twitter
    For Quick Alerts
    ALLOW NOTIFICATIONS  
    For Daily Alerts

    KGF Chapter 2 : 'ಕೆಜಿಎಫ್ 2' ಸಿನಿಮಾವನ್ನು ದೂರತಳ್ಳಿದ್ದೇಕೆ ಮಲ್ಟಿಫ್ಲೆಕ್ಸ್: ಈ ಸೊಕ್ಕಿಗೆ ಕಾರಣವೇನು?

    |

    'ಕೆಜಿಎಫ್ 2' ಸಿನಿಮಾದ ಬಿಡುಗಡೆಗೆ 48 ಗಂಟೆಗಳಿಗೂ ಕಡಿಮೆ ಅವಧಿ ಇದೆ. ಆದರೆ ಈ ವರೆಗೆ ಬೆಂಗಳೂರಿನ ಒಂದೇ ಒಂದು ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ ಎಂಬ ಜಾಹೀರಾತು ಕಾಣುತ್ತಿಲ್ಲ.

    ಬುಕ್‌ಮೈಶೋನಲ್ಲಿ ಸಿನಿಮಾದ ಪ್ರೀಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಬುಕ್‌ ಮೈ ಶೋ ತೆರೆದು ನೋಡಿದರೆ ಬೆಂಗಳೂರಿನಲ್ಲಿ ಕೇವಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಪಟ್ಟಿ ಮಾತ್ರವೇ ಕಾಣುತ್ತದೆ. ಒಂದೇ ಒಂದು ಮಲ್ಟಿಫ್ಲೆಕ್ಸ್ ಪಟ್ಟಿ ಬುಕ್‌ಮೈ ಶೋನಲ್ಲಿಲ್ಲ.

    KGF 2: ಬೆಂಗಳೂರಲ್ಲಿ 12 ಶೋ, ಮುಂಬೈ, ದೆಹಲಿಯಲ್ಲಿ ಮುಂಜಾನೆ ಶೋ ಫಿಕ್ಸ್!KGF 2: ಬೆಂಗಳೂರಲ್ಲಿ 12 ಶೋ, ಮುಂಬೈ, ದೆಹಲಿಯಲ್ಲಿ ಮುಂಜಾನೆ ಶೋ ಫಿಕ್ಸ್!

    Recommended Video

    KGF ಬಗ್ಗೆ ಪುನೀತ್ ಹೇಳಿದ್ದು ಏನು, ವೀಡಿಯೊ ವೈರಲ್ ಆಗ್ತಿರೋದು ಯಾಕೆ | KGF 2 | Yash | Puneeth Rajkumar

    ಪಿವಿಆರ್, ಸಿನೆಪೊಲೀಸ್, ಐನಾಕ್ಸ್ ಇನ್ನು ಕೆಲವು ಮಲ್ಟಿಫ್ಲೆಕ್ಸ್‌ಗಳು ಬೆಂಗಳೂರಿನಲ್ಲಿದ್ದು, ಯಾವೊಂದು ಮಲ್ಟಿಫ್ಲೆಕ್ಸ್‌ಗಳಲ್ಲಿಯೂ 'ಕೆಜಿಎಫ್ 2' ಪ್ರದರ್ಶನವಾಗುವ ಕುರಿತು ಸಣ್ಣ ಜಾಹೀರಾತು ಸಹ ಈವರೆಗೆ ಪ್ರಕಟಗೊಂಡಿಲ್ಲ. ಬುಕ್‌ ಮೈ ಶೋನಲ್ಲಿ ಸಹ ಈ ಬಗ್ಗೆ ಮಾಹಿತಿ ಇಲ್ಲ.

    ಕೆಜಿಎಫ್ 2 v/s ಮಲ್ಟಿಫ್ಲೆಕ್ಸ್

    ಕೆಜಿಎಫ್ 2 v/s ಮಲ್ಟಿಫ್ಲೆಕ್ಸ್

    'ಕೆಜಿಎಫ್ 2' ಹಾಗೂ ಮಲ್ಟಿಫ್ಲೆಕ್ಸ್ ಚೈನ್‌ಗಳ ನಡುವೆ ಹಣ ವಿತರಣೆ ವಿಚಾರವಾಗಿ ಮನಸ್ತಾಪ ಉಂಟಾಗಿರುವ ಕಾರಣ ಬೆಂಗಳೂರು ಮಾತ್ರವೇ ಅಲ್ಲ ದೇಶದ ಯಾವುದೇ ಮಲ್ಟಿಫ್ಲೆಕ್ಸ್‌ಗಳಲ್ಲಿ 'ಕೆಜಿಎಫ್ 2' ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಜಾಹೀರಾತು ಪ್ರದರ್ಶಿಸಿಲ್ಲ. ಯಾವುದೇ ಮಲ್ಟಿಫ್ಲೆಕ್ಸ್‌ನಲ್ಲಿ ಈವರೆಗೆ 'ಕೆಜಿಎಫ್ 2'ನ ಒಂದೇ ಒಂದು ಟಿಕೆಟ್ ಸಹ ಮಾರಾಟವಾಗಿಲ್ಲ.

    ಲಾಭ ಹಂಚಿಕೆ ವಿಧಾನದ ಬಗ್ಗೆ ಅಸಮಾಧಾನ

    ಲಾಭ ಹಂಚಿಕೆ ವಿಧಾನದ ಬಗ್ಗೆ ಅಸಮಾಧಾನ

    ಮಲ್ಟಿಫ್ಲೆಕ್ಸ್ ಹಣ ಹಂಚಿಕೆ ಮಾದರಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾದರಿಗಿಂತಲೂ ಬಹಳ ಭಿನ್ನವಾಗಿದ್ದು, ನಿರ್ಮಾಪಕರಿಗೆ ಹೆಚ್ಚು ಲಾಭತಂದುಕೊಡುವ ಮಾದರಿಯಲ್ಲಿಲ್ಲ. ಅದು ಮಾತ್ರವೇ ಅಲ್ಲದೆ, ಬಾಲಿವುಡ್‌ ಸಿನಿಮಾಗಳಿಗೆ ಒಂದು ಮಾದರಿ, ತೆಲುಗು ಸಿನಿಮಾಗಳಿಗೆ ಒಂದು ಮಾದರಿ, ಕನ್ನಡ ಸಿನಿಮಾಗಳಿಗೆ ಒಂದು ಮಾದರಿ ಹೀಗೆ ಬೇರೆ-ಬೇರೆ ಮಾನದಂಡಗಳಲ್ಲಿ ಹಣ ಹಂಚಿಕೆ ಆಗುತ್ತದೆ. ಹಾಗಾಗಿ 'ಕೆಜಿಎಫ್ 2' ತಂಡವು ಮಲ್ಟಿಫ್ಲೆಕ್ಸ್‌ಗಳ ಜೊತೆಗೆ ಲಾಭ ಹಂಚಿಕೆ ವಿಚಾರವಾಗಿ ಚರ್ಚೆಯಲ್ಲಿದ್ದು ಅದೇ ಕಾರಣದಿಂದ ಮಲ್ಟಿಫ್ಲೆಕ್ಸ್‌ಗಳು 'ಕೆಜಿಎಫ್ 2' ಸಿನಿಮಾ ಬಿಡುಗಡೆ ಮಾಡಲು ಈವರೆಗೆ ಒಪ್ಪಿಗೆ ಸೂಚಿಸಿಲ್ಲ.

    ಸಮಸ್ಯೆ ಬಗೆಹರಿದಿದೆ ಎನ್ನಲಾಗಿದೆ

    ಸಮಸ್ಯೆ ಬಗೆಹರಿದಿದೆ ಎನ್ನಲಾಗಿದೆ

    ಹೊಸ ಮಾಹಿತಿಯ ಪ್ರಕಾರ. ಪಿವಿಆರ್, ಐನಾಕ್ಸ್ ಇತರೆ ಮಲ್ಟಿಫ್ಲೆಕ್ಸ್‌ಗಳ ಜೊತೆಗೆ 'ಕೆಜಿಎಫ್ 2' ತಂಡದ ಮಾತುಕತೆ ಪೂರ್ಣಗೊಂಡಿದ್ದು, ಇಂದು ಸಂಜೆ ವೇಳೆಗೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾದ ಇಕೆಟ್ ಲಭ್ಯವಾಗಲಿವೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ಆರಂಭದ ದಿನಗಳಲ್ಲಿ ಟಿಕೆಟ್ ದರಗಳು ಕಡಿಮೆಯೇ ಇರಲಿದ್ದು, ಇದೇ ಕಾರಣದಿಂದ ದೊಡ್ಡ ಓಪನಿಂಗ್ ಅನ್ನು 'ಕೆಜಿಎಫ್ 2' ಸಿನಿಮಾ ಗಳಿಸಲಿದೆ ಎನ್ನಲಾಗುತ್ತಿದೆ.

    ಕನ್ನಡದ ಮೊದಲ ಐಮ್ಯಾಕ್ಸ್ ಸಿನಿಮಾ ಇದಾಗಿರಲಿದೆ

    ಕನ್ನಡದ ಮೊದಲ ಐಮ್ಯಾಕ್ಸ್ ಸಿನಿಮಾ ಇದಾಗಿರಲಿದೆ

    'ಕೆಜಿಎಫ್ 2' ಸಿನಿಮಾವು ಕನ್ನಡದ ಮೊತ್ತ ಮೊದಲ ಐಮ್ಯಾಕ್ಸ್ ಸಿನಿಮಾ ಆಗಿದ್ದು, ಈ ಸಿನಿಮಾವನ್ನು ಮಲ್ಟಿಫ್ಲೆಕ್ಸ್‌ಗಳಲ್ಲಿ ನೋಡಿದರೆ ಹೆಚ್ಚು ಗುಣಮಟ್ಟದ ಅನುಭವವನ್ನು ಪ್ರೇಕ್ಷಕರು ಪಡೆಯಬಹುದಾಗಿದೆ. ಹಾಗಾಗಿಯೇ ಸಿನಿಮಾವು ಮಲ್ಟಿಫ್ಲೆಕ್ಸ್‌ಗಳಲ್ಲಿ ಬಿಡುಗಡೆ ಆಗುವುದು ಅವಶ್ಯಕವಾಗಿದೆ. ಆದರೆ ಮಲ್ಟಿಫ್ಲೆಕ್ಸ್‌ಗಳ ಕಾರ್ಪೊರೇಟ್ ಲಾಭಕೋರತನದಿಂದಾಗಿ ಸಿನಿಮಾದ ಬಿಡುಗಡೆ ಇನ್ನೂ ಖಾತ್ರಿಯಾಗಿಲ್ಲ. ಆದರೆ ಏಪ್ರಿಲ್ 12 ರ ಸಂಜೆ ಅಥವಾ ಏಪ್ರಿಲ್ 13 ರ ಬೆಳಿಗ್ಗೆ ವೇಳೆಗೆ ಬೆಂಗಳೂರಿನ ಮಲ್ಟಿಫ್ಲೆಕ್ಸ್‌ಗಳಲ್ಲಿಯೂ 'ಕೆಜಿಎಫ್ 2' ಸಿನಿಮಾದ ಟಿಕೆಟ್‌ಗಳನ್ನು ಸಿನಿ ಪ್ರೇಮಿಗಳು ಖರೀದಿಸಬಹುದಾಗಿದೆ.

    English summary
    KGF 2 movie is not releasing on any multiplex screens in Karnataka. KGF 2 production team and multiplex chains were in talk about profit distribution.
    Tuesday, April 12, 2022, 14:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X