆಚಾರ್ಯ' ಸಿನಿಮಾ ಬಿಡುಗಡೆ ಆಗಲಿದೆ

'ಆಚಾರ್ಯ' ಸಿನಿಮಾ ಬಿಡುಗಡೆ ಆಗಲಿದೆ

ಇನ್ನು ಈ ಶುಕ್ರವಾರ ಒಂದು ದೊಡ್ಡ ಬಜೆಟ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅದುವೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ 'ಆಚಾರ್ಯ' ಈ ಸಿನಿಮಾಕ್ಕೂ ದೊಡ್ಡ ಹೊಡೆತವನ್ನೇ 'ಕೆಜಿಎಫ್ 2' ಸಿನಿಮಾ ಕೊಡಬಹುದಾದ ನಿರೀಕ್ಷೆ ಇದೆ. ಬಾಕ್ಸ್ ಆಫೀಸ್ ಪರಿಣಿತರ ಪ್ರಕಾರ 'ಕೆಜಿಎಫ್ 2' ಸಿನಿಮಾ ಇನ್ನೂ ಎರಡು ವಾರಾಂತ್ಯ ಉತ್ತಮ ಕಲೆಕ್ಷನ್ ಅನ್ನು ಮುಂದುವರೆಸಲಿದೆಯಂತೆ. ಹಾಗಿದ್ದಲ್ಲಿ, 'ಆಚಾರ್ಯ' ಸಿನಿಮಾಕ್ಕೆ ಹೊಡೆತ ಬೀಳುವುದು ಗ್ಯಾರೆಂಟಿ ಎನ್ನಲಾಗುತ್ತಿದೆ.

'ರನ್‌ವೇ 24'ಗೂ ಹೊಡೆತ

'ರನ್‌ವೇ 24'ಗೂ ಹೊಡೆತ

ಹಿಂದಿಯ 'ರನ್‌ವೇ 34' ಸಹ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ಹಿಂದಿ ಭಾಗದಲ್ಲಿ 'ಕೆಜಿಎಫ್ 2' ಸಿನಿಮಾ ಅದ್ಭುತ ಪ್ರದರ್ಶನ ತೋರುತ್ತಿದ್ದು, ಆ ಭಾಗದಲ್ಲಿ 'ಕೆಜಿಎಫ್ 2'ನ ಗೆಲುವಿನ ನಾಗಾಲೋಟ ಇನ್ನೂ ಎರಡು ವಾರ ಹಾಗೆಯೇ ಮುಂದುವರೆಯಲಿದೆ ಹಾಗಾಗಿ 'ರನ್‌ ವೇ 34' ಸಿನಿಮಾಕ್ಕೂ 'ಕೆಜಿಎಫ್ 2' ದೊಡ್ಡ ಸ್ಪರ್ಧೆಯನ್ನೇ ಒಡ್ಡಲಿದೆ ಎನ್ನಲಾಗುತ್ತಿದೆ. 'ರನ್ ವೇ 34' ಸಿನಿಮಾದಲ್ಲಿ ಅಜಯ್ ದೇವಗನ್, ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಸಿನಿಮಾವನ್ನು ಅಜಯ್ ದೇವಗನ್ ಅವರೇ ನಿರ್ದೇಶನ ಸಹ ಮಾಡಿದ್ದಾರೆ.

More from Filmibeat

English summary
KGF 2 movie affecting many other movies box office collections. This week two big movies going to release, KGF 2 movie may affect them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X