ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕಾದಿದೆ ಸಖತ್ ಸರ್ಪ್ರೈಸ್!

ಯಶ್ ಅಭಿಮಾನಿಗಳಿಗೆ ತಡವಾಗಿಯಾದರು ಒಂದು ಸಿಹಿ ಸುದ್ದಿ ಸಿಗಲಿದೆ. ಕೆಜಿಎಫ್ 2 ಸಿನಿಮಾ ಬಗ್ಗೆ ಅಪ್‌ಡೇಟ್‌ಗಳಿಲ್ಲದೆ ಬೇಸರದಲ್ಲಿದ್ದ ಅಭಿಮಾನಿಗಳ ಉತ್ಸಾಹ ಕೆಲವೇ ತಿಂಗಳಲ್ಲಿ ಹೆಚ್ಚಾಗಲಿದೆ.

ನಟ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ಹೀಗೆಂದು ಚಿತ್ರತಂಡ ಹೇಳಿಕೊಂಡಿದೆ. ಆ ಮೂಲಕ, ಬಹು ದಿನಗಳಿಂದ ಸಿನಿಮಾದ ಟೀಸರ್‌ಗಾಗಿ ಬೇಡಿಕೆ ಇಡುತ್ತಿದ್ದ ಅಭಿಮಾನಿಗಳಿಗೆ ಭರವಸೆಯನ್ನು ನೀಡಿದೆ.

ಆದರೆ ಯಶ್ ಹುಟ್ಟುಹಬ್ಬ ಸನಿಹದಲ್ಲೇನೂ ಇಲ್ಲ. ಜನವರಿ 8 ಕ್ಕೆ ಯಶ್ ಹುಟ್ಟುಹಬ್ಬವಿದ್ದು, ಟೀಸರ್‌ಗಾಗಿ ಇನ್ನೂ ಎರಡು ತಿಂಗಳು ಕಾಯಬೇಕಾಗಿದೆ. ಆದರೆ ಯಶ್ ಹುಟ್ಟುಹಬ್ಬದ ದಿನ ಅಭಿಮಾನಿಗಳು ಥ್ರಿಲ್ ಆಗುವುದು ಪಕ್ಕಾ.

ಕೆಜಿಎಫ್ ಟೀಸರ್ ಸಖತ್ ಸದ್ದು ಮಾಡಿತ್ತು

ಕೆಜಿಎಫ್ ಟೀಸರ್ ಸಖತ್ ಸದ್ದು ಮಾಡಿತ್ತು

ಕೆಜಿಎಫ್ ಮೊದಲ ಭಾಗದ ಟೀಸರ್ ದೊಡ್ಡ ಸದ್ದನ್ನೇ ಕನ್ನಡ ಚಿತ್ರರಂಗದಲ್ಲಿ ಮಾಡಿತ್ತು. ಹಲವು ದಾಖಲೆಗಳನ್ನು ಪುಡಿಗಟ್ಟಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟೀಸರ್‌ಗಳ ಸಾಲಿನಲ್ಲಿ ನಿಂತಿತ್ತು ಕೆಜಿಎಫ್ ಮೊದಲ ಭಾಗದ ಟೀಸರ್.

ರಾಕಿ ಭಾಯ್ ಪಾತ್ರ ಕುರಿತ ಪೋಸ್ಟರ್

ರಾಕಿ ಭಾಯ್ ಪಾತ್ರ ಕುರಿತ ಪೋಸ್ಟರ್

ಕೆಜಿಎಫ್ 2 ನ ಟೀಸರ್‌ ಬಗ್ಗೆಯೂ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಯಶ್ ಹುಟ್ಟುಹಬ್ಬದಂದು ಟೀಸರ್ ಬಿಡುಗಡೆ ಆಗುತ್ತಿರುವ ಕಾರಣ, ಟೀಸರ್‌ ಕೇವಲ ಯಶ್ ಪಾತ್ರ ರಾಕಿ ಭಾಯ್ ಮೇಲೆ ಮಾತ್ರವೇ ಆಧಾರಿತ ಆಗಿರಬಹುದು ಎಂಬುದನ್ನು ಸುಲಭಕ್ಕೆ ನಿರೀಕ್ಷಿಸಬಹುದು.

ಶ್ರೀನಿಧಿ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ

ಶ್ರೀನಿಧಿ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ

ಕೆಜಿಎಫ್ 2 ತಂಡ ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ ಹುಟ್ಟುಹಬ್ಬಕ್ಕೆ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ನಂತರ ರವೀನಾ ಟಂಡನ್ ಹುಟ್ಟುಹಬ್ಬಕ್ಕೆ ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿತ್ತು.

ಕೆಜಿಎಫ್ 2 ಚಿತ್ರತಂಡ ಸೇರಲಿರುವ ಸಂಜಯ್ ದತ್

ಕೆಜಿಎಫ್ 2 ಚಿತ್ರತಂಡ ಸೇರಲಿರುವ ಸಂಜಯ್ ದತ್

ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಕೆಲವು ದಿನಗಳ ಹಿಂದಷ್ಟೆ ಮಂಗಳೂರಿನಲ್ಲಿ ಮುಗಿದಿದ್ದು, ಇದೀಗ ಹೈದರಾಬಾದ್‌ಗೆ ಚಿತ್ರೀಕರಣ ಸ್ಥಳಾಂತರಗೊಂಡಿದೆ. ಅಧೀರ ಪಾತ್ರಧಾರಿ ಸಂಜಯ್ ದತ್ ಸಹ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿರುವುದು ಕೆಜಿಎಫ್ 2 ಚಿತ್ರತಂಡದ ಸಂತಸ ನೂರ್ಮಡಿ ಮಾಡಿದೆ.

More from Filmibeat

English summary
KGF 2 movie teaser is going to released by the team on January 08 for Yash's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X