KGF 2 Ticket Booking : 'ಕೆಜಿಎಫ್ 2' ಕರ್ನಾಟಕದಲ್ಲಿ ಬುಕಿಂಗ್ ಆರಂಭ ಯಾವಾಗ?

'ಕೆಜಿಎಫ್ 2' ಸಿನಿಮಾದ ಹವಾ ದಿನೇ ದಿನೇ ಜೋರಾಗುತ್ತಿದೆ. ಬಹು ವರ್ಷಗಳಿಂದ ಕಾಯ್ದುಕೊಂಡಿದ್ದ ನಿರೀಕ್ಷೆ ಏಪ್ರಿಲ್ 14 ರಂದು ಪೂರ್ಣವಾಗಲಿದೆ.

'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಇನ್ನು ಏಳು ದಿನವಷ್ಟೆ ಬಾಕಿ ಇದ್ದು, ಸಿನಿಮಾದ ಟಿಕೆಟ್ ಬುಕಿಂಗ್ ಕೆಲವು ರಾಜ್ಯಗಳಲ್ಲಿ ಈಗಾಗಲೇ ಓಪನ್ ಆಗಿದೆ.

ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಏಪ್ರಿಲ್ 07 ರಿಂದಲೇ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಅಮೆರಿಕ ಸೇರಿದಂತೆ ಇತರೆ ಕೆಲವು ದೇಶಗಳಲ್ಲಿಯೂ ಟಿಕೆಟ್ ಬುಕಿಂಗ್ ನಾಳೆಯಿಂದಲೇ ಓಪನಿಂಗ್ ಆಗಿದೆ. ಆದರೆ ಕರ್ನಾಟಕದಲ್ಲಿ ಯಾವಾಗ ಎಂಬುದು ಅಭಿಮಾನಿಗಳಿಗೆ ಖಾತ್ರಿಯಾಗಿರಲಿಲ್ಲ. ಇದೀಗ ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಿದೆ.

Recommended Video

Rocky bhai Yash Superb Answers to Mumbai Media | Watch with Kannada Subtitles | KGF 2 | Sanjay dutt

KGF 2 Movie Ticket Booking Will Open In Karnataka From April 10

ಕರ್ನಾಟಕದಲ್ಲಿ 'ಕೆಜಿಎಫ್ 2' ಸಿನಿಮಾದ ಟಿಕೆಟ್ ಬುಕಿಂಗ್ ಏಪ್ರಿಲ್ 10 ರಂದು ಪ್ರಾರಂಭಗೊಳ್ಳಲಿದೆ. ಸಿನಿಮಾ ಬಿಡುಗಡೆಗೆ ಮೂರು ದಿನ ಮುಂಚಿತವಾಗಿ ಕರ್ನಾಟಕದಲ್ಲಿ ಬುಕ್‌ ಮೈ ಶೋ, ಪೇಟಿಎಂ ಬಳಸಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದಾಗಿರುತ್ತದೆ.

ಏಪ್ರಿಲ್ 10 ರಂದು ಕರ್ನಾಟಕ ಮಾತ್ರವಲ್ಲ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿಯೂ ಟಿಕೆಟ್ ಬುಕಿಂಗ್ ಓಪನ್ ಆಗಲಿದೆ. ಸಿನಿಮಾದ ಟಿಕೆಟ್ ದರ, ಬಿಡುಗಡೆ ಆಗಲಿರುವ ಚಿತ್ರಮಂದಿರಗಳ ಒಟ್ಟು ಸಂಖ್ಯೆ, ವಿವಿಧ ಭಾಷೆಯ ಚಿತ್ರಮಂದಿರ ಹಂಚಿಕೆ ವಿಚಾರಗಳು ಅಂದು ಗೊತ್ತಾಗಲಿದೆ.

'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ಸುಮಾರು 6000 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಗ್ರೀಸ್ ಸೇರಿದಂತೆ ವಿವಿಧ ದೇಶಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

More from Filmibeat

English summary
KGF 2 movie ticket advance booking will open in Karnataka from April 10. Movie is releasing on April 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X