twitter
    For Quick Alerts
    ALLOW NOTIFICATIONS  
    For Daily Alerts

    50 ದಿನಗಳತ್ತ 'ಕೆಜಿಎಫ್ 2' ಯಶಸ್ವಿ ಓಟ!

    |

    ಕನ್ನಡದ ಹೆಮ್ಮೆಯ ಸಿನಿಮಾ 'ಕೆಜಿಎಫ್ 2' ರಿಲೀಸ್ ಆಗಿ ಒಂದು ತಿಂಗಳು ಕಳೆದಿದೆ. 'ಕೆಜಿಎಫ್ 2' ಸಿನಿಮಾದ ಬಳಿಕ ಸಾಲು, ಸಾಲು ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಚಿತ್ರಗಳಿಂದ 'ಕೆಜಿಎಫ್ 2' ಚಿತ್ರ್ಕಕೆ ಯಾವುದೇ ಹಾನಿ ಉಂಟಾಗಿಲ್ಲ. ತಿಂಗಳ ಬಳಿಕವೂ ಸಿನಿಮಾ ಭರ್ಜರಿಯಾಗಿ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಾ ಇದೆ.

    ಸಿನಿಮಾ ಮಂದಿರದಲ್ಲಿ ಎಷ್ಟು ದಿನ ಸಿನಿಮಾ ಇತ್ತು ಎನ್ನುವುದಕ್ಕಿಂತಲೂ ಈಗ ಸಿನಿಮಾ ಎಷ್ಟು ಗಳಿಕೆ ಕಂಡಿದೆ. ಎಷ್ಟು ಜನರನ್ನು ರೀಚ್ ಆಗಿದೆ ಎನ್ನುವುದೇ ಮುಖ್ಯ. ಅದರಲ್ಲೂ ದೊಡ್ಡ ಬಜೆಟ್ ಸ್ಟಾರ್‌ಗಳ ಸಿನಿಮಾಗಳು ಲಾಂಗ್ ರನ್ ಆಗುವುದು ಕಡಿಮೆ. ರಿಲೀಸ್ ಆದ ಒಂದು ಎರಡು ವಾರಗಳಲ್ಲೇ ಬಾಕ್ಸಫೀಸ್ ಬಾಚಿಕೊಂಡು ಸಿನಿಮಾಗಳು ಮಾಯವಾಗಿ ಬಿಡುತ್ತವೆ.

    ಕೆಜಿಎಫ್ 2: ಒಟಿಟಗೆ ಬಂದ್ರೂ ಕಲೆಕ್ಷನ್ ಮಾತ್ರ ಕೋಟಿ ಲೆಕ್ಕದಲ್ಲಿ!ಕೆಜಿಎಫ್ 2: ಒಟಿಟಗೆ ಬಂದ್ರೂ ಕಲೆಕ್ಷನ್ ಮಾತ್ರ ಕೋಟಿ ಲೆಕ್ಕದಲ್ಲಿ!

    ಆದರೆ ಇದು ಕನ್ನಡದ 'ಕೆಜಿಎಫ್ 2' ಸಿನಿಮಾಗೆ ಮಾತ್ರ ಅನ್ವಯ ಆಗುವುದಿಲ್ಲ. ಯಾಕೆಂದ್ರೆ 'ಕೆಜಿಎಫ್ 2' ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನ, ವಿಶೇಷ. ಮೂರೇ ದಿನದಲ್ಲಿ ಸಿನಿಮಾದ ಭವಿಷ್ಯ ಅಳೆಯುವ ಈ ಕಾಲಘಟ್ಟದಲ್ಲಿ 'ಕೆಜಿಎಫ್ 2' ಮಾತ್ರ ದೇಶದಾದ್ಯಂತ 50 ದಿನಗಳನ್ನು ಪೂರೈಸುವತ್ತ ಯಶಸ್ವಿ ಓಟ ನಡೆಸಿದೆ.

    ರಾಕಿಂಗ್ ಸ್ಟಾರ್ ಯಶ್ ಯಶಸ್ಸಿನ ಸೂತ್ರ ಇದೆ ನೋಡಿ!ರಾಕಿಂಗ್ ಸ್ಟಾರ್ ಯಶ್ ಯಶಸ್ಸಿನ ಸೂತ್ರ ಇದೆ ನೋಡಿ!

    50 ದಿನಗಳತ್ತ 'ಕೆಜಿಎಫ್ 2' ಭರ್ಜರಿ ಓಟ!

    50 ದಿನಗಳತ್ತ 'ಕೆಜಿಎಫ್ 2' ಭರ್ಜರಿ ಓಟ!

    'ಕೆಜಿಎಫ್ 2' ಏಪ್ರಿಲ್ 14ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಿದೆ. ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟ ಕ್ಷಣದಿಂದ ಶುರುವಾದ ಅಬ್ಬರ ಇನ್ನೂ ಕೂಡ ನಿಂತಿಲ್ಲ. 'ಕೆಜಿಎಫ್ 2' 30 ದಿನವನ್ನು ಚಿತ್ರಮಂದಿರಲ್ಲಿ ಯಶಸ್ವಿಯಾಗಿ ಪೂರೈಸಿದೆ. ಇನ್ನೂ ಕೂಡ ಈ ಸಿನಿಮಾವನ್ನು ನೋಡುವರ ಸಂಖ್ಯೆ ಕಡಿಮೆ ಆಗಿಲ್ಲ. ವೀಕೆಂಡ್ ಬಂತೂ ಅಂದರೆ ಸಾಕು, ಹೆಚ್ಚು-ಹೆಚ್ಚು ಟಿಕೆಟ್ ಬುಕ್ಕಿಂಗ್ ಆಗುತ್ತಿದೆ. ಹಾಗಾಗಿ 'ಕೆಜಿಎಫ್ 2' ಯಶಸ್ವಿಯಾಗಿ 50 ದಿನಗಳನ್ನು ಪೂರೈಸುವುದರಲ್ಲಿ ಯಾವುದೇ ಅನುಮಾನವಿಲ್ಲ.

    ಒಟಿಟಿಯಲ್ಲಿ 'ಕೆಜಿಫ್ 2' ರಿಲೀಸ್!

    ಒಟಿಟಿಯಲ್ಲಿ 'ಕೆಜಿಫ್ 2' ರಿಲೀಸ್!

    ಇನ್ನು ಮತ್ತೊಂದು ವಿಶೇಷ ಅಂದರೆ 'ಕೆಜಿಎಫ್ 2' ಸಿನಿಮಾ ಈಗಾಗಲೇ ಒಟಿಟಿಯಲ್ಲಿ ರಿಲೀಸ್ ಆಗಿದೆ. ಸಾಕಷ್ಟು ಮಂದಿ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ. ಆದರೂ ಕೂಡ 'ಕೆಜಿಎಫ್ 2' ಚಿತ್ರಕ್ಕೆ ಚಿತ್ರಮಂದಿರಗಳಿಲ್ಲಿ ಬೇಡಿಕೆ ಕಡಿಮೆ ಆಗಿಲ್ಲ. ನೂರಾರು ಚಿತ್ರಮಂದಿರಗಳಲ್ಲಿ ಇನ್ನೂ ಕೂಡ 'ಕೆಜಿಎಫ್ 2' ಉತ್ತಮ ಪ್ರದರ್ಶನ ಕಾಣುತ್ತಾ ಇದೆ.

    1500 ಕೋಟಿ ಗಳಿಕೆಯತ್ತ 'ಕೆಜಿಎಫ್ 2' ಓಟ!

    1500 ಕೋಟಿ ಗಳಿಕೆಯತ್ತ 'ಕೆಜಿಎಫ್ 2' ಓಟ!

    'ಕೆಜಿಎಫ್ 2' ಗಳಿಕೆಯ ವಿಚಾರಕ್ಕೆ ಬರುವುದಾದರೆ, ಸಾವಿರ ಕೋಟಿ ಗಳಿಕೆ ಕಂಡ ಈ ಸಿನಿಮಾದ ಗಳಿಕೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. 'ಕೆಜಿಎಫ್ 2' ರಿಲೀಸ್ ಆಗಿ 39 ದಿನ ಆಗಿದೆ. ಆದರೂ ಪ್ರತೀ ದಿನವೂ ಚಿತ್ರದ ಒಟ್ಟಾರೆ ಗಳಿಕೆ ಲೆಕ್ಕಾಚಾರ ಮಾತ್ರ ಕೋಟಿ ಲೆಕ್ಕದಲ್ಲೇ ಇದೆ. 39ನೇ ದಿನಕ್ಕೆ ಕೆಜಿಎಫ್ 2 ಚಿತ್ರ ಗಳಿಕೆ 1225.15 ಕೋಟಿ ರೂ ಆಗಿದೆ. ಈ ಮೊತ್ತ ಇನ್ನು ಹೆಚ್ಚಾಗಲಿದೆ.

    ಜವಾಬ್ದಾರಿ ಹೆಚ್ಚಿಸಿದ 'ಕೆಜಿಎಫ್ 2'!

    ಜವಾಬ್ದಾರಿ ಹೆಚ್ಚಿಸಿದ 'ಕೆಜಿಎಫ್ 2'!

    'ಕೆಜಿಎಫ್ 2' ಸಿನಿಮಾ ಪ್ಯಾನ್ ಇಂಡಿಯಾ ಹೆಸರಲ್ಲಿ ರಿಲೀಸ್ ಆಗಿರಬಹುದು. ಆದರೆ ಈ ಸಿನಿಮಾ ಮೂಲಕ ಕನ್ನಡದ. ಕನ್ನಡದ ಒಂದು ಸಿನಿಮಾ ಈ ಮಟ್ಟಿಗೆ ಹೆಸರು, ಹೆಗ್ಗಳಿಕೆ ಗಳಿಸಿರುವುದು ಕನ್ನಡಕ್ಕೆ ಹೆಮ್ಮೆಯೇ ಸರಿ. ಇದರೊಂದಿಗೆ ಕನ್ನಡ ಚಿತ್ರರಂಗದ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮುಂದೆ ಬರುವ ಪ್ಯಾನ್ ಇಂಡಿಯಾ ಸಿನಿಮಾಗಳ ಮೇಲೆ ವಿಶ್ವದಾದ್ಯಂತ ನಿರೀಕ್ಷೆ ಹೆಚ್ಚಾಗಿದೆ. ಹಾಗಾಗಿ ಎಲ್ಲಾ ಸಿನಿಮಾಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ.

    English summary
    kGF 2 Running SuccessFully Towards 50 days, Know More
    Monday, May 23, 2022, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X