ಅಭಿಮಾನಿಗಳ ಅಭಿಮಾನವನ್ನು ದೇಶದೆಲ್ಲೆಡೆ ಪಸರಿಸಿದ 'ಕೆಜಿಎಫ್ 2' ತಂಡ
'ಕೆಜಿಎಫ್ 2' ಹವಾ ಸಾಮಾನ್ಯದ್ದಲ್ಲ. ದೇಶದ ಬಹುನಿರೀಕ್ಷಿತ ಸಿನಿಮಾ ಅದು. ಸ್ಟಾರ್ ನಟರ ಅಭಿಮಾನಿಗಳದ್ದು ಒಂದು ತೂಕವಾದರೆ 'ಕೆಜಿಎಫ್ 2' ಅಭಿಮಾನಿಗಳದ್ದೇ ಮತ್ತೊಂದು ತೂಕ. 'ಕೆಜಿಎಫ್ 2' ಅಭಿಮಾನಿಗಳ ಅಭಿಮಾನವನ್ನು ದೇಶವನ್ನೆಲ್ಲ ಪಸರಿಸುವ ಕಾರ್ಯವನ್ನು ನಿರ್ಮಾಣ ಸಂಸ್ಥೆ ಹೊಂಬಾಳೆ ಮಾಡುತ್ತಿದೆ.
ಕೆಲವು ದಿನಗಳ ಹಿಂದಷ್ಟೆ ಹೊಂಬಾಳೆ ಫಿಲಮ್ಸ್ ಪ್ರಕಟಣೆಯೊಂದನ್ನು ಹೊರಡಿಸಿತ್ತು. 'ಕೆಜಿಎಫ್ 2' ಸಿನಿಮಾದ ಪೋಸ್ಟರ್‌ಗಳನ್ನು ಮಾಡಿ ಕಳಿಸಿ ಅವನ್ನು ಫ್ಲೆಕ್ಸ್‌ಗಳನ್ನಾಗಿ ಮಾಡಿ ಸಿನಿಮಾದ ಜಾಹಿರಾತಿಗೆ ಬಳಸಿಕೊಳ್ಳುವುದಾಗಿ ಹೇಳಿತ್ತು. ಅಂತೆಯೇ ಅಸಂಖ್ಯ ಅಭಿಮಾನಿಗಳು 'ಕೆಜಿಎಫ್ 2' ಸಿನಿಮಾದ ಪೋಸ್ಟರ್‌ಗಳನ್ನು ಮಾಡಿ ಕಳಿಸಿದ್ದು, ಅವನ್ನು ಕೊಟ್ಟ ಮಾತಿನಂತೆ ಹೊಂಬಾಳೆ ಫಿಲಮ್ಸ್ ಜಾಹಿರಾತು ಫ್ಲೆಕ್ಸ್‌ಗಳಾಗಿ ದೇಶದಾದ್ಯಂತ ಹಲವು ನಗರಗಳಲ್ಲಿ ಅಳವಡಿಸಿದೆ.
ಜಾಹೀರಾತಾಗಿ ಹೋಲ್ಡಿಂಗ್ಸ್ ಅಳವಡಿಸಿರುವ ಫ್ಯಾನ್ ಮೇಡ್ ಪೋಸ್ಟರ್‌ಗಳನ್ನು ಹೊಂಬಾಳೆ ಫಿಲಮ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ ಆಯಾ ಪೋಸ್ಟರ್‌ಗಳನ್ನು ಯಾವ ಜಾಗದಲ್ಲಿ ಹಾಕಲಾಗಿದೆ ಎಂಬುದರ ಮಾಹಿತಿಯನ್ನು ಸಹ ಅಳವಡಿಸಲಾಗಿದೆ.
Recommended Video


ಕರ್ನಾಟಕದ ಜಾನ್ ಪಾಲ್ ಕ್ಸೇವಿಯರ್ ಎಂಬುವರು ಮಾಡಿರುವ ಪೋಸ್ಟರ್ ಅನ್ನು ಮುಂಬೈನ ಈಸ್ಟರ್ನ್ ಫ್ರೀ ವೇ ಬಳಿ 40*40 ಅಳತೆಯ ಫ್ಲೆಕ್ಸ್ ಮಾಡಿ ಹಾಕಲಾಗಿದೆ. ಅಭಿಜಿತ್ ಶೆಟ್ಟಿ ಮಾಡಿರುವ ಪೋಸ್ಟರ್ ಅನ್ನು ಮುಂಬೈನ ಬಾಂದ್ರಾ ಕಾರ್ಟರ್‌ನಲ್ಲಿ ದೊಡ್ಡ ಅಳತೆಗೆ ಹಾಕಲಾಗಿದೆ. ಸಚಿನ್ ಕುಮಾರ್ ಮಾಡಿರುವ ಪೋಸ್ಟರ್ ಅನ್ನು ಮುಂಬೈನ ಸಿದ್ದಿವಿನಾಯಕ ಮಂದಿರದ ಬಳಿ ಪ್ರಭಾದೇವಿ ಬಳಿ ಹಾಕಲಾಗಿದೆ. ತಮಿಳುನಾಡಿನ ಬಾಲಾಜಿ ಮೋಹನ್ ಮಾಡಿರುವ ಪೋಸ್ಟರ್ ಅನ್ನು ಮುಂಬೈನ ಗೋರೆಗಾಂವ್ ಲಿಂಕ್ ರೋಡ್‌ನಲ್ಲಿ ಹಾಕಲಾಗಿದೆ. ಮಹಾರಾಷ್ಟ್ರದ ಪರಿವರ್ತನ್ ಎಂಬುವರು ಮಾಡಿರುವ ಪೋಸ್ಟರ್ ಅನ್ನು ಮುಂಬೈನ ಜುಹು ಗುಲ್‌ಮೋಹರ್ ಬಳಿ ಅಳವಡಿಸಲಾಗಿದೆ.
ಇವು ಮಾತ್ರವೇ ಅಲ್ಲದೆ ಅಭಿಮಾನಿಗಳು ಕಳಿಸುವ ಇನ್ನಷ್ಟು ಪೋಸ್ಟರ್‌ಗಳನ್ನು ದೇಶದ ಇತರೆ ನಗರಗಳಲ್ಲಿಯೂ 'ಕೆಜಿಎಫ್ 2' ತಂಡ ಅಳವಡಿಸಲಿದೆ. ಇದರ ಜೊತೆಗೆ ಸಿನಿಮಾ ಬಿಡುಗಡೆ ಆಗಲು ಇನ್ನು ಹತ್ತು ದಿನ ಮಾತ್ರ ಉಳಿದಿರುವ ಹಿನ್ನೆಲೆಯಲ್ಲಿ ಯಶ್‌ರ ಕಟೌಟ್‌ಗೂ ಭಾರಿ ಬೇಡಿಕೆ ಬರುತ್ತಿದೆ. ಕರ್ನಾಟಕದ ವಿವಿಧ ನಗರಗಳಿಂದ ಬಂದು ಬೆಂಗಳೂರಿನಲ್ಲಿ ಕಟೌಟ್ ಮಾಡಿಸುತ್ತಿದ್ದಾರೆ. ಬೆಂಗಳೂರಿನ ಮೇನ್ ಥಿಯೇಟರ್‌ನಲ್ಲಿ ಭಾರಿ ದೊಡ್ಡ ಕಟೌಟ್ ಹಾಕಲು ಈಗಾಗಲೆ ಸಿದ್ಧತೆ ಆರಂಭವಾಗಿದೆ.
'ಕೆಜಿಎಫ್ 2' ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆ ಆಗುತ್ತಿದ್ದು, ಚಿತ್ರತಂಡವು ಈಗಾಗಲೇ ಪ್ರಚಾರ ಆರಂಭಿಸಿದೆ. ಮೊನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಚಿತ್ರತಂಡ ಇಂದು ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಿದೆ. ದೇಶದ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ಆಯೋಜಿಸಿ, ಸಂದರ್ಶನಗಳನ್ನು ನೀಡಿ ಅದ್ಧೂರಿಯಾಗಿ ಪ್ರಚಾರ ಮಾಡಲಿದೆ.
'ಕೆಜಿಪ್ 2' ಸಿನಿಮಾದಲ್ಲಿ ಯಶ್ ಜೊತೆಗೆ ಅದ್ಧೂರಿ ತಾರಾಬಳಗವೇ ಇದೆ. ವಿಲನ್ ಆಗಿ ಬಾಲಿವುಡ್‌ನ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ತೆಲುಗಿನ ರಾವ್ ರಮೇಶ್, ಅಚ್ಯುತ್ ಕುಮಾರ್ ಇನ್ನೂ ಹಲವರು ಇದ್ದಾರೆ. ಪ್ರಶಾಂತ್ ನೀಲ್ ನಿರ್ದೇಶಿಸಿರುವ ಈ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾವು ಏಪ್ರಿಲ್ 14 ರಂದು ವಿಶ್ವದಾದ್ಯಂತ ಸುಮಾರು 6000 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











