For Quick Alerts
  ALLOW NOTIFICATIONS  
  For Daily Alerts

  KGF 2 Vs Multiplexes: 'ಕೆಜಿಎಫ್ 2' ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್ ಆಗುತ್ತಾ ಇಲ್ವಾ? ಇಬ್ಬರ ನಡುವಿನ ಕಿತ್ತಾಟವೇನು?

  |

  'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಯಶ್ ಫ್ಯಾನ್ಸ್ 'ಕೆಜಿಎಫ್ 2' ಸಿನಿಮಾವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಕರ್ನಾಟಕದಲ್ಲಿ ಮಧ್ಯರಾತ್ರಿ 12 ಗಂಟೆಯಿಂದಲೇ 'ಕೆಜಿಎಫ್ 2' ಸಿನಿಮಾ ವಿಶೇಷ ಪ್ರದರ್ಶನ ಕಾಣುತ್ತಿದೆ. ಆದರೂ, ಇನ್ನೂ ಮಲ್ಟಿಪ್ಲೆಕ್ಸ್‌ನಲ್ಲಿ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗುತ್ತಾ ಇಲ್ವಾ? ಅನ್ನೋ ಪ್ರಶ್ನೆ ಎದ್ದಿದೆ.

  ಕರ್ನಾಟಕದಲ್ಲಿರುವ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ 'ಕೆಜಿಎಫ್ 2' ಬಿಡುಗಡೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇನ್ನೂ ಸಿನಿಮಾದ ನಿರ್ಮಾಪಕರು ಹಾಗೂ ಮಲ್ಟಿಪ್ಲೆಕ್ಸ್ ಮ್ಯಾನೇಜ್ಮೆಂಟ್ ನಡುವಿನ ಭಿನ್ನಾಭಿಪ್ರಾಯಗಳು ಸರಿ ಹೋಗಿಲ್ಲ. ಈ ಕಾರಣಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಾ? ಅನ್ನೋ ಗೊಂದಲ ಶುರುವಾಗಿದೆ.

  KGF 2 Sulthana Song: ರಣ ರಣಧೀರ.. ಒಂದು ಗಂಟೆಯಲ್ಲಿಸುಲ್ತಾನನ ಸದ್ದು ಹೇಗಿದೆ?KGF 2 Sulthana Song: ರಣ ರಣಧೀರ.. ಒಂದು ಗಂಟೆಯಲ್ಲಿಸುಲ್ತಾನನ ಸದ್ದು ಹೇಗಿದೆ?

  ಅಷ್ಟಕ್ಕೂ ಮಲ್ಟಿಪ್ಲೆಕ್ಸ್‌ನಲ್ಲಿ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗುತ್ತಾ? ಒಂದು ವೇಳೆ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ರಿಲೀಸ್ ಆಗದೆ ಹೋದರೆ ಗಳಿಕೆ ಮೇಲೆ ಪರಿಣಾಮ ಬೀರುವುದಿಲ್ಲವೇ? ಕೇವಲ ಸಿಂಗಲ್ ಸ್ಕ್ರೀನ್ ಅಷ್ಟೇ ಸಾಕಾ? ಅಸಲಿಗೆ ಇಬ್ಬರ ನಡುವಿನ ಭಿನ್ನಾಭಿಪ್ರಾಯವೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  'KGF 2 Vs Multiplex'

  'KGF 2 Vs Multiplex'

  'ಕೆಜಿಎಫ್ 2' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಬಿಟ್ಟು ಉಳಿದ ಎಲ್ಲಾ ಭಾಷೆಗಳಲ್ಲೂ ಮೊದಲೇ ಟಿಕೆಟ್ ಬುಕಿಂಗ್ ಆರಂಭ ಆಗಿತ್ತು. ಆದರೆ, ಕನ್ನಡ ಮಾತ್ರ ತಡವಾಗಿ ಬುಕಿಂಗ್ ಆರಂಭ ಮಾಡಿದ್ದರೂ, ಮಲ್ಟಿಪ್ಲೆಕ್ಸ್‌ನಲ್ಲಿ ಟಿಕೆಟ್ ಬುಕಿಂಗ್ ಆರಂಭ ಮಾಡಿಲ್ಲ. ಹೀಗಾಗಿ 'ಕೆಜಿಎಫ್ 2' ಸಿನಿಮಾ ನೋಡಬೇಕು ಅಂತಿರುವ ಅಭಿಮಾನಿಗಳಿಗೆ ಕೊಂಚ ಮಟ್ಟಿಗೆ ನಿರಾಸೆ ಆಗಿದೆ. ಅಸಲಿಗೆ 'ಕೆಜಿಎಫ್ 2' ನಿರ್ಮಾಪಕರು ಹಾಗೂ ಮಲ್ಟಿಪ್ಲೆಕ್ಸ್ ಮ್ಯಾನೇಜ್ಮೆಂಟ್ ನಡುವೆ ಕಲೆಕ್ಷನ್ ಹಂಚಿಕೆಯಾಗುವ ಬಗ್ಗೆ ಭಿನ್ನಾಭಿಪ್ರಾಯವಿದೆ. ಈ ಕಾರಣಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಿ ಇನ್ನೂ ಬುಕಿಂಗ್ ಆರಂಭ ಆಗಿಲ್ಲ.

  KGF 2: ತೆಲಂಗಾಣ ಸರ್ಕಾರದಿಂದ 'ಕೆಜಿಎಫ್ 2'ಗೆ ಸಿಹಿ ಸುದ್ದಿKGF 2: ತೆಲಂಗಾಣ ಸರ್ಕಾರದಿಂದ 'ಕೆಜಿಎಫ್ 2'ಗೆ ಸಿಹಿ ಸುದ್ದಿ

  KGF 2 ಹಾಗೂ Multiplex ಇಬ್ಬರ ಬೇಡಿಕೆ ಏನು?

  KGF 2 ಹಾಗೂ Multiplex ಇಬ್ಬರ ಬೇಡಿಕೆ ಏನು?

  ಕರ್ನಾಟಕದ ಮಲ್ಟಿಪ್ಲೆಕ್ಸ್‌ ಹಾಗೂ ಸಿನಿಮಾ ನಿರ್ಮಾಪಕರ ನಡುವೆ ಒಂದು ಒಪ್ಪಂದವಿದೆ. ಯಾವುದೇ ಸಿನಿಮಾ ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್ ಆದರೂ, ಮೊದಲ ವಾರದ ಗಳಿಕೆಯಲ್ಲಿ ಶೇ. 50ರಷ್ಟನ್ನು ಮಲ್ಟಿಪ್ಲೆಕ್ಸ್‌ಗೆ ನೀಡಬೇಕು. ಇದನ್ನು 'ಕೆಜಿಎಫ್' ನಿರ್ಮಾಪಕರು ಒಪ್ಪುತ್ತಿಲ್ಲ ಎನ್ನಲಾಗಿದೆ. ಗಳಿಕೆಯಲ್ಲಿ ಶೇ.55ರಷ್ಟು ಪಾಲು ತಮಗೆ ನೀಡಬೇಕು ಅಂತ ನಿರ್ಮಾಪಕರು ಪಟ್ಟು ಹಿಡಿದು ಕೂತಿದ್ದಾರಂತೆ. ಅದನ್ನು ಕರ್ನಾಟಕದ ಮಲ್ಟಿಪ್ಲೆಕ್ಸ್ ಮ್ಯಾನೇಜ್ಮೆಂಟ್ ಒಪ್ಪುತ್ತಿಲ್ಲ ಎಂಬುವುದು ಸದ್ಯದ ಸುದ್ದಿ.

  ಬೇರೆಡೆ ಸಮಸ್ಯೆಯಾಗಿಲ್ಲ ಯಾಕೆ?

  ಬೇರೆಡೆ ಸಮಸ್ಯೆಯಾಗಿಲ್ಲ ಯಾಕೆ?

  'ಕೆಜಿಎಫ್ 2' ಸಿನಿಮಾ ಮಹಾರಾಷ್ಟ್ರ, ದೆಹಲಿ, ಆಂಧ್ರ-ತೆಲಂಗಾಣ, ತಮಿಳುನಾಡು, ಕೇರಳದಲ್ಲಿ ರಿಲೀಸ್ ಆಗಲಿದೆ. ಇಲ್ಲೆಲ್ಲಾ ಮಲ್ಟಿಪ್ಲೆಕ್ಸ್‌ನಿಂದ ಮೊದಲ ವಾರದ ಗಳಿಕೆಯಲ್ಲಿ ಶೇ.55ರಷ್ಟನ್ನು ನಿರ್ಮಾಪಕರಿಗೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಯಾಕೆ ಶೇ.50ರಷ್ಟು ನೀಡುತ್ತೀರಾ? ಎಂಬುದು ನಿರ್ಮಾಪಕರ ವಾದ. ಈ ಕಾರಣಕ್ಕೆ ಇನ್ನೂ ಮಲ್ಟಿಪ್ಲೆಕ್ಸ್‌ನಲ್ಲಿ ಬುಕಿಂಗ್ ಓಪನ್ ಆಗಿಲ್ಲ." ಅಂತ ಕರ್ನಾಟಕದ ಪ್ರದರ್ಶಕರೊಬ್ಬರು ಹೇಳುತ್ತಾರೆ.

  KGF 2 Ticket Price : 'ಕೆಜಿಎಫ್ ಚಾಪ್ಟರ್ 2' ಬಲು ದುಬಾರಿ, ಗಗನಕ್ಕೇರಿದ ಟಿಕೆಟ್ ಬೆಲೆKGF 2 Ticket Price : 'ಕೆಜಿಎಫ್ ಚಾಪ್ಟರ್ 2' ಬಲು ದುಬಾರಿ, ಗಗನಕ್ಕೇರಿದ ಟಿಕೆಟ್ ಬೆಲೆ

  ಹೇಗೆ ನಡೆಯುತ್ತೆ ಮಲ್ಟಿಪ್ಲೆಕ್ಸ್ ವ್ಯವಹಾರ?

  ಹೇಗೆ ನಡೆಯುತ್ತೆ ಮಲ್ಟಿಪ್ಲೆಕ್ಸ್ ವ್ಯವಹಾರ?

  ಕರ್ನಾಟಕದಲ್ಲಿರುವ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ವ್ಯವಹಾರಗಳು ಭಿನ್ನವಾಗಿರುತ್ತೆ. ಸಿಂಗಲ್ ಸ್ಕ್ರೀನ್‌ನಲ್ಲಿ ವಾರಕ್ಕೆ ಇಂತಿಷ್ಟು ಅಂತ ನಿರ್ಮಾಪಕರು ಥಿಯೇಟರ್‌ಗೆ ಬಾಡಿಗೆ ಕಟ್ಟುತ್ತಾರೆ. ಅದೇ ಮಲ್ಟಿಪ್ಲೆಕ್ಸ್‌ನಲ್ಲಿ ಹಾಗಲ್ಲ. ಸಿನಿಮಾ ಬಿಡುಗಡೆಯಾದ ಮೊದಲ ವಾರ ಗಳಿಸಿದ ಗಳಿಕೆಯಲ್ಲಿ ನಿರ್ಮಾಪಕರಿಗೆ ಹಾಗೂ ಮಲ್ಟಿಪ್ಲೆಕ್ಸ್‌ಗೆ ಶೇ. 50ರಂತೆ ಹಂಚಿಕೆಯಾಗುತ್ತೆ. 2ನೇ ವಾರ ನಿರ್ಮಾಪಕರಿಗೆ ಶೇ. 47.50 ಪಾಲು ಹೋಗುತ್ತೆ. ಅದೇ ಮೂರನೇ ದಿನ 45 ಪರ್ಸೆಂಟ್, ನಾಲ್ಕನೆ ವಾರ ಶೇ. 40, ಐದನೇ ವಾರ ಶೇ. 35, ಆರನೇ ವಾರ ಶೇ.30ರಷ್ಟು ಗಳಿಕೆ ಮಾತ್ರ ನಿರ್ಮಾಪಕರಿಗೆ ಸಲ್ಲಿಗೆಯಾಗುತ್ತೆ. ಇದು 'ಕೆಜಿಎಫ್‌ 2' ಅಂತಹ ದೊಡ್ಡ ಸಿನಿಮಾಗಳಿಗೆ ಭಾರಿ ನಷ್ಟ ಆಗುತ್ತೆ ಎನ್ನುವುದು ನಿರ್ಮಾಪಕರ ವಲಯದಲ್ಲಿ ಕೇಳಿಬರುತ್ತಿದೆ.

  English summary
  KGF 2 Producer And Multiplex Owners Disagreements Worries Yash fans. Know More,
  Wednesday, April 13, 2022, 16:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X