For Quick Alerts
  ALLOW NOTIFICATIONS  
  For Daily Alerts

  RRR ದಾಖಲೆ ಮುರಿದ 'ಕೆಜಿಎಫ್ 2', ಕೊಟ್ಟ ಮಾತಿನಂತೆ ದಾಖಲೆ ಬರೆದ ಯಶ್

  |

  'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಕೆಲವು ದಿನಗಳಷ್ಟೆ ಬಾಕಿ ಉಳಿದಿದೆ. ಈಗಾಗಲೇ ಸಿನಿಮಾದ ಟಿಕೆಟ್‌ಗಳ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ದೇಶದಾದ್ಯಂತ ಜನ ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ.

  Recommended Video

  KGF 2 V/S BEAST | ದೊಡ್ಡ ಸಿನಿಮಾ ಪಟ್ಟಿಯಲ್ಲಿ ಎಲ್ಲರನ್ನು ಹಿಂದಿಕ್ಕಿದ KGF 2 | Yash | Vijay

  'ಕೆಜಿಎಫ್ 2' ಸಿನಿಮಾ ಭಾರತದ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಸಿನಿಮಾ ದೊಡ್ಡ ದೊಡ್ಡ ದಾಖಲೆಗಳನ್ನು ನಿರ್ಮಿಸಲಿದೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

  RRR Ticket Rates : ಯಾವ ನಗರಗಳಲ್ಲಿ ಟಿಕೆಟ್ ದರ ಎಷ್ಟಿದೆ: ಕರ್ನಾಟಕದಲ್ಲಿ ಎಷ್ಟು?RRR Ticket Rates : ಯಾವ ನಗರಗಳಲ್ಲಿ ಟಿಕೆಟ್ ದರ ಎಷ್ಟಿದೆ: ಕರ್ನಾಟಕದಲ್ಲಿ ಎಷ್ಟು?

  'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗುವ ಕೆಲ ವಾರಗಳ ಮೊದಲು ತೆಲುಗಿನ 'RRR' ಸಿನಿಮಾ ಬಿಡುಗಡೆ ಆಗಿ ಭಾರಿ ಹಿಟ್ ಆಗಿದೆ. ಗಳಿಕೆಯಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಹಾಗಾಗಿ ಈಗ 'ಕೆಜಿಎಫ್ 2' ಸಿನಿಮಾವನ್ನು 'RRR' ಜೊತೆಗೆ ಹೋಲಿಸಿ ನೋಡಲಾಗುತ್ತಿದೆ. 'RRR' ದಾಖಲೆಗಳನ್ನು 'ಕೆಜಿಎಫ್ 2' ಮುರಿಯಬಲ್ಲುದೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ನಟ ಯಶ್‌ಗೂ ಈ ಪ್ರಶ್ನೆ ಎದುರಾಗಿದೆ. ಆದರೆ ಇದೀಗ 'ಕೆಜಿಎಫ್ 2' 'RRR' ದಾಖಲೆಯನ್ನು ಮುರಿಯುವತ್ತ ಮೊದಲ ಹೆಜ್ಜೆ ಇಟ್ಟಿದೆ.

  'RRR' ದಾಖಲೆಯನ್ನು ಮುರಿದ 'ಕೆಜಿಎಫ್ 2'

  'RRR' ದಾಖಲೆಯನ್ನು ಮುರಿದ 'ಕೆಜಿಎಫ್ 2'

  'RRR' ಸಿನಿಮಾದ ಒಂದು ದಾಖಲೆಯನ್ನು ಅನಾಯಾಸವಾಗಿ ಮುರಿದಿರುವ 'ಕೆಜಿಎಫ್ 2' ಗಳಿಕೆಯಲ್ಲಿಯೂ 'RRR' ದಾಖಲೆಯನ್ನು ಮುರಿಯುವ ಮುನ್ಸೂಚನೆ ನೀಡಿದೆ. 'RRR' ಸಿನಿಮಾ ಉತ್ತರ ಭಾರತದಲ್ಲಿ ಭಾರಿ ಯಶಸ್ವಿಯಾಗಿತ್ತು. ಸಿನಿಮಾ ಬಿಡುಗಡೆ ಆಗುವ ಕೆಲವು ದಿನಗಳ ಮುಂಚೆಯೇ ಸಿನಿಮಾದ ಟಿಕೆಟ್‌ ಬುಕಿಂಗ್ ಆಗಿದ್ದವು. ಅತಿ ಹೆಚ್ಚು ಅಡ್ವಾನ್ಸ್ ಬುಕಿಂಗ್ ಆಗಿದ್ದ ಸಿನಿಮಾ ಎನಿಸಿಕೊಂಡಿತ್ತು 'RRR'. ಆದರೆ ಈ ದಾಖಲೆಯನ್ನು 'ಕೆಜಿಎಫ್ 2' ಮುರಿದು ಹಾಕಿದೆ.

  RRR ಚಲನಚಿತ್ರ ಮುಂಗಡ ಬುಕಿಂಗ್ ಆರಂಭ: ದುಬಾರಿ ಬೆಲೆ!RRR ಚಲನಚಿತ್ರ ಮುಂಗಡ ಬುಕಿಂಗ್ ಆರಂಭ: ದುಬಾರಿ ಬೆಲೆ!

  ಇನ್ನೂ ಹೆಚ್ಚಿನ ಟಿಕೆಟ್‌ಗಳು ಮಾರಾಟವಾಗಲಿವೆ

  ಇನ್ನೂ ಹೆಚ್ಚಿನ ಟಿಕೆಟ್‌ಗಳು ಮಾರಾಟವಾಗಲಿವೆ

  'RRR' ಸಿನಿಮಾದ ಒಟ್ಟು ಅಡ್ವಾನ್ಸ್ ಬುಕಿಂಗ್ಸ್ ದಾಖಲೆಯನ್ನು 'ಕೆಜಿಎಫ್ 2 ಕೇವಲ ಎರಡೇ ದಿನದಲ್ಲಿ ನುಂಗಿ ಹಾಕಿದೆ. 'RRR' ಸಿನಿಮಾ ಬಿಡುಗಡೆ ಆಗುವ ಐದು ದಿನದ ಮುನ್ನಾ ಟಿಕೆಟ್ ಬುಕಿಂಗ್ ಪ್ರಾರಂಭವಾಗಿತ್ತು. ಮುಂಬೈನಲ್ಲಿ ಐದು ದಿನದಲ್ಲಿ ಆದ 'RRR' ಸಿನಿಮಾದ ಮುಂಗಡ ಟಿಕೆಟ್ ಅನ್ನು 'ಕೆಜಿಎಫ್ 2' ಕೇವಲ ಎರಡೇ ದಿನದಲ್ಲಿ ಮಾಡಿ ಮುಗಿಸಿದೆ. 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಇನ್ನೂ ಐದು ದಿನ ಬಾಕಿ ಇದ್ದು, ಇನ್ನಷ್ಟು ಟಿಕೆಟ್‌ಗಳು ಮಾರಾಟವಾಗುವ ಸಾಧ್ಯತೆ ದಟ್ಟವಾಗಿದೆ.

  ಐದು ದಿನದಲ್ಲಿ ಮಾಡಲಾಗಿದ್ದ ದಾಖಲೆ

  ಐದು ದಿನದಲ್ಲಿ ಮಾಡಲಾಗಿದ್ದ ದಾಖಲೆ

  ಐದು ದಿನದಲ್ಲಿ ಮಾರಾಟವಾಗಿದ್ದ 'RRR' ಸಿನಿಮಾದ ಟಿಕೆಟ್‌ಗಳನ್ನು 'ಕೆಜಿಎಫ್ 2' ಕೇವಲ ಎರಡೇ ದಿನದಲ್ಲಿ ಮಾಡಿದೆ. ಆ ಮೂಲಕ ಅತಿ ಹೆಚ್ಚು ಅಡ್ವಾನ್ಸ್ ಟಿಕೆಟ್ ಮಾರಾಟವಾದ ಸಿನಿಮಾ ಎಂಬ ದಾಖಲೆಯನ್ನು 'ಕೆಜಿಎಫ್ 2' ಸಿನಿಮಾ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಬಾಲಿವುಡ್‌ನ ಸ್ಟಾರ್‌ಗಳ ಸಿನಿಮಾ ಟಿಕೆಟ್‌ಗಳು ಸಹ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗಿಲ್ಲ ಎಂಬುದು ವಿಶೇಷ.

  ಭಾರಿ ಮೊತ್ತ ಗಳಿಸಲಿದೆ 'ಕೆಜಿಎಫ್ 2'

  ಭಾರಿ ಮೊತ್ತ ಗಳಿಸಲಿದೆ 'ಕೆಜಿಎಫ್ 2'

  ಮುಂಬೈನಲ್ಲಿ ಈವರೆಗೆ ಮೊದಲ ದಿನ ದೊಡ್ಡ ಮೊತ್ತ ಗಳಿಸಿರುವ ದಾಖಲೆ, 'ಬಾಹುಬಲಿ 2' ಬಳಿ ಇದೆ. ಈ ದಾಖಲೆಯನ್ನು 'ಕೆಜಿಎಫ್ 2' ಸಿನಿಮಾ ಮುರಿಯಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಈಗಾಗಲೇ ಭಾರಿ ಸಂಖ್ಯೆಯ ಟಿಕೆಟ್ ಸೇಲ್ ಆಗಿದ್ದು, ಉಳಿದ ಐದು ದಿನಗಳಲ್ಲಿ ಇನ್ನಷ್ಟು ಟಿಕೆಟ್ ಸೇಲ್ ಆಗುವ ಸಾಧ್ಯತೆ ದಟ್ಟವಾಗಿದೆ ಹಾಗಾಗಿ ಈ ಸಿನಿಮಾ ಮುಂಬೈನಲ್ಲಿ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎನಿಸಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. 'RRR' ಸಿನಿಮಾದ ದಾಖಲೆಯನ್ನೂ ಮುರಿಯಲಿದೆ.

  English summary
  KGF 2 became first ever movie to sell highest number of tickets in advance in Mumbai city. It beat RRR movie record in just 48 hours.
  Saturday, April 9, 2022, 17:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X