Just In
Don't Miss!
- News
ಎಲ್ವಿ ಪ್ರಸಾದ್ ಆಸ್ಪತ್ರೆಯಿಂದ ಗುಣಮಟ್ಟದ ನೇತ್ರ ಚಿಕಿತ್ಸೆ ಸೌಲಭ್ಯ
- Automobiles
ಮಾರ್ಚ್ ಅವಧಿಗಾಗಿ ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್
- Finance
ಮೊಟೊರೊಲಾ ಹೊಸ ಸ್ಮಾರ್ಟ್ಫೋನ್: ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್
- Sports
ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಇಂದಿಗೆ 50 ವರ್ಷ
- Lifestyle
ಮಹಾಶಿವರಾತ್ರಿ: ಶಿವನಿಗೆ ಪೂಜೆ ಸಲ್ಲಿಸುವಾಗ ಇವುಗಳನ್ನು ದೂರವಿಡಿ
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕೆಜಿಎಫ್-2' ಟೀಸರ್; 150 ಮಿಲಿಯನ್ ವೀಕ್ಷಣೆ ಕಂಡ ಸಂತಸದಲ್ಲಿ ಚಿತ್ರತಂಡ
ಜನವರಿ 7 ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ದಾಖಲೆಯ ವೀಕ್ಷಣೆ ಕಂಡು ಇಡೀ ವಿಶ್ವವೇ ದಂಗಾಗಿದೆ. ವರ್ಲ್ಡ ವೈಸ್ ಸದ್ದು ಮಾಡುತ್ತಿರುವ ಕೆಜಿಎಫ್ -2 ಟೀಸರ್ ಸದ್ಯ ನಂ.1 ಟ್ರೆಂಡಿಂಗ್ ನಲ್ಲಿದೆ.
ಈಗಾಗಲೇ ಕೆಜಿಎಫ್-2 ಟೀಸರ್ ಯೂಟ್ಯೂಬ್ ನಲ್ಲಿ 150 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ಪ್ರಶಾಂತ್ ನೀಲ್ ಧನ್ಯವಾದ ತಿಳಿಸಿದ್ದಾರೆ.
ಕೆಜಿಎಫ್ ಸರ್ವಶ್ರೇಷ್ಠ ದಾಖಲೆ: 100 ಮಿಲಿಯನ್ ವೀಕ್ಷಣೆ ಕಂಡ ಚಾಪ್ಟರ್ 2 ಟೀಸರ್
150 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಾಣುವ ಮೂಲಕ ಭಾರತೀಯ ಸಿನಿಮಾರಂಗದ ಎಲ್ಲಾ ಸಿನಿಮಾಗಳ ದಾಖಲೆಯನ್ನು ಧೂಳಿಪಟ ಮಾಡಿ ಮುನ್ನುಗ್ಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಟೀಸರ್ ಕಡಿಮೆ ಅವಧಿಯಲ್ಲಿ ಇಷ್ಟು ವೀಕ್ಷಣೆ ಕಂಡಿರುವ ಉದಾಹರಣೆಯೇ ಇಲ್ಲ.
ಟೀಸರ್ ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಇಡೀ ಸಿನಿಮಾತಂಡ ಸಂತಸದಲ್ಲಿ ತೇಲುತ್ತಿದೆ. ಕೆಜಿಎಫ್-2 ಟೀಸರ್ ಜನವರಿ 8 ಬೆಳಗ್ಗೆ ರಿಲೀಸ್ ಮಾಡಲು ತಯಾರಿ ನಡೆಸಿತ್ತು. ಆದರೆ ಜನವರಿ 7 ರಾತ್ರಿಯೇ ಟೀಸರ್ ಲೀಕ್ ಆಗುವ ಮೂಲಕ ಸಿನಿಮಾ ತಂಡದ ಲೆಕ್ಕಾಚಾರವೇ ತಲೆಕೆಳಗಾಯಿತು.
ತಕ್ಷಣ ಎಚ್ಚೆತ್ತುಕೊಂಡ ಸಿನಿಮಾತಂಡ ಜನವರಿ 7ರಂದು ಟೀಸರ್ ರಿಲೀಸ್ ಮಾಡುವ ನಿರ್ಧಾರ ಮಾಡಿ, ಟೀಸರ್ ಅನ್ನು ಅಭಿಮಾನಿಗಳ ಮುಂದಿಟ್ಟರು. ಟೀಸರ್ ರಿಲೀಸ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಯಿತು. ಪ್ರಶಾಂತ್ ನೀಲ್ ನಿರ್ದೇಶನ, ಯಶ್, ರವೀನಾ ಟಂಡನ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ ಪ್ರಕಾಶ್ ರಾಜ್ ಹಿನ್ನಲೆ ಧ್ವನಿ, ಹಿನ್ನಲೇ ಸಂಗೀತ ಹೀಗೆ ಪ್ರತಿಯೊಂದು ಚಿತ್ರಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಸದ್ಯ ಮಿಲಿಯನ್ ಗಟ್ಟಲೆ ವೀಕ್ಷಣೆ ಕಾಣುತ್ತಾ ಕೆಜಿಎಫ್-2 ಮುನ್ನುಗ್ಗುತ್ತಿದೆ. ಸಿನಿಮಾ ಯಾವಾಗ ಎನ್ನವ ಕುತೂಹಲ ಅಭಿಮಾನಿಗಳಲ್ಲಿದೆ. ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ಜೊತೆ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಲಿದ್ದಾರೆ. ಇನ್ನೂ ಯಶ್ ಮುಂದಿನ ಯಾವುದು ಎನ್ನುವ ಕುತೂಹಲ ಸಹ ಅಭಿಮಾನಿಗಳಲ್ಲಿದೆ. ಇದೇನೆ ಇರಲಿ ಸದ್ಯ ಚಿತ್ರೀಕರಣ ಮುಗಿಸಿ ಕೆಜಿಎಫ್-2 ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಲಿದೆ.