ಇದಕ್ಕಿದ್ದಂತೆ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಕ್ಷಮೆ ಕೇಳಿದ್ದು ಯಾಕೆ.?
Recommended Video
ಕನ್ನಡ ಚಿತ್ರರಂಗಕ್ಕೆ 'ಉಗ್ರಂ' ಮತ್ತು 'ಕೆ.ಜಿ.ಎಫ್' ನಂತಹ ಎರಡೂ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದವರು ನಿರ್ದೇಶಕ ಪ್ರಶಾಂತ್ ನೀಲ್. ಸಿನಿಮಾ ಮೇಕಿಂಗ್ ವಿಚಾರದಲ್ಲಿ ಎಲ್ಲರ ಕಣ್ಣು ಕುಕ್ಕಿರುವವರು ನಿರ್ದೇಶಕ ಪ್ರಶಾಂತ್ ನೀಲ್.
ಸದ್ಯ 'ಕೆ.ಜಿ.ಎಫ್-2' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಿರುವ ಪ್ರಶಾಂತ್ ನೀಲ್ ಇದ್ದಕ್ಕಿದ್ದಂತೆ ಎಲ್ಲರನ್ನು ಕ್ಷಮೆ ಕೇಳಿದ್ದಾರೆ. ಅರೇ ಕ್ಷಮೆ ಕೇಳುವಂಥದ್ದು ಏನಾಗಿದೆ ಅಂತ ನೀವೆಲ್ಲ ಯೋಚಿಸಬಹುದು. ಪ್ರಶಾಂತ್ ನೀಲ್ ಹಾಗೆ ಕ್ಷಮೆ ಕೇಳಿರುವುದಕ್ಕೂ ಒಂದು ಕಾರಣ ಇದೆ. ಅದೇನಪ್ಪಾ ಅಂದ್ರೆ...

'ಕೆ.ಜಿ.ಎಫ್-2' ಟೀಸರ್ ಬಿಡುಗಡೆ ಆಗುತ್ತಿಲ್ಲ.!
ಹೀರೋಗಳ ಜನ್ಮದಿನದಂದು ಅಭಿಮಾನಿಗಳಿಗೆ ಉಡುಗೊರೆಯಾಗಿ ಸಿನಿಮಾಗಳ ಟೀಸರ್ ಅಥವಾ ಟ್ರೈಲರ್ ಬಿಡುಗಡೆ ಆಗುವುದು ಸಾಮಾನ್ಯ. ಅದರಂತೆ, 'ಕೆ.ಜಿ.ಎಫ್-2' ಚಿತ್ರದ ಟೀಸರ್ ಜನವರಿ 8 ರಂದು ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ ಎಂದು ಈ ಹಿಂದೆ ಸುದ್ದಿ ಆಗಿತ್ತು. ಆದ್ರೀಗ, ಯಶ್ ಬರ್ತಡೇ ದಿನ 'ಕೆ.ಜಿ.ಎಫ್-2' ಟೀಸರ್ ಬಿಡುಗಡೆ ಆಗುತ್ತಿಲ್ಲ.!

ಕ್ಷಮೆ ಕೇಳಿದ ಪ್ರಶಾಂತ್ ನೀಲ್
ಯಶ್ ಬರ್ತಡೇ ದಿನ 'ಕೆ.ಜಿ.ಎಫ್-2' ಚಿತ್ರದ ಟೀಸರ್ ಕಣ್ತುಂಬಿಕೊಳ್ಳಬೇಕು ಎಂದು ಕಾತರದಿಂದ ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಹೀಗಾಗಿ ಎಲ್ಲರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕ್ಷಮೆ ಕೇಳಿದ್ದಾರೆ.

ಸ್ಟೇಟಸ್ ಹಂಚಿಕೊಂಡ ಪ್ರಶಾಂತ್ ನೀಲ್
'''ಕೆ.ಜಿ.ಎಫ್-2' ಚಿತ್ರದ ಬರ್ತಡೇ ಟೀಸರ್ ಜನವರಿ 8 ರಂದು ಬಿಡುಗಡೆ ಆಗುತ್ತಿಲ್ಲ. ಯಾಕಂದ್ರೆ, ಜನವರಿ 6 ರವರೆಗೂ ಶೂಟಿಂಗ್ ನಡೆಯಲಿದೆ. ನಾವೆಲ್ಲರೂ ವಾಪಸ್ ಬರುವುದೇ ಜನವರಿ 7 ರಂದು'' ನಿರ್ದೇಶಕ ಪ್ರಶಾಂತ್ ನೀಲ್ ಸ್ಟೇಟಸ್ ಹಂಚಿಕೊಂಡಿದ್ದಾರೆ.

ನಾವು ರಾಜಿ ಆಗಲ್ಲ.!
''ಕೆ.ಜಿ.ಎಫ್-2' ಬಗ್ಗೆ ನೀವೆಲ್ಲ ತೋರಿಸುತ್ತಿರುವ ಪ್ರೀತಿ ಮತ್ತು ನಿರೀಕ್ಷೆ ತುಂಬಾ ದೊಡ್ಡದು. ಹೀಗಾಗಿ, ಚಿತ್ರದ ಔಟ್ ಕಮ್ ಬಗ್ಗೆ ನಾವು ರಾಜಿ ಆಗುವುದಿಲ್ಲ. ನಿಮಗೆ ಅತ್ಯುತ್ತಮವಾದುದ್ದನ್ನು ನೀಡಲು ನಾವು ಮುಂದಾಗಿದ್ದೇವೆ. ದಯವಿಟ್ಟು ಕ್ಷಮಿಸಿ'' ಎಂದು ಪ್ರಶಾಂತ್ ನೀಲ್ ಬರೆದುಕೊಂಡಿದ್ದಾರೆ.

ಸೆಕೆಂಡ್ ಲುಕ್ ಪೋಸ್ಟರ್ ಬರ್ತಿದೆ
ಬರ್ತಡೇ ಟೀಸರ್ ಬದಲಿಗೆ, ರಾಕಿ ಭಾಯ್ ಯಶ್ ಬರ್ತಡೇ ದಿನ 'ಕೆ.ಜಿ.ಎಫ್-2' ಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆ ಆಗಲಿದೆ ಎಂಬ ಸಂಗತಿಯನ್ನೂ ಪ್ರಶಾಂತ್ ನೀಲ್ ಬಹಿರಂಗ ಪಡಿಸಿದ್ದಾರೆ. .


Click it and Unblock the Notifications











