ಮನೆ ಬಳಿಗೆ ಬಂದ ಫ್ಯಾನ್ಸ್‌ಗೆ ಯಶ್ 'ಆಟೋಗ್ರಾಫ್': ಮೊದಲ ಅಕ್ಷರದಲ್ಲೇ ಅಡಗಿದೆ ಅದೃಷ್ಟ!

By ಫಿಲ್ಮಿಬೀಟ್ ಡೆಸ್ಕ್

ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಬೇಕು. ಅವರಿಂದ ಒಂದು ಆಟೋಗ್ರಾಫ್ ತೆಗೆದುಕೊಳ್ಳಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಆಸೆ. ಸ್ಟಾರ್‌ಗಳಿಗೂ ಅಷ್ಟೇ ತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ಕೊಡಬೇಕು ಅನ್ನೋ ಆಸೆ ಇದ್ದೇ ಇದೆ.

ಹಿಂದಿನಿಂದಲೂ ಅಭಿಮಾನಿಗಳು ಹಾಗೂ ಸ್ಟಾರ್‌ಗಳ ನಡುವೆ ಇಂತಹದ್ದೊಂದು ಅಭ್ಯಾಸ ನಡೆದುಕೊಂಡು ಬರುತ್ತಿದೆ. ಈ ವೇಳೆ ಸೆಲೆಬ್ರೆಟಿಗಳು ಹಾಕು ಸಹಿ ಎಲ್ಲರ ಗಮನ ಸೆಳೆದು ಬಿಡುತ್ತೆ. ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿಗಳಿಗೆ ನೀಡಿದ ಆಟ್ರೋಗ್ರಾಫ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೆಲ್ಪಿ ಯುಗದಲ್ಲಿ ಆಟೋಗ್ರಾಫ್ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಆದರೂ, ಯಶ್ ನೀಡಿದ 'ಆಟೋಗ್ರಾಫ್' ಅನ್ನು ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ. ಹಾಗಿದ್ದರೆ, ಈ ಆಟೋಗ್ರಾಫ್ ವಿಶೇಷತೆ ಏನು? ಅಭಿಮಾನಿಗಳು ಶೇರ್ ಮಾಡುತ್ತಿರುವ ಫೋಟೊಗಳು ಹೇಗಿವೆ? ಡಿಟೈಲ್ಸ್‌ಗಾಗಿ ಮುಂದೆ ಓದಿ.

ಯಶ್ 'ಆಟೋಗ್ರಾಫ್' ವೈರಲ್

ಯಶ್ 'ಆಟೋಗ್ರಾಫ್' ವೈರಲ್

ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳನ್ನು ಭೇಟಿಯಾಗಿದ್ದರು. ಈ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಕ್ಯೂಟ್ ಗಿಫ್ಟ್‌ಗಳನ್ನು ಕೊಟ್ಟು ಸಂಭ್ರಮಿಸಿದ್ದಾರೆ. ಈ ವೇಳೆ ಕೆಲವರಿಗೆ ರಾಕಿ ಭಾಯ್ ಸೆಲ್ಫಿ ಸಿಕ್ಕಿದೆ. ಮತ್ತೆ ಕೆಲವರಿಗೆ ಆಟೋಗ್ರಾಫ್ ಕೂಡ ಸಿಕ್ಕಿದೆ. ಇದರೊಂದಿಗೆ ಈ ಹಿಂದೆ ಸಿಕ್ಕಿರೋ ಆಟೋಗ್ರಾಫ್‌ ಅನ್ನೂ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಯಶ್ ಹಾಕಿದ ಅದೇ ಆಟೋಗ್ರಾಫ್ ಎಲ್ಲರ ಗಮನ ಸೆಳೆಯುತ್ತಿದೆ.

'ನಿಮ್ಮ ಯಶ್' ಆಟೋಗ್ರಾಫ್ ಸ್ಪೆಷಾಲಿಟಿ ಏನು?

'ನಿಮ್ಮ ಯಶ್' ಆಟೋಗ್ರಾಫ್ ಸ್ಪೆಷಾಲಿಟಿ ಏನು?

ರಾಕಿಂಗ್ ಸ್ಟಾರ್ ಯಶ್ ಆಟೋಗ್ರಾಫ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳ ಫೋನ್ ಮೇಲೆ, ಫೋಟೊಗಳ ಮೇಲೆ, ಕಾಗದದ ಮೇಲೆ 'ನಿಮ್ಮ ಯಶ್' ಅಂತ ರಾಕಿ ಭಾಯ್ ಸಹಿ ಹಾಕಿ ಕೊಟ್ಟಿದ್ದಾರೆ. ಅಷ್ಟಕ್ಕೂ ಯಶ್ ಅಂತ ಬರೆದಿರೋ ಅಕ್ಷರದಲ್ಲೇ ಅದೃಷ್ಟ ಅಡಗಿದೆ ಅಂತ ಸಿಗ್ನೇಚರ್ ಎಕ್ಸ್‌ಪರ್ಟ್‌ಗಳು ಹೇಳುತ್ತಾರೆ. ಯಶ್ ಅಂತ ಬರೆದ ಆಟೋಗ್ರಾಫ್‌ನ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಪದ ಸೇರಿಸಿ ಮೊದಲ ಅಕ್ಷರ ರಚಿಸಲಾಗಿದೆ. ಇದು ಅದೃಷ್ಟದ ಸಂಕೇತ ಅನ್ನೋದು ಕೆಲವರ ಅಭಿಪ್ರಾಯ. ಇಲ್ಲಿ 'ಯ' ಅಕ್ಷರದ ಒಳಗೆ 'Y' ಕೂಡ ಸೇರಿಕೊಂಡಿರೋದು ವಿಶೇಷ.

ಅಭಿಮಾನಿಗಳ ಭೇಟಿ ಹಿನ್ನೆಲೆ ಏನು?

ಅಭಿಮಾನಿಗಳ ಭೇಟಿ ಹಿನ್ನೆಲೆ ಏನು?

ರಾಕಿಂಗ್ ಸ್ಟಾರ್ ಯಶ್ ಇದೇ ತಿಂಗಳು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ, ಅಂದು ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನಿನ್ನೆ(ಜನವರಿ 03) ತಮ್ಮ ನೆಚ್ಚಿನ ಅಭಿಮಾನಿಗಳನ್ನು ತಮ್ಮ ನಿವಾಸದಲ್ಲಿಯೇ ಭೇಟಿಯಾಗಿದ್ದಾರೆ. ರಾಕಿ ಭಾಯ್ ಅನ್ನು ನೋಡುವುದಕ್ಕೆ ಅಭಿಮಾನಿಗಳು ಕೂಡ ಕ್ಯೂನಲ್ಲಿ ನಿಂತಿದ್ದರು.

'ಯಶ್ 19' ಯಾವಾಗ?

'ಯಶ್ 19' ಯಾವಾಗ?

'ಕೆಜಿಎಫ್ 2' ಬ್ಲಾಕ್ ಬಸ್ಟರ್ ಸಿನಿಮಾ ಬಳಿಕ ಯಶ್ ಮುಂದಿನ ಯಾವುದು? ಅನ್ನೋದನ್ನು ಕುತೂಹಲದಿಂದ ಫ್ಯಾನ್ಸ್ ಎದುರು ನೋಡಿತ್ತಿದ್ದಾರೆ. ಆದರೆ, ಯಶ್ ಮಾತ್ರ ಇನ್ನೂ 19ನೇ ಸಿನಿಮಾ ಅನೌನ್ಸ್ ಮಾಡಿಲ್ಲ. ಅಲ್ಲದೆ ಸಿನಿಮಾ ಬಗ್ಗೆ ಸುಳಿವು ಕೂಡ ನೀಡಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡಬಹುದು ಎಂದು ನಿರೀಕ್ಷೆ ಎಲ್ಲರಲ್ಲೂ ಮನೆ ಮಾಡಿದೆ.

More from Filmibeat

English summary
KGF 2 Star Rocking Star Yash Autograph And Highlights Of the Sign, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X