For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಟೀಸರ್ ರಿಲೀಸ್ ಆದ 49 ನಿಮಿಷದಲ್ಲಿ 5 ಮಿಲಿಯನ್ ವೀಕ್ಷಣೆ

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದ ಪ್ರೇಕ್ಷಕರು ಥ್ರಿಲ್ ಆಗುವಂತಹ ಟೀಸರ್ ಬಂದಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

  ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಕೆಜಿಎಫ್ ಟೀಸರ್ ಎಲ್ಲ ಕಡೆಯೂ ಟ್ರೆಂಡಿಂಗ್‌ನಲ್ಲಿತ್ತು. ಟ್ವಿಟ್ಟರ್, ಯ್ಯೂಟ್ಯೂಬ್‌ನಲ್ಲಿ ಟಾಪ್‌ನಲ್ಲಿತ್ತು. ಇನ್ನು ವೀಕ್ಷಣೆಯಲ್ಲಿಯೂ ಕೆಜಿಎಫ್ ಟೀಸರ್ ದಾಖಲೆ ನಿರ್ಮಿಸಿದೆ.

  ಕೆಜಿಎಫ್ 2 ಟೀಸರ್ ಬಿಡುಗಡೆ: ರಾಕಿ ಭಾಯ್ ಗತ್ತಿಗೆ ಯಾರಿಲ್ಲ ಸಾಟಿ

  ಟೀಸರ್ ಬಿಡುಗಡೆಯಾದ 49 ನಿಮಿಷದಲ್ಲಿ 5 ಮಿಲಿಯನ್ ವೀಕ್ಷಣೆ ಕಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ ಈ ಚಿತ್ರದ ಟೀಸರ್ ಒಂದೇ ಭಾಷೆಯಲ್ಲಿ ಬಂದಿದೆ. ಇಂಗ್ಲಿಷ್ ಭಾಷೆಯಲ್ಲಿ ಹಿನ್ನೆಲೆ ಧ್ವನಿ ಹೊಂದಿದೆ.

  ಅಂದ್ಹಾಗೆ, ನಿಗದಿ ಪಡಿಸಿದ ಸಮಯಕ್ಕಿಂತ ಮೊದಲೇ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಯಾಯಿತು. ಜನವರಿ 8 ರಂದು ಬೆಳಗ್ಗೆ 10.08 ನಿಮಿಷಕ್ಕೆ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ, ಜನವರಿ 7ರ ರಾತ್ರಿ ದುಷ್ಕರ್ಮಿಗಳು ಟೀಸರ್ ಲೀಕ್ ಮಾಡಿ ಲೀಕ್ ಮಾಡಿದರು.

  ಇದರ ಪರಿಣಾಮ ಅಧಿಕೃತವಾಗಿ ಟೀಸರ್ ರಿಲೀಸ್ ಆಗುವುದಕ್ಕೆ ಮುಂಚೆಯೇ ಲೀಕ್ ಆಯ್ತು. ಇದರಿಂದ ಬಹುಬೇಗ ಎಚ್ಚೆತ್ತುಕೊಂಡ ಚಿತ್ರತಂಡವ ತಡ ಮಾಡದೇ ಜನವರಿ 7 ರ ರಾತ್ರಿ 9.29 ನಿಮಿಷಕ್ಕೆ ಟೀಸರ್ ಬಿಡುಗಡೆ ಮಾಡಿತು.

  ಇನ್ನುಳಿದಂತೆ ಕೆಜಿಎಫ್ ಟೀಸರ್‌ನಲ್ಲಿ ಯಶ್, ರವೀನಾ ಟಂಡನ್, ಸಂಜಯ್ ದತ್ ಅವರ ಗೆಟಪ್ ಬಹಿರಂಗವಾಗಿದೆ. ಪ್ರಶಾಂತ್ ನೀಲ್ ನಿರ್ದೇಶಿಸಿರುವ ಈ ಚಿತ್ರವನ್ನು ವಿಜಯ್ ಕಿರಗಂದೂರ್ ನಿರ್ಮಿಸಿದ್ದರು. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.

  ಅಭಿಮಾನಿಗಳ ಕೆಲಸಕ್ಕೆ ಭೇಷ್ ಅಂದ್ರು Garuda Ram | Filmibeat Kannada
  English summary
  The teaser of Yash's KGF Chapter 2 Released. Here are some details about the teaser of the most-anticipated film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X