For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2: ಜುಲೈ 29ಕ್ಕೆ ಅಧೀರನ ದರ್ಶನ ಭಾಗ್ಯ!?

  |

  ಎಲ್ಲವೂ ಸರಿ ಇದ್ದಿದ್ದರೆ 'ಕೆಜಿಎಫ್ 2' ಸಿನಿಮಾ ಬಿಡುಗುಡೆ ಆಗಿ ಒಂದು ವಾರದ ಮೇಲಾಗಿರಬೇಕಿತ್ತು. ಜುಲೈ 16ಕ್ಕೆ ಬಿಡುಗಡೆ ಆಗಬೇಕಿದ್ದ 'ಕೆಜಿಎಫ್ 2' ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.

  KGF 2 ಅಭಿಮಾನಿಗಳಿಗೆ ಗುಡ್ ನ್ಯೂಸ್

  ಸಿನಿಮಾ ಬಿಡುಗಡೆ ಮುಂದೂಡಿರುವುದರ ಹೊರತಾಗಿ 'ಕೆಜಿಎಫ್ 2' ತಂಡದಿಂದ ಇನ್ನಾವುದೇ ಸುದ್ದಿ ಇಲ್ಲ. ಹಾಗಾಗಿ ಅಭಿಮಾನಿಗಳು ಅಪ್‌ಡೇಟ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡುತ್ತಿದ್ದಾರೆ.

  ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಜುಲೈ 29ರಂದು 'ಕೆಜಿಎಫ್ 2' ತಂಡದಿಂದ ಮುಖ್ಯವಾದ ಅಪ್‌ಡೇಟ್ ಒಂದು ಹೊರಗೆ ಬೀಳಲಿದೆ. 'ಕೆಜಿಎಫ್ 2' ಸಿನಿಮಾದ ಮುಖ್ಯ ಪಾತ್ರ ಅಧೀರನ ಪಾತ್ರದ ಟೀಸರ್ ಅಥವಾ ಪ್ರೋಮೊ ಅಂದು ಬಿಡುಗಡೆ ಆಗುವ ದಟ್ಟ ಸಂಭವ ಇದೆ.

  'ಕೆಜಿಎಫ್ 2' ನಲ್ಲಿ ಅಧೀರನ ಪಾತ್ರದಲ್ಲಿ ನಟಿಸಿರುವ ಸಂಜಯ್ ದತ್ ಅವರ ಹುಟ್ಟುಹಬ್ಬ ಜುಲೈ 29ಕ್ಕೆ ಇದ್ದು ಅದೇ ದಿನ 'ಕೆಜಿಎಫ್ 2' ತಂಡವು ಅಧೀರನ ಪಾತ್ರದ ಪ್ರೋಮೊ ಅಥವಾ ಟೀಸರ್ ಬಿಡುಗಡೆ ಮಾಡಲಿದೆ.

  'ಅಧೀರ' ಪಾತ್ರದ ಕೆಲವು ಪೋಸ್ಟರ್‌ಗಳು ಈಗಾಗಲೇ ಬಿಡುಗಡೆ ಆಗಿದೆ. ಅಲ್ಲದೆ ಜನವರಿಯಲ್ಲಿ ಬಿಡುಗಡೆ ಆದ ಸಿನಿಮಾದ ಟೀಸರ್‌ನಲ್ಲಿ 'ಅಧೀರ' ಪಾತ್ರದ ಸಣ್ಣ ಪರಿಚಯ ಇತ್ತಾದರೂ ಟೀಸರ್‌ನಲ್ಲಿ ಅಧೀರನ ಮುಖದರ್ಶನ ಆಗಿರಲಿಲ್ಲ. ಹಾಗಾಗಿ ಜುಲೈ 29ಕ್ಕೆ ಅಧೀರನ ಪಾತ್ರ ಪರಿಚಯಕ್ಕಾಗಿಯೇ ವಿಶೇಷ ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.

  'ಕೆಜಿಎಫ್ 2' ಸಿನಿಮಾವು ಅಧೀರ v/s ರಾಕಿ ಭಾಯ್ ಕತೆ ಹೊಂದಿರಲಿದೆ. 'ಕೆಜಿಎಫ್; ಚಾಪ್ಟರ್ 1' ನಲ್ಲಿ ಮುಖ್ಯ ವಿಲನ್ ಗರುಡನನ್ನು ಚಾಕಚಕ್ಯತೆಯಿಂದ ಹೊಡೆದುರುಳಿಸಿದ ರಾಕಿ ಭಾಯ್‌ಗೆ ಅಧೀರ ಬಹಳ ದೊಡ್ಡ ಸವಾಲಾಗಲಿದ್ದಾನೆ. ಗರುಡನಿಗಿಂತಲೂ ಹಲವು ಪಟ್ಟು ಬಲಶಾಲಿ, ಬುದ್ಧಿವಂತ ಆಗಿರುವ ಅಧೀರನನ್ನು ಹೇಗೆ ರಾಕಿ ಭಾಯ್ ಮಣ್ಣು ಮಾಡುತ್ತಾನೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

  English summary
  KGF 2 team may release Adheera character's teaser on July 29. Sanjay Dutt's birthday is on July 29.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X