'ಕೆಜಿಎಫ್ 2' ಟ್ರೇಲರ್ ಬಿಡುಗಡೆ: ನಿರೂಪಣೆಗೆ ಬಾಲಿವುಡ್ ಸ್ಟಾರ್ ಅನ್ನೇ ಕರೆತಂದ ಹೊಂಬಾಳೆ!

'ಕೆಜಿಎಫ್ 2' ಸಿನಿಮಾದ ಹವಾ ಪ್ರಾರಂಭವಾಗಿದೆ. 'ತೂಫಾನ್' ಹಾಡು ಬಿಡುಗಡೆ ಮಾಡಿ ಕ್ರೇಜ್ ಹುಟ್ಟುಹಾಕಿರುವ ಚಿತ್ರತಂಡ ಇದೀಗ 'ಟ್ರೇಲರ್' ಬಿಡುಗಡೆಗೆ ಸಜ್ಜಾಗಿದೆ.

'ಕೆಜಿಎಫ್ 2' ಸಿನಿಮಾದ ಟ್ರೇಲರ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಕಲ ಸಜ್ಜಾಗಿದೆ. ಬೆಂಗಳೂರಿನಲ್ಲಿಯೇ ಟ್ರೇಲರ್ ಬಿಡುಗಡೆ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

ಸಿನಿಮಾ ಪ್ರೊಮೋಷನ್ ಕಾರ್ಯಕ್ರಮಗಳು ನಡೆದಾಗ ಸಾಮಾನ್ಯವಾಗಿ ಇಲ್ಲಿನ ನಿರೂಪಕರನ್ನೇ ಕರೆಯುವುದು ವಾಡಿಕೆ. ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿಗೆ ಅನುಶ್ರೀ ಬಹು ಬೇಡಿಕೆಯ ನಿರೂಪಕಿ ಆದರೆ 'ಕೆಜಿಎಫ್ 2' ತಂಡ ಟ್ರೇಲರ್ ಲಾಂಚ್ ಕಾರ್ಯಕ್ರಮದ ನಿರೂಪಣೆಗೆ ಬಾಲಿವುಡ್‌ನ ಸ್ಟಾರ್ ನಿರ್ಮಾಪಕರನ್ನೇ ಕರೆತರುತ್ತಿದೆ!

ನಿರೂಪಣೆ ಮಾಡಲಿದ್ದಾರೆ ಕರಣ್ ಜೋಹರ್

ನಿರೂಪಣೆ ಮಾಡಲಿದ್ದಾರೆ ಕರಣ್ ಜೋಹರ್

ಬಾಲಿವುಡ್‌ನ ಸ್ಟಾರ್ ನಿರ್ಮಾಪಕ, ನಿರ್ದೇಶಕ, ನಟ ಕರಣ್ ಜೋಹರ್ 'ಕೆಜಿಎಫ್ 2' ಸಿನಿಮಾದ ಟ್ರೇಲರ್‌ ಲಾಂಚ್ ಇವೆಂಟ್‌ನ ನಿರೂಪಣೆ ಮಾಡಲಿದ್ದಾರೆ. ಕಾರ್ಯಕ್ರಮವು ಇದೇ ಭಾನುವಾರ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ನಡೆಯಲಿದ್ದು, ಭಾರಿ ಅದ್ಧೂರಿ ಕಾರ್ಯಕ್ರಮ ಇದಾಗಿರಲಿದೆ. ಬಾಲಿವುಡ್ ಸ್ಟಾರ್ ಕೈಲಿ ಕಾರ್ಯಕ್ರಮ ನಿರೂಪಣೆ ಮಾಡಿಸುತ್ತಿದ್ದಾರೆಂದರೆ ಕಾರ್ಯಕ್ರಮದ ಅದ್ಧೂರಿತನದ ಅಂದಾಜು ಹೂಡಬಹುದು.

ಶಿವರಾಜ್ ಕುಮಾರ್ ವಿಶೇಷ ಅತಿಥಿ

ಶಿವರಾಜ್ ಕುಮಾರ್ ವಿಶೇಷ ಅತಿಥಿ

'ಕೆಜಿಎಫ್ 2' ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅಷ್ಟೆ ಅಲ್ಲ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಸ್ಟಾರ್ ನಟರ ದಂಡೇ ಇರಲಿದೆ. ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ರಾವ್ ರಮೇಶ್, ಯಶ್, ನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಇನ್ನೂ ಹಲವು ಮಂದಿ ತಾರೆಗಳು ಭಾನುವಾರದ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

ಹಿಟ್ ಆಗಿದೆ 'ತೂಫಾನ್' ಹಾಡು

ಹಿಟ್ ಆಗಿದೆ 'ತೂಫಾನ್' ಹಾಡು

'ಕೆಜಿಎಫ್ 2' ಸಿನಿಮಾದ 'ತೂಫಾನ್' ಹಾಡು ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ರವಿ ಬಸ್ರೂರು ಸಂಗೀತ ನಿರ್ದೇಶಿಸಿರುವ ಈ ಹಾಡು ಕೆಲವೇ ಗಂಟೆಗಳಲ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿ ಹೊಸ ದಾಖಲೆಗಳನ್ನು ಬರೆದಿದೆ. ಇದೀಗ ಟ್ರೇಲರ್ ಬಿಡುಗಡೆ ಆಗುತ್ತಿದ್ದು, ಟ್ರೇಲರ್ ಸಹ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುವ ಎಲ್ಲಾ ಸಾಧ್ಯತೆಗಳು ಇವೆ. 'ಕೆಜಿಎಫ್ 2' ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದಾಗಲೂ ಅದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು.

ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆ

ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆ

'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ತೆರೆಗೆ ಬರಲಿದೆ. 'ಕೆಜಿಎಫ್: ಚಾಪ್ಟರ್ 1'ರ ಮುಂದಿನ ಭಾಗವಾಗಿರುವ ಈ ಸಿನಿಮಾದ ಬಗ್ಗೆ ದೇಶದಾದ್ಯಂತ ಭಾರಿ ದೊಡ್ಡ ನಿರೀಕ್ಷೆ ಇದೆ. 'ಕೆಜಿಎಫ್ 2' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. 'ಕೆಜಿಎಫ್ 2' ಸಿನಿಮಾದ ಹಿಂದಿ ಡಬ್ಬಿಂಗ್ ಸಿನಿಮಾದ ವಿತರಣೆ ಹಕ್ಕನ್ನು ಕರಣ್ ಜೋಹರ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
KGF 2 Kannada movie trailer launch is happening on Sunday in Bengaluru. Launch event to be host by Bollywood star movie maker Karan Johar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X