Don't Miss!
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Technology
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್! ವಿಶೇಷತೆ ಏನು?
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಚಿತ್ರಗಳು: ಹೀರೋ ಯಾರು?
ಕೆಜಿಎಫ್ ಚಾಪ್ಟರ್ ಒಂದರ ಬಳಿಕ ಭಾಗ 2ರ ಮೇಲೆ ಸಾಕಷ್ಟು ನಿರೀಕ್ಷೆಗಳು ಇದ್ದವು. ಆದರೆ ಎಲ್ಲಾ ನಿರಿಕ್ಷೆಗಳನ್ನು ಮಿರಿ ಕೆಜಿಎಫ್ ಚಾಪ್ಟರ್ 2 ಸೂಪರ್ ಹಿಟ್ ಲಿಸ್ಟ್ ಸೇರಿದೆ. ಯಶ್ ಅಭಿನಯದ ಕನ್ನಡ ಈ ಸಿನಿಮಾದ ಮೂಲಕ ಸೌತ್ ಸಿನಮಾರಂಗಕ್ಕೆ ಜಾಗತಿಕ ಮಟ್ಟದಲ್ಲಿ ಗುರುತಿಸಿ ಕೊಳ್ಳಲು ದಾರಿ ಮಾಡಿ ಕೊಟ್ಟಿದೆ.
ಕೆಜಿಎಫ್ ಸಿನಿಮಾ ಕನ್ನಡ ಮಾತ್ರವಲ್ಲ, ದಕ್ಷಿಣ ಭಾರತೀಯ ಸಿನಿಮಾಕ್ಕೆ ಕಿರೀಟ ಇದ್ದ ಹಾಗೆ. ಅಷ್ಟರ ಮಟ್ಟಿಗೆ ವಿಶ್ವವೇ ಇತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ಇನ್ನು ಗಳಿಕೆ ವಿಚಾರದಲ್ಲಿ ಕೆಜಿಎಫ್ 2 ಜಾದು ಮಾಡಿದೆ.
40ನೇ
ದಿನವೂ
ಜಗ್ಗಲಿಲ್ಲ
'ಕೆಜಿಎಫ್
2'
ಕಲೆಕ್ಷನ್:
'ಭೂಲ್
ಭೂಲಯ್ಯ
2'
ಲೆಕ್ಕಕ್ಕಿಲ್ಲ!
ಕೆಜಿಎಫ್ 2 ರಿಲೀಸ್ ಆಗಿ ಒಂದು ತಿಂಗಳು ಕಳೆದರೂ ಭಾರತದಾದ್ಯಂತ ಸಿನಿಮಾದ ಬಗ್ಗೆ ಕ್ರೇಜ್ ಹಾಗೆಯೇ ಇದೆ. ಇನ್ನು ಜನ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡುತ್ತಾ ಇದ್ದಾರೆ. ಈಗ ಮತ್ತೆ ಕೆಜಿಎಫ್ ಬಗ್ಗೆ ಮಾತನಾಡಲು ಕಾರಣ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ.
'ಕೆಜಿಎಫ್
2'ಗೆ
ಟಕ್ಕರ್
ಕೊಡುತ್ತಾ
'ಭೂಲ್
ಭುಲಯ್ಯ
2'
ಕಲೆಕ್ಷನ್?

14 ಸಿನಿಮಾ ನಿರ್ಮಾಣ ಮಾಡುತ್ತಿದೆ ಹೊಂಬಾಳೆ ಫಿಲ್ಮ್ಸ್!
ಕನ್ನಡದ ಚಿತ್ರರಂಗ ವಜ್ರೇಶ್ವರಿ ಕಂಬೈಡ್ಸ್, ಈಶ್ವರಿ ಪ್ರೊಡಕ್ಷನ್ ಅಂತಹ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳನ್ನು ಕಂಡಿದೆ. ಈ ಸಾಲಿನಲ್ಲಿ ಈಗ ಹೊಂಬಾಳೆ ಫಿಲ್ಮ್ಸ್ ನಿಂತಿದೆ. ಕನ್ನಡದ ಬಹುತೇಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಇದೆ ಹೊಂಬಾಳೆ. ಇತ್ತೀಚೆಗೆ ಸಂದರ್ಶನ ಒಂದ್ರಲ್ಲಿ ಮಾತನಡಿದ ನಿರ್ಮಾಪಕ ವಿಜಯ್ ಕಿರಗಂದೂರು, ಹೊಂಬಾಳೆ ಸಂಸ್ಥೆಯ ಅಡಿಯಲ್ಲಿ 14 ಸಿನಿಮಾಗಳು ನಿರ್ಮಾಣ ಆಗುತ್ತಿವೆ ಎಂದಿದ್ದಾರೆ.

2 ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗೆ ಯೋಜನೆ!
ಇನ್ನು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದ ವಿಜಯ್ ಕಿರಗಂದೂರು "ಮುಂದಿನ ಮೂರು ವರ್ಷಗಳಲ್ಲಿ ಸುಮಾರು 14 ಚಲನಚಿತ್ರಗಳು ಸಾಲಿನಲ್ಲಿ ಇವೆ. ಎರಡು ಪ್ಯಾನ್-ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ. ಈಗಾಗಲೇ ಒಂದು ಚಿತ್ರದ ಸ್ಕ್ರಿಪ್ಟ್ ಲಾಕ್ ಮಾಡಿದ್ದೇವೆ, ಅದು 2024 ರಲ್ಲಿ ಬಿಡುಗಡೆಯಾಗಲಿದೆ. ಎರಡೂ ಚಿತ್ರಗಳ ವಿಷಯ ಮತ್ತು ಕಥಾಹಂದರವು ಕೆಜಿಎಫ್ನಂತೆಯೇ ಸಾರ್ವತ್ರಿಕವಾಗಿರುತ್ತದೆ. 2024 ರಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗುವ ಒಂದು ಚಿತ್ರವನ್ನು ಮೊದಲು ಪ್ರಕಟ ಮಾಡುತ್ತೇವೆ. 2025 ರಲ್ಲಿ ಬರುವ ಸಿನಿಮಾದ ಬಗ್ಗೆ ಇನ್ನು ಯೋಜನೆ ಅಂತಿಮಗೊಂಡಿಲ್ಲ." ಎಂದಿದ್ದಾರೆ.

ಯಾರಿಗೆ ಒಲಿಯಲಿದೆ ಹೊಂಬಾಳೆ ಅದೃಷ್ಟ?
ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತೆ ಎನ್ನುವುದು ಮಾತ್ರ ರಿವೀಲ್ ಆಗಿದೆ. ಅದರೆ ಈ ಚಿತ್ರಗಳ ಹೀರೋ ಯಾವಾಗ ಬರಹುದು ಎನ್ನುವ ಬಗ್ಗೆ ರಿವೀಲ್ ಆಗಿಲ್ಲ. ಸದ್ಯ ಹೊಂಬಾಳೆ ತೆಲುಗು ಹೀರೋಗಳಿಗೂ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಈ ಎರಡು ಸಿನಿಮಾಗಳಲ್ಲಿ ನಾಯಕ ಆಗುವ ಅದೃಷ್ಟ ಯಾರಿಗೆ ಎನ್ನುವ ಕುತೂಹಲ ಸದ್ಯಕ್ಕೆ ಮೂಡಿದೆ.

ಬಾಲಿವುಡ್ ಬಗ್ಗೆ ವಿಜಯ್ ಕಿರಗಂದೂರ್ ಮಾತು!
ಇನ್ನು ನಿರ್ಮಾಪಕ ವಿಜಯ್ ಕಿರಗಂದೂರು ಬಾಲಿವುಡ್ ಬಗ್ಗೆ ಮಾತನಾಡಿದ್ದಾರೆ. "ಉತ್ತರ ಮತ್ತು ದಕ್ಷಿಣದ ನಡುವೆ ಅಂತೇನೂ ಇಲ್ಲ. ನಾವೆಲ್ಲರೂ ಹಿಂದಿ ಸಿನಿಮಾ ನೋಡುತ್ತೇವೆ ಮತ್ತು ಅವರು ನಮ್ಮ ಸಿನಿಮಾ ನೋಡುತ್ತಾರೆ. ಕಂಟೆಂಟ್ ಚೆನ್ನಾಗಿದ್ದರೆ ಎಲ್ಲರೂ ನೋಡುತ್ತಾರೆ. ನಾವು ದಕ್ಷಿಣ ಕೊರಿಯನ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಚಲನಚಿತ್ರಗಳನ್ನು ವೀಕ್ಷಿಸುತ್ತೇವೆ ಅದಕ್ಕೆ ಯಾವುದೇ ಅಡ್ಡಿಯಿಲ್ಲ. ಉತ್ತರ ಮತ್ತು ದಕ್ಷಿಣದ ಬಗ್ಗೆ ವಾದ-ವಿವಾದವೂ ಬೇಡ." ಎಂದಿದ್ದಾರೆ ಹಾಗಾಗಿ ಹೊಂಬಾಳೆ ಫಿಲ್ಮ್ಸ್ ಮುಂದೆ ಬಾಲಿವುಡ್ ಹೀರೋಗಳಿಗೂ ನಿರ್ಮಾಣ ಮಾಡುವ ಸೂಚನೆ ಇದೆ.