KGF 2: ರಿಲೀಸ್‌ಗೂ ಮುನ್ನ ಹುಟ್ಟೂರಿಗೆ ಭೇಟಿ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರು!

ಸದ್ಯ ಎಲ್ಲೆಲ್ಲೂ 'ಕೆಜಿಎಫ್ 2' ಚಿತ್ರ ಮತ್ತು ಚಿತ್ರತಂಡದ ಬಗ್ಗೆಯೇ ಮಾತುಕತೆ. ಈಗ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ಹುಟ್ಟೂರಿಗೆ 'ಕೆಜಿಎಫ್' ತಂಡದ ಜೊತೆಗೆ ಭೇಟಿ ನೀಡಿದ್ದಾರೆ. ಮಂಡ್ಯ ನಗರಕ್ಕೆ ಹತ್ತಿರದಲ್ಲಿ ಇರುವ ಹಚ್ಚ ಹಸಿರು ಪರಿಸರ ಕಂಗೊಳಿಸುವ ಕಿರಗಂದೂರು ಗ್ರಾಮಕ್ಕೆ ಕೆಜಿಎಫ್ ತಂಡ ಭೇಟಿ ನೀಡಿ ಖುಷಿಯಿಂದ ಬೀಗಿದೆ.

ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಎಂದರೆ ಗ್ರಾಮದ ಜನರಿಗೆ ಅತೀವ ಪ್ರೀತಿ. ವಿಜಯ್‌ಗೂ ಅಷ್ಟೇ ಊರೆಂದರೆ ಪ್ರೀತಿ. ಊರಿನ ಹಬ್ಬ ಜಾತ್ರೆಗಳಲ್ಲಿ ವಿಜಯ್ ಕುಟುಂಬವೇ ಮುಂದಾಳತ್ವ ವಹಿಸುತ್ತದೆ. ಹಾಗಾಗಿ 'ಕೆಜಿಎಫ್2' ಬಿಡುಗಡೆಗೂ ಮುನ್ನ ಚಿತ್ರದ ನಾಯಕ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ವಿಜಯ್ ಕಿರಗಂದೂರಿಗೆ ಭೇಟಿ ನೀಡಿದ್ದಾರೆ.

ಈ ತಂಡ ಊರಿಗೆ ಹೋಗಿದ್ದು ಜಾತ್ರೆಯ ಅನುಭವ ಆಗಿದೆ. ಅಷ್ಟರ ಮಟ್ಟಿಗೆ ಅಲ್ಲಿನ ಜನರು ಇವರನ್ನು ಸ್ವಾಗತಿಸಿದ್ದಾರೆ. ಊರಿಗೆ ಭೇಟಿ ನೀಡಿದ ಯಶ್, ಪ್ರಶಾಂತ್ ನೀಲ್ ಮತ್ತು ವಿಜಯ್ ಕುಟುಂಬ ಸಂತಸವನ್ನು ಹಂಚಿಕೊಂಡಿದೆ.

KGF 2 Team And Producer Vijay Kirgandur Visit His Native Place In Mandya

ಹೊಂಬಾಳೆ ಫಿಲ್ಮ್ಸ್ ಸ್ಥಾಪಕ, 'ಕೆಜಿಎಫ್' ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಅಂದರೆ ಮನೆಯವರಿಗೂ ತುಂಬು ಪ್ರೀತಿ. ಮನೆಗೆ ಬಂದ ಗಣ್ಯರನ್ನು ಪ್ರೀತಿಯಿಂದ ಸತ್ಕರಿಸಲಾಗಿದೆ. ಮಧ್ಯರಾತ್ರಿಯವರೆಗೆ ಆ ಊರಿನ ಪರಿಸರವನ್ನು ಯಶ್ ಹಾಗೂ ಪ್ರಶಾಂತ್ ನೀಲ್ ಆಸ್ವಾದಿಸಿದ್ದಾರೆ.

ಹಾಗೆಯೇ ಊರಿನ ದೇವಾಲಯಕ್ಕೆ ಮೂವರು ಭೇಟಿ ನೀಡಿ, ಊರೆಲ್ಲಾ ಸುತ್ತಿದ್ದಾರೆ. ಜನರು ಈ ತಂಡವನ್ನು ಕಂಡು ಖುಷಿ ಪಟ್ಟಿದ್ದಾರೆ. ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರೆ. ವಿಜಯ್ ನಿರ್ಮಾಣದಲ್ಲಿ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಾಯಕರಾಗಿ ನಟಿಸಿರುವ 'ಕೆಜಿಎಫ್ 2' ಚಿತ್ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

KGF 2 Team And Producer Vijay Kirgandur Visit His Native Place In Mandya

'ಕೆಜಿಎಫ್' ಕನ್ನಡದ ಹೆಮ್ಮೆಯ ಚಿತ್ರವಾಗಲಿದೆ. ಇದರಲ್ಲಿ ಎರಡು ಮಾತಿಲ್ಲ. ರಿಲೀಸ್ ಬಳಿಕವೂ ಚಿತ್ರ ಹೊಸ ದಾಖಲೆ ಮಾಡುವ ಎಲ್ಲಾ ಸಾಧ್ಯತೆಗಳು ಇವೆ. ಕನ್ನಡ ಮಾತ್ರ ಅಲ್ಲದೆ. ಕೆಜಿಎಫ್ 2 ವಿಶ್ವವೇ ತಿರುಗಿ ನೋಡುವಂತ ಚಿತ್ರ ಆಗಲಿದೆ. ಈ ಚಿತ್ರ ತೆರೆಕಂಡ ನಂತರ 'ಕೆಜಿಎಫ್' ತಂಡದ ಗ್ರಾಫ್ ಮತ್ತಷ್ಟು ಮೇಲೆ ಏರಲಿದೆ.

More from Filmibeat

English summary
KGF 2 Team And Producer Vijay Kirgandur Visit His Native Place In Mandya, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X