For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2' ಟೀಸರ್ ನಲ್ಲಿ ಅಧೀರ ಸಂಜಯ್ ದತ್ ಮುಖ ಯಾಕೆ ತೋರಿಸಿಲ್ಲ?

  By ಪಿಲ್ಮ್ ಡೆಸ್ಕ್
  |

  ಇಡೀ ಭಾರತೀಯ ಸಿನಿಮಾರಂಗವೇ ಕಾತರದಿಂದ ಕಾಯುತ್ತಿದ್ದ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಾಳೆ ಯಶ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡಲುo ದೊಡ್ಡ ಪ್ಲಾನ್ ಮಾಡಿದ್ದ ಸಿನಿಮಾತಂಡಕ್ಕೆ ಹ್ಯಾಕರ್ಸ್ ಗಳು ಸಿನಿಮಾ ತಂಡದ ಯೋಜನೆಯನ್ನೆ ತಲೆಕೆಳಗಾಗಿಸಿದ್ದಾರೆ.

  ನಿನ್ನೆ ಬೇಜಾರಾಗಿತ್ತು, ಇವತ್ತು ತುಂಬಾ ಖುಷಿಯಾಯ್ತು | Garuda Ram | Filmibeat Kannada

  ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗುತ್ತಿದ್ದಂತೆ ಸಿನಿಮಾತಂಡ ಇವತ್ತೇ ಟೀಸರ್ ರಿಲೀಸ್ ಮಾಡುವ ನಿರ್ಧಾರ ತೆಗೆದುಕೊಂಡು, ರಾತ್ರಿ 9.29ಕ್ಕೆ ಟೀಸರ್ ಅನ್ನು ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ. ನಿರೀಕ್ಷೆಯಂತೆ ಟೀಸರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಕೆಜಿಎಫ್ 2 ಟೀಸರ್ ಬಿಡುಗಡೆ: ರಾಕಿ ಭಾಯ್ ಗತ್ತಿಗೆ ಯಾರಿಲ್ಲ ಸಾಟಿಕೆಜಿಎಫ್ 2 ಟೀಸರ್ ಬಿಡುಗಡೆ: ರಾಕಿ ಭಾಯ್ ಗತ್ತಿಗೆ ಯಾರಿಲ್ಲ ಸಾಟಿ

  ಯೂನಿವರ್ಸಲ್ ಟೀಸರ್ ರಿಲೀಸ್ ಮಾಡಲಾಗಿದ್ದು, ಡೈಲಾಗ್ ಗಳು ಇಂಗ್ಲೀಷ್ ನಲ್ಲಿವೆ. ಯಶ್ ಎಂಟ್ರಿ, ರವೀನಾ ಟಂಡನ್ ವಾಕ್, ಶ್ರೀನಿಧಿ ಶೆಟ್ಟಿಯ ಲುಕ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಇನ್ನು ವಿಶೇಷ ಎಂದರೆ ಸಂಜಯ್ ದತ್ ಪಾತ್ರ, ಫವರ್ ಫುಲ್ ಅಧೀರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್ ಮುಖ ಟೀಸರ್ ನಲ್ಲಿ ದರ್ಶನವಾಗಿಲ್ಲ. ಟೀಸರ್ ನೋಡಿದವರಿಗೆ ಸಂಜಯ್ ದತ್ ದರ್ಶನ ಆಗದೆ ಇರುವುದು ನಿರಾಸೆ ಮೂಡಿಸಿದೆ.

  ಕೆಜಿಎಫ್-2 ಚಿತ್ರದಲ್ಲಿ ಸಂಜಯ್ ದತ್ ಪಾತ್ರ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದೆ. ತುಂಬಾ ಪವರ್ ಫುಲ್ ಪಾತ್ರವಾಗಿದ್ದರಿಂದ ಸಂಜಯ್ ದತ್ ಗಾಗಿಯೇ ಪ್ರತ್ಯೇಕವಾದ ಟೀಸರ್ ರಿಲೀಸ್ ಮಾಡುವ ಪ್ಲಾನ್ ಸಿನಿಮಾತಂಡದ್ದು ಎನ್ನುವ ಮಾತು ಕೇಳಿಬರುತ್ತಿದೆ. ಭಯಾನಕ ಲುಕ್ ನಲ್ಲಿ ಕಾಣಿಸಿಕೊಂಡಿರುವ ಅಧೀರ ಸಂಜಯ್ ಪಾತ್ರ ಟೀಸರ್ ನಲ್ಲಿ ಮಿಂಚಿನಂತೆ ಬಂದು ಹೋಗುವ ಹಾಗೆ ತೋರಿಸುವ ಬದಲು ಪ್ರತ್ಯೇಕ ಟೀಸರ್ ಬಿಡುಗಡೆ ಮಾಡುವುದು ಸಿನಿಮಾತಂಡದ ಲೆಕ್ಕಾಚಾರ ಎನ್ನಲಾಗಿದೆ.

  ಸದ್ಯದಲ್ಲೇ ಸಂಜಯ್ ದತ್ ಗಾಗಿ ಮತ್ತೊಂದು ಟೀಸರ್ ರಿಲೀಸ್ ಮಾಡಿದರು ಅಚ್ಚರಿ ಇಲ್ಲ. ಇದೀಗ ರಿಲೀಸ್ ಆಗಿರುವ ಟೀಸರ್ ನಲ್ಲಿ ಬೆನ್ನುತೋರಿಸಿ ನಿಂತಿರುವ ಅಧೀರನ ದರ್ಶನ ಮಾತ್ರವಾಗಿದೆ. ಹಾಗಾಗಿ ಸಂಜಯ್ ದತ್ ಪಾತ್ರದ ಮೇಲಿದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ ಅಭಿಮಾನಿಗಳು.

  English summary
  KGF-2 teaser release: Adheera Sanjay Dutt face not appearing in KGF-2 teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X