twitter
    For Quick Alerts
    ALLOW NOTIFICATIONS  
    For Daily Alerts

    ಪ್ಯಾನ್‌ ಇಂಡಿಯಾ ಸ್ಟಾರ್ ಯಶ್ 14 ವರ್ಷಗಳ ಸಿನಿಜರ್ನಿಯಲ್ಲಿ ಸಿಕ್ಕ ಟರ್ನಿಂಗ್ ಪಾಯಿಂಟ್ ಎಷ್ಟು?

    |

    ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್. ಹೀರೊ ಆಗಲೇಬೇಕು ಅಂತ ಬಂದಿದ್ದ ಯಶ್ ಹಂತ ಹಂತವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. 14 ವರ್ಷಗಳ ಹಿಂದೆ ಕೇವಲ ಯಶ್ ಆಗಿ ಎಂಟ್ರಿ ಕೊಟ್ಟಿದ್ದ ನಟ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ.

    ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನ ಯಶ್ ರಂಗಭೂಮಿ ಪ್ರವೇಶ ಮಾಡಿದ್ದರು. ಅಲ್ಲಿಂದ ಧಾರಾವಾಹಿಗಳಿಗೆ ಎಂಟ್ರಿ ಕೊಟ್ಟು, ಆಮೇಲೆ ಸಿನಿಮಾ ಕಡೆ ಮುಖ ಮಾಡಿದ್ದರು. ಹೀಗೆ ಹಂತ ಹಂತವಾಗಿ ಬೆಳೆದು ಬಂದ ಯಶ್, ಈ 14 ವರ್ಷಗಳಲ್ಲಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬೆಳೆದು ನಿಂತಿದ್ದಾರೆ.

    Exclusive: ನರ್ತನ್-ಯಶ್ ಸಿನಿಮಾ ಪೋಸ್ಟ್‌ಪೋನ್: ರಾಕಿ ಭಾಯ್ 19ನೇ ಸಿನಿಮಾದ ಕಥೆಯೇನು?Exclusive: ನರ್ತನ್-ಯಶ್ ಸಿನಿಮಾ ಪೋಸ್ಟ್‌ಪೋನ್: ರಾಕಿ ಭಾಯ್ 19ನೇ ಸಿನಿಮಾದ ಕಥೆಯೇನು?

    ಅಷ್ಟಕ್ಕೂ ಪ್ಯಾನ್‌ ಇಂಡಿಯಾ ಸೂಪರ್‌ ಸ್ಟಾರ್ ಆಗಿ ಬೆಳೆದು ನಿಂತಿರೋ ಯಶ್‌ ಸಿನಿ ಜರ್ನಿಯಲ್ಲಿ ಸಿಕ್ಕ ಟರ್ನಿಂಗ್ ಪಾಯಿಂಟ್‌ಗಳು ಯಾವುವು? ದಿಗ್ಗಜರ ನಡುವೆ ಸೂಪರ್‌ಸ್ಟಾರ್ ಆಗಿ ಬೆಳೆದು ಬಂದಿದ್ದು ಹೇಗೆ? ಅನ್ನೋದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ.

    ಮೊದಲ ಸಿನಿಮಾ 'ಜಂಬದ ಹುಡುಗಿ'

    ಮೊದಲ ಸಿನಿಮಾ 'ಜಂಬದ ಹುಡುಗಿ'

    ಯಶ್ 'ಮೊಗ್ಗಿನ ಮನಸು' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ ಅಂದುಕೊಂಡಿದ್ದರೂ, ಯಶ್ ಮೊದಲ ಸಿನಿಮಾ 'ಜಂಬದ ಹುಡುಗಿ'. ಈ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಬಳಿಕ ಯಶ್ 'ಮೊಗ್ಗಿನ ಮೊನಸು' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಡು ಹಾಗೂ ಕೆಲವು ದೃಶ್ಯಗಳಲ್ಲಿ ಯಶ್ ನಟಿಸಿದ್ದರು. ಈ ಸಿನಿಮಾ ಬಳಿಕ ಯಶ್ ನಾಯಕನಾಗುವ ಕನಸು ನನಸಾಗುತ್ತಾ ಮುಂದೆ ಸಾಗಿ ಬಂತು.

    ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್‌ಗೆ ಶುಭ ಕೋರಲು 'ಕೆಜಿಎಫ್ 2' ಡೈಲಾಗ್ ಬಳಸಿದ ವಿಂಬಲ್ಡನ್‌!ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್‌ಗೆ ಶುಭ ಕೋರಲು 'ಕೆಜಿಎಫ್ 2' ಡೈಲಾಗ್ ಬಳಸಿದ ವಿಂಬಲ್ಡನ್‌!

    ಬಿಗ್ ಬ್ರೇಕ್ ಸಿಕ್ಕಿರಲಿಲ್ಲ

    ಬಿಗ್ ಬ್ರೇಕ್ ಸಿಕ್ಕಿರಲಿಲ್ಲ

    'ರಾಕಿ' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಹೀರೊ ಆದರೂ, ಯಶ್‌ಗೆ ಸಕ್ಸಸ್ ಸಿಗಲಿಲ್ಲ. ಇಲ್ಲಿಂದ ಸುಮಾರು 6 ಸಿನಿಮಾಗಳಲ್ಲಿ ಯಶ್ ಲೀಡ್‌ ರೋಲ್‌ನಲ್ಲಿಯೇ ನಟಿಸಿದ್ದರು. ಆದರೂ, ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡರಲಿಲ್ಲ. ಯಶ್ ಹೀರೊ ಆಗಿ ಮಿಂಚಿದ್ದರು. ಸ್ಯಾಂಡಲ್‌ವುಡ್ ಯಶ್ ಉದಯೋನ್ಮುಕ ನಟನಾಗಿ ಗುರುತಿಸಿಕೊಂಡಿದ್ದರು. ಕೊನೆಗೆ ಯಶ್ ಸಿನಿ ಜರ್ನಿ ಮೊದಲ ಸಕ್ಸಸ್ ಅಥವಾ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದು 'ಕಿರಾತಕ'.

    ಯಶ್‌ಗೆ 'ಕಿರಾತಕ' ಟರ್ನಿಂಗ್ ಪಾಯಿಂಟ್

    ಯಶ್‌ಗೆ 'ಕಿರಾತಕ' ಟರ್ನಿಂಗ್ ಪಾಯಿಂಟ್

    ಯಶ್ ಸಿನಿ ಜರ್ನಿ ಟರ್ನಿಂಗ್ ಪಾಯಿಂಟ್ ಅಂತ ಸಿಕ್ಕಿದ್ದು 'ಕಿರಾತಕ' ಹಳ್ಳಿ ಸೊಗಡಿನ ಈ ಕಥೆಗೆ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಮಂಡ್ಯ ಭಾಗದ ಕಥೆಯಲ್ಲಿ ಯಶ್ ಮಿಂಚಿದ್ದರು. ಸಿನಿಮಾ ಬಾಕ್ಸಾಫೀಸ್‌ನಲ್ಲೂ ಸೂಪರ್‌ ಹಿಟ್ ಆಗಿತ್ತು. ಅಂದಿನಿಂದ ಯಶ್ ಸ್ಯಾಂಡಲ್‌ವುಡ್‌ಗೆ 'ಕಿರಾತಕ'ನಾಗಿಯೇ ಚಿರಪರಿಚಿತ. ಇಲ್ಲಿಂದ ಸ್ಯಾಂಡಲ್‌ವುಡ್‌ ಕೂಡ ಯಶ್ ಸಿನಿ ಜರ್ನಿಯನ್ನು ಗಂಭೀರವಾಗಿ ಪರಿಗಣಿಸಿತ್ತು. ಇಲ್ಲಿಂದ ಸೋಲೊ ಹೀರೊ ಯಶ್ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದ್ದವು. ಮತ್ತೆ ಆರು ಸಿನಿಮಾಗಳಾದ ಮೇಲೆ ಎರಡನೇ ಟರ್ನಿಂಗ್ ಪಾಯಿಂಟ್ ಸಿಕ್ಕಿತ್ತು.

    2ನೇ ಟರ್ನಿಂಗ್ ಪಾಯಿಂಟ್ ಯಾವುದು?

    2ನೇ ಟರ್ನಿಂಗ್ ಪಾಯಿಂಟ್ ಯಾವುದು?

    ಇಷ್ಟೊತ್ತಿಗಾಗಲೇ ರಾಕಿ ಬಾಯ್‌ 'ಗೂಗ್ಲಿ' ಹಾಕಿದ್ದೂ ಆಗಿತ್ತು. 'ರಾಜಹುಲಿ'ಯಾಗಿ ಘರ್ಜಿಸಿದ್ದೂ ಆಗಿತ್ತು. 'ಗಜಕೇಸರಿ' ಅವತಾರವೆತ್ತಿದ್ದೂ ಆಗಿತ್ತು. ಆದರೆ, 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ಯಶ್‌ಗೆ ಎರಡನೇ ಟರ್ನಿಂಗ್ ಪಾಯಿಂಟ್ ಕೊಟ್ಟ ಸಿನಿಮಾ. ಯಾಕಂದ್ರೆ, ಗಡಿ ಭಾಗಗಳಲ್ಲಿ ಕನ್ನಡ ಸಿನಿಮಾ ಓಡಲ್ಲ ಎನ್ನುವ ಆರೋಪವಿತ್ತು. ಹೀಗಾಗಿ ಯಶ್ ಗಡಿ ಭಾಗಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಿದ್ದರು. ಅಲ್ಲಿ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಕಲೆಕ್ಷನ್ ಆಗಿತ್ತು. ಇಂಡಸ್ಟ್ರಿ ರೆಕಾರ್ಡ್ ಆಯ್ತು. ಅಲ್ಲಿವರೆಗೂ ಇದ್ದ 'ಮುಂಗಾರು ಮಳೆ' ದಾಖಲೆಯನ್ನು ಉಡೀಸ್ ಮಾಡಿತ್ತು. ಇದು ಯಶ್‌ಗೆ ಸಿಕ್ಕ ಮೇಜರ್ ಸಕ್ಸಸ್.

    3ನೇ ಟರ್ನಿಂಗ್ ಪಾಯಿಂಟ್ 'ಕೆಜಿಎಫ್'

    3ನೇ ಟರ್ನಿಂಗ್ ಪಾಯಿಂಟ್ 'ಕೆಜಿಎಫ್'

    'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ಬಳಿಕ ಯಶ್ ರೇಂಜ್ ಬದಲಾಗಿತ್ತು. ಕರ್ನಾಟಕದ ಗಡಿ ದಾಟುವ ಸಾಹಸಕ್ಕೆ ಮುಂದಾಗಿದ್ದರು. ಅದರ ಪ್ರಯತ್ನವೇ 'ಕೆಜಿಎಫ್ ಚಾಪ್ಟರ್ 1'. ಈ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ಇಂದು ಯಶ್‌ಗೆ ಪ್ಯಾನ್‌ ಇಂಡಿಯಾ ಪಟ್ಟ ಕೊಟ್ಟಿದೆ. ಈ 14 ವರ್ಷಗಳಲ್ಲಿ ಯಶ್ ಸಿನಿ ಜರ್ನಿಯಲ್ಲಿ ಮೂರು ಮೇಜರ್ ಟರ್ನಿಂಗ್ ಪಾಯಿಂಟ್ ಸಿಕ್ಕಿವೆ.

    Recommended Video

    Yathrav Yash | ಯಶ್ ಗೆ ಮೇಲೆ ಕೋಪ ಮಾಡ್ಕೊಂಡಿದ್ದಾನೆ ಮಗ .| Filmibeat Kanada

    English summary
    Moggina Manasu To KGF 2: Yash Completes 14 years in Film Industry, Know More.
    Monday, July 18, 2022, 15:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X