KGF 2 Records: ಅಮೆರಿಕದಲ್ಲಿ ಹೊಸ ದಾಖಲೆ ಬರೆದ 'ಕೆಜಿಎಫ್ 2'
'ಕೆಜಿಎಫ್ 2' ಸಿನಿಮಾ ದಾಖಲೆಗಳ ಮೇಲೆ ದಾಖಲೆಗಳನ್ನು ರಚಿಸುತ್ತಿದೆ. ಈ ಸಿನಿಮಾ ದಾಖಲೆಗಳನ್ನು ಬರೆಯಲಿದೆ ಎಂಬುದು ನಿರೀಕ್ಷಿತವೇ ಆಗಿತ್ತು. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ದಾಖಲೆಗಳನ್ನು ಸೃಷ್ಟಿ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.
ಹಿಂದಿಯಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ದಾಖಲೆಯನ್ನು ಬರೆದಿರುವ 'ಕೆಜಿಎಫ್ 2' ಬಾಲಿವುಡ್‌ನ ಸ್ಟಾರ್ ನಟರನ್ನೇ ಹಿಂದಿಕ್ಕಿಬಿಟ್ಟಿದ್ದಾರೆ. ಹೃತಿಕ್ ರೋಷನ್, ಆಮಿರ್ ಖಾನ್ ಅಂಥಹವರ ಸಿನಿಮಾಗಳ ಕಲೆಕ್ಷನ್ ಅನ್ನೇ ಯಶ್‌ರ ಈ ಸಿನಿಮಾ ಹಿಂದಿಕ್ಕಿದೆ.
ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸಹ 'ಕೆಜಿಎಫ್ 2' ಸಿನಿಮಾ ದಾಖಲೆಗಳನ್ನು ಬರೆಯುತ್ತಿದೆ. ಅಮೆರಿಕದಲ್ಲಿ 'ಕೆಜಿಎಫ್ 2' ಒಂದು ಅಪರೂಪದ ದಾಖಲೆಯನ್ನು ಬರೆದಿದೆ.
ಕನ್ನಡ ಸೇರಿದಂತೆ ಭಾರತೀಯ ಸಿನಿಮಾಗಳಿಗೆ ಅಮೆರಿಕದಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಕನ್ನಡದ ಹಲವು ಸಿನಿಮಾಗಳು ಈ ಹಿಂದೆ ಅಮೆರಿಕದ ಹಲವು ಪ್ರಮುಖ ನಗರಗಳಲ್ಲಿ ಬಿಡುಗಡೆ ಆಗಿವೆ. ಯಶಸ್ಸನ್ನೂ ಗಳಿಸಿವೆ. ನಾಗತಿಹಳ್ಳಿ ಚಂದ್ರಶೇಖರ್ ಅವರಂತೂ ಅಮೆರಿಕದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಆದರೆ ಈ ಹಿಂದಿನ ಯಾವ ಕನ್ನಡ ಸಿನಿಮಾ ಸಹ ಮಾಡದ ದಾಖಲೆಯನ್ನು 'ಕೆಜಿಎಫ್ 2' ಸಿನಿಮಾ ಅಮೆರಿಕದಲ್ಲಿ ಮಾಡಿದೆ.

ಮೊದಲ ದಿನವೇ ದಾಖಲೆ ಬರೆದ 'ಕೆಜಿಎಫ್ 2'
ಅಮೆರಿಕದ ಹಲವು ನಗರಗಳಲ್ಲಿ ಬಿಡುಗಡೆ ಆಗಿರುವ 'ಕೆಜಿಎಫ್ 2' ಸಿನಿಮಾ ಅಮೆರಿಕದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮೊದಲ ಕನ್ನಡ ಸಿನಿಮಾ ಎನಿಸಿಕೊಂಡಿದೆ. ಅಮೆರಿಕದಲ್ಲಿ ಮೊದಲ ದಿನ ಒಂದು ಮಿಲಿಯನ್ ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಆಗಿದೆ 'ಕೆಜಿಎಫ್ 2' ಮೊದಲ ದಿನವೇ ಅಮೆರಿಕ ದೇಶವೊಂದರಲ್ಲಿಯೇ ಏಳು ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು 'ಕೆಜಿಎಫ್ 2' ಸಿನಿಮಾ ಗಳಿಸಿಕೊಂಡಿದೆ.

ಅಮೆರಿಕದಲ್ಲಿ ಮೊದಲ ದಿನವೇ ಒಳ್ಳೆಯ ಕಲೆಕ್ಷನ್
ಈ ಹಿಂದೆ ಇನ್ನಾವ ಕನ್ನಡ ಸಿನಿಮಾ ಸಹ ಅಮೆರಿಕದಲ್ಲಿ ಒಂದು ಮಿಲಿಯನ್ ಗಳಿಸಿಲ್ಲ. ಆದರೆ 'ಕೆಜಿಎಫ್ 2' ಸಿನಿಮಾ ಒಂದೇ ದಿನದಲ್ಲಿ ಅಮೆರಿಕದಲ್ಲಿ 1 ಮಿಲಿಯನ್ ಅಂದರೆ ಭಾರತೀಯ ರುಪಾಯಿ ಪ್ರಕಾರ 7.63 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಗಳಿಸಿಕೊಂಡಿದೆ. ಅಮೆರಿಕದಲ್ಲಿ ಮೊದಲ ದಿನ ದೊಡ್ಡ ಮೊತ್ತದ ಹಣವನ್ನು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾಗಳಲ್ಲಿ ಒಂದೆಂಬ ಖ್ಯಾತಿಯನ್ನು ಸಹ 'ಕೆಜಿಎಫ್ 2' ಸಿನಿಮಾ ಗಳಿಸಿಕೊಂಡಿದೆ.

ವಿದೇಶದಲ್ಲಿ ಒಳ್ಳೆಯ ಕಲೆಕ್ಷನ್
ಅಮೆರಿಕ ಮಾತ್ರವೇ ಅಲ್ಲದೆ ವಿಶ್ವದ ಹಲವು ದೇಶಗಳಲ್ಲಿ 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗಿದೆ. ಯೂರೋಪ್ ದೇಶಗಳು, ಬ್ರಿಟನ್‌ಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಿದೆ. ಗ್ರೀಸ್‌ನಲ್ಲಿ ಬಿಡುಗಡೆ ಆದ ಮೊದಲ ಕನ್ನಡ ಸಿನಿಮಾ ಸಹ 'ಕೆಜಿಎಫ್ 2' ಆಗಿದೆ. ಅಲ್ಲೆಲ್ಲವೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಲೆಕ್ಕದ ಪ್ರಕಾರ ಮೊದಲ ದಿನ ವಿದೇಶಗಳಿಂದಲೇ ಸುಮಾರು 25 ಕೋಟಿ ರುಪಾಯಿಗಳನ್ನು 'ಕೆಜಿಎಫ್ 2' ಸಿನಿಮಾ ಗಳಿಕೆ ಮಾಡಿದೆ.
Recommended Video


ಭಾರತದಲ್ಲಿ ಎಷ್ಟು ಕಲೆಕ್ಷನ್?
ಇನ್ನು ಭಾರತದಲ್ಲಿ ಸಹ ದೊಡ್ಡ ಮಟ್ಟದ ಕಲೆಕ್ಷನ್ ಅನ್ನು 'ಕೆಜಿಎಫ್ 2' ಮಾಡಿದೆ. ಮೊದಲ ದಿನ ಭಾರತದಲ್ಲಿ 134.5 ಕೋಟಿ ರುಪಾಯಿಗಳನ್ನು ಸಿನಿಮಾ ಕಲೆಕ್ಷನ್ ಮಾಡಿದ್ದಾಗಿ ಸ್ವತಃ ಹೊಂಬಾಳೆ ಫಿಲಮ್ಸ್‌ನವರೇ ಅಧಿಕೃತ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ 'ಕೆಜಿಎಫ್ 2' ಸಿನಿಮಾವು ಮೊದಲ ದಿನ 38 ರಿಂದ 40 ಕೋಟಿ ರುಪಾಯಿ ಗಳಿಸಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಸುಮಾರು 25 ಕೋಟಿ ಗಳಿಸಿದೆ. ತಮಿಳುನಾಡಿನಲ್ಲಿ 'ಬೀಸ್ಟ್' ಎದುರಾಳಿಯಾಗಿದ್ದರೂ 7 ಕೋಟಿ. ಕೇರಳದಲ್ಲಿ 5 ಕೋಟಿ ಗಳಿಸಿದೆ.


Click it and Unblock the Notifications











