ಕೆಜಿಎಫ್, ಪುಷ್ಪ, ಆಚಾರ್ಯ, RRR: ಇಲ್ಲಿದೆ ರಿಲೀಸ್ ಲೆಕ್ಕಾಚಾರ

ಒಂದೊಂದೆ ರಾಜ್ಯಗಳಲ್ಲಿ ಥಿಯೇಟರ್‌ಗಳು ತೆರೆಯಲು ಅನುಮತಿ ನೀಡಲಾಗುತ್ತಿದೆ. ಚಿತ್ರಮಂದಿರದ ಬಾಗಿಲು ತೆಗೆಯಲಿ ಎಂದು ಕಾಯುತ್ತಿದ್ದ ಚಿತ್ರತಂಡಗಳು ಈಗ ರಿಲೀಸ್ ಬಗ್ಗೆ ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯ ನಿರೀಕ್ಷೆಯ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ.

ಕನ್ನಡದಲ್ಲಿ ಕೆಜಿಎಫ್ ಚಾಪ್ಟರ್ 2, ತೆಲುಗಿನಲ್ಲಿ ಪುಷ್ಪ, ಆರ್‌ಆರ್‌ಆರ್ ಸಿನಿಮಾ, ಆಚಾರ್ಯ, ರಾಧೆ ಶ್ಯಾಮ್, ತಮಿಳಿನಲ್ಲಿ ಅಣ್ಣಾತ್ತೆ, ಮಲಯಾಳಂನಲ್ಲಿ ಮರಕ್ಕರ್ ಅಂತಹ ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ದಿನಾಂಕಕ್ಕಾಗಿ ತಲೆಕೆಡಿಸಿಕೊಂಡಿದೆ.

ಸದ್ಯ ಆಗಸ್ಟ್ 15, ದಸರಾ ಹಬ್ಬ, ದೀಪಾವಳಿ ಹಾಗೂ ಕ್ರಿಸ್‌ಮಸ್ ಹಬ್ಬಗಳೇ ಸ್ಟಾರ್ಸ್ ಸಿನಿಮಾಗಳ ಟಾರ್ಗೆಟ್ ಆಗಿದೆ. ಇದನ್ನು ಬಿಟ್ಟರೆ ಮುಂದಿನ ವರ್ಷವೇ ದಿಕ್ಕು. ಹಾಗಾದ್ರೆ, ಯಾವ ಸಿನಿಮಾದ ಲೆಕ್ಕಾಚಾರ ಏನಿದೆ? ಮುಂದೆ ಓದಿ...

ಕೆಜಿಎಫ್ ಮುಂದೆ ಎರಡು ಆಯ್ಕೆ

ಕೆಜಿಎಫ್ ಮುಂದೆ ಎರಡು ಆಯ್ಕೆ

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2 ಬರಬೇಕಿತ್ತು. ಆದ್ರೀಗ ಹೊಸ ದಿನಾಂಕದ ಹುಡುಕಾಟದಲ್ಲಿದೆ ಚಿತ್ರತಂಡ. ಶೀಘ್ರದಲ್ಲೇ ಹೊಸ ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಪ್ರಶಾಂತ್ ನೀಲ್, ಹೊಂಬಾಳೆ ಫಿಲಂಸ್ ಪೋಸ್ಟರ್‌ವೊಂದು ರಿಲೀಸ್ ಮಾಡಿತ್ತು. ಕೆಜಿಎಫ್ ಸಿನಿಮಾ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 13 ಅಥವಾ ಕ್ರಿಸ್‌ಮಸ್ ಪ್ರಯುಕ್ತ ಡಿಸೆಂಬರ್ ಅಂತ್ಯಕ್ಕೆ ಬರುವ ಎರಡು ಆಯ್ಕೆ ಹೊಂದಿದೆ. ಇದರಲ್ಲಿ ಯಾವುದು ಅಂತಿಮವಾಗುತ್ತದೆ ಎನ್ನುವುದು ಸಹಜವಾಗಿ ಕುತೂಹಲ ಮೂಡಿಸಿದೆ.

ಕ್ರಿಸ್‌ಮಸ್‌ಗೆ ಪುಷ್ಪ

ಕ್ರಿಸ್‌ಮಸ್‌ಗೆ ಪುಷ್ಪ

ಕೆಜಿಎಫ್ ಚಾಪ್ಟರ್ 2 ರಿಲೀಸ್ ಮೇಲೆ ಉಳಿದ ಚಿತ್ರಗಳ ದಿನಾಂಕವೂ ಅವಲಂಬಿತವಾಗಿದೆ ಎನ್ನಬಹುದು. ಏಕಂದ್ರೆ ಕೆಜಿಎಫ್ ಮೊದಲ ಚಾಪ್ಟರ್ ಹಿಟ್ ಆದ್ಮೇಲೆ ಚಾಪ್ಟರ್ 2ರ ಮೇಲೆ ಹೆಚ್ಚು ನಿರೀಕ್ಷೆ ಇದೆ. ಹಾಗಾಗಿ, ಈ ಸಿನಿಮಾ ರಿಲೀಸ್ ಮೇಳೆ ಉಳಿದ ಚಿತ್ರಗಳ ಲೆಕ್ಕಾಚಾರ ನಿಂತಿದೆ. ಸದ್ಯದ ಮಾಹಿತಿ ಪ್ರಕಾರ, ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಕ್ರಿಸ್‌ಮಸ್‌ಗೆ ಬರುವ ತಯಾರಿಯಲ್ಲಿದೆ. ಪುಷ್ಪ ಸಹ ಪ್ಯಾನ್ ಇಂಡಿಯಾ ಸಿನಿಮಾ.

ಅಕ್ಟೋಬರ್‌ಗೆ ಆಚಾರ್ಯ

ಅಕ್ಟೋಬರ್‌ಗೆ ಆಚಾರ್ಯ

ಮೆಗಾಸ್ಟಾರ್ ಚಿರಂಜೀವಿ ಮತ್ತು ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿ ತಯಾರಾಗಿರುವ 'ಆಚಾರ್ಯ' ಸಿನಿಮಾವೂ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಎರಡ್ಮೂರು ದಿನಾಂಕ ಬದಲಿಸಿದೆ. ಈಗ ಹೊಸ ದಿನಾಂಕಕ್ಕಾಗಿ ಕಾಯುತ್ತಿರುವ ಚಿತ್ರತಂಡ ದಸರಾ ಹಬ್ಬವನ್ನು ಟಾರ್ಗೆಟ್ ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಆರ್‌ಆರ್‌ಆರ್‌ ಈ ವರ್ಷ ಅನುಮಾನ?

ಆರ್‌ಆರ್‌ಆರ್‌ ಈ ವರ್ಷ ಅನುಮಾನ?

ಈ ಹಿಂದೆ ಪ್ರಕಟಿಸಿದಂತೆ ಅಕ್ಟೋಬರ್ 13ಕ್ಕೆ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ತೆರೆಗೆ ಬರಬೇಕಿತ್ತು. ಕೋವಿಡ್ ಕಾರಣದಿಂದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಎಲ್ಲವೂ ವಿಳಂಬವಾಗಿದೆ. ಹಾಗಾಗಿ, ಅಕ್ಟೋಬರ್‌ನಲ್ಲಿ ಬಿಡುಗಡೆ ಸಾಧ್ಯವಿಲ್ಲ. ಹಾಗ್ನೋಡಿದ್ರೆ, ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆ ದಟ್ಟವಾಗಿ ಕಾಣ್ತಿದೆ.

ದೀಪಾವಳಿಗೆ ಅಣ್ಣಾತ್ತೆ

ದೀಪಾವಳಿಗೆ ಅಣ್ಣಾತ್ತೆ

ಈ ಹಿಂದೆ ಘೋಷಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ನವೆಂಬರ್ 4 ರಂದು ಅಣ್ಣಾತ್ತೆ ಚಿತ್ರ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ಸನ್ ಪಿಕ್ಚರ್ಸ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ.

Recommended Video

KGF 2 ರಿಲೀಸ್ ಡೇಟ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ Prashanth Neel | Filmibeat Kannada
ಆಗಸ್ಟ್ 12ಕ್ಕೆ ಮರಕ್ಕರ್

ಆಗಸ್ಟ್ 12ಕ್ಕೆ ಮರಕ್ಕರ್

ಐಎಂಡಿಬಿ ಪಟ್ಟಿಯಲ್ಲಿ ಅತಿ ಹೆಚ್ಚು ರೇಟಿಂಗ್ ಹೊಂದಿರುವ ಮಲಯಾಳಂ ಸಿನಿಮಾ ಮರಕ್ಕರ್ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಮರಕ್ಕರ್ ಸಿನಿಮಾ 2019ರಲ್ಲಿಯೇ ಪೂರ್ಣಗೊಂಡಿತ್ತು. ಅದೇ ವರ್ಷ ಸೆನ್ಸಾರ್ ಸಹ ಮುಗಿಸಿತ್ತು. 67ನೇ ರಾಷ್ಟ್ರ ಪ್ರಶಸ್ತಿ ಸಾಲಿನಲ್ಲಿ ಮರಕ್ಕರ್ ಚಿತ್ರಕ್ಕೆ ಮೂರು ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸ್ಪೆಷಲ್ ಎಫೆಕ್ಸ್ ಹಾಗೂ ಅತ್ಯುತ್ತಮ ವಸ್ತ್ರವಿನ್ಯಾಸಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

More from Filmibeat

English summary
KGF 2, Pushpa, Acharya, RRR : Here is the Big Budget Movies Release Calculation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X