For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ನಲ್ಲಿ ರವೀನಾ ಟಂಡನ್ ಖಡಕ್ ಲುಕ್ ಅನಾವರಣ

  |

  ಕೆಜಿಎಫ್ 2 ನಲ್ಲಿ ರವೀನಾ ಟಂಡನ್ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಹಲವರ ಕುತೂಹಲದ ವಿಷಯ.

  ಒಮ್ಮೆ, ರವೀನಾ ಟಂಡನ್ ರಾಜಕಾರಣಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಂದರೆ, ಮತ್ತೊಮ್ಮೆ ಇಲ್ಲ ರವೀನಾ ಟಂಡನ್ ಪೊಲೀಸ್ ಅಂತೆ ಎನ್ನುತ್ತಾರೆ. ಮತ್ತೊಮ್ಮೆ ಯಶ್ ಜೊತೆಗೆ ರವೀನಾ ಸಹ ಮತ್ತೊಂದು ಗ್ಯಾಂಗ್‌ನ ಲೀಡರ್‌ ಅಂತೆ ಎಂತಲೂ ಹೇಳುತ್ತಾರೆ.

  'ಕೆಜಿಎಫ್-2 ಟೀಸರ್ ಬೇಕು'...: ಟ್ವಿಟ್ಟರ್‌ನಲ್ಲಿ #WeNeedKGF2Teaser ಅಭಿಯಾನ'ಕೆಜಿಎಫ್-2 ಟೀಸರ್ ಬೇಕು'...: ಟ್ವಿಟ್ಟರ್‌ನಲ್ಲಿ #WeNeedKGF2Teaser ಅಭಿಯಾನ

  ಇಷ್ಟು ದಿನ ರವೀನಾ ಟಂಡನ್ ಪಾತ್ರದ ಬಗ್ಗೆ ಮಾಹಿತಿ ಹೊರಬಿಡದಿದ್ದ ಕೆಜಿಎಫ್ 2 ತಂಡ ಇಂದು ಇದ್ದಕ್ಕಿದ್ದಂತೆ ರವೀನಾ ಟಂಡನ್ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿಯೇ ಗೊತ್ತಾಗುತ್ತಿದೆ ರವೀನಾ ಟಂಡನ್ ರದ್ದು ಸಿನಿಮಾದಲ್ಲಿ ಯಾವ ಬಗೆಯ ಪಾತ್ರವೆಂಬುದು.

  ಕೆಜಿಎಫ್ ಮೊದಲ ಭಾಗದಲ್ಲಿ ರವೀನಾ ಪಾತ್ರ!

  ಕೆಜಿಎಫ್ ಮೊದಲ ಭಾಗದಲ್ಲಿ ರವೀನಾ ಪಾತ್ರ!

  ರವೀನಾ ಟಂಡನ್, ಕೆಜಿಎಫ್ 2 ಸಿನಿಮಾದಲ್ಲಿ ರಾಜಕಾರಣಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಕೆಜಿಎಫ್ ಮೊದಲ ಭಾಗದ ಅಂತ್ಯದಲ್ಲಿ ಮಹಿಳಾ ರಾಜಕಾರಣಿಯೊಬ್ಬರು ನರಾಚಿಗೆ ಮಿಲಿಟರಿ ನುಗ್ಗಿಸಲು ಆದೇಶ ಸಹಿ ಮಾಡುವ ದೃಶ್ಯವೊಂದಿದೆ. ಆದೇಶಕ್ಕೆ ಸಹಿ ಹಾಕುವ ಮಹಿಳೆ ರವೀನಾ ಟಂಡನ್ ಎಂದು ಸುಲಭವಾಗಿ ಊಹಿಸಬಹುದಾಗಿದೆ.

  ಕೆಜಿಎಫ್ ನಾಯಕಿಗೆ ಹುಟ್ಟುಹಬ್ಬ ಸಂಭ್ರಮ: ಕತೆಯ ಬಗ್ಗೆ ಸುಳಿವು ಕೊಟ್ಟ ಪ್ರಶಾಂತ್ ನೀಲ್!ಕೆಜಿಎಫ್ ನಾಯಕಿಗೆ ಹುಟ್ಟುಹಬ್ಬ ಸಂಭ್ರಮ: ಕತೆಯ ಬಗ್ಗೆ ಸುಳಿವು ಕೊಟ್ಟ ಪ್ರಶಾಂತ್ ನೀಲ್!

  ಜಗಮೆಚ್ಚಿದ ನಿರ್ದೇಶಕ Rajamouli ಮೇಲೆ ಕಂಪ್ಲೇಂಟ್ | Filmibeat Kannada
  ರವೀನಾ ಪಾತ್ರದ ಹೆಸರು ರಮಿಕಾ ಸೇನ್

  ರವೀನಾ ಪಾತ್ರದ ಹೆಸರು ರಮಿಕಾ ಸೇನ್

  ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಟಂಡನ್ ಪಾತ್ರದ ಹೆಸರು ರಮಿಕಾ ಸೇನ್. ರವೀನಾ ಟಂಡನ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ, ರವೀನಾ ಪಾರ್ಲಿಮೆಂಟ್‌ನಲ್ಲಿ ಕುಳಿತಿರುವ ಚಿತ್ರವಿದೆ. ಪೋಸ್ಟರ್‌ನಲ್ಲಿ ರವೀನಾ ಅತ್ಯಂತ ಗಂಭೀರವಾಗಿ ಕಾಣುತ್ತಿದ್ದಾರೆ.

  ಹೀರೋ-ವಿಲನ್ ಎರಡೂ ನಾನೆ: ರವೀನಾ

  ಹೀರೋ-ವಿಲನ್ ಎರಡೂ ನಾನೆ: ರವೀನಾ

  ರವೀನಾ ಟಂಡನ್ ಅವರೇ ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಂತೆ, ಕೆಜಿಎಫ್ 2 ದ ವಿಲನ್ ಹಾಗೂ ಹೀರೋ ಎರಡೂ ಅವರೇ ಅಂತೆ. ರವೀನಾ ನಿರ್ವಹಿಸಿರುವ ರಮಿಕಾ ಸೇನ್ ಪಾತ್ರ ಎರಡು ಭಿನ್ನ ಶೇಡ್‌ಗಳನ್ನು ಹೊಂದಿದೆ ಎಂಬುದು ಖಾತ್ರಿ.

  KGF-2 ಚಿತ್ರೀಕರಣ: ಹೈದರಾಬಾದ್ ಏರ್ ಪೋರ್ಟ್ ನಲ್ಲಿ ರಾಕಿ ಭಾಯ್ ಯಶ್KGF-2 ಚಿತ್ರೀಕರಣ: ಹೈದರಾಬಾದ್ ಏರ್ ಪೋರ್ಟ್ ನಲ್ಲಿ ರಾಕಿ ಭಾಯ್ ಯಶ್

  ಹೈದರಾಬಾದ್‌ನಲ್ಲಿ ಚಿತ್ರೀಕರಣ

  ಹೈದರಾಬಾದ್‌ನಲ್ಲಿ ಚಿತ್ರೀಕರಣ

  ಇನ್ನು ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಈಗಷ್ಟೆ ಮಂಗಳೂರಿನಲ್ಲಿ ಮುಗಿದಿದ್ದು, ಮುಂದಿನ ಚಿತ್ರೀಕರಣಕ್ಕೆ ಹೈದರಾಬಾದ್‌ಗೆ ತೆರಳಿದೆ. ನಟ ಸಂಜಯ್ ದತ್ ಸಹ ಗುಣಮುಖರಾಗಿದ್ದು, ಕೆಜಿಎಫ್ 2 ಚಿತ್ರೀಕರಣದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

  English summary
  On Raveena Tandon's birthday her character's poster released by KGF 2 team. She is acting in politician role in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X