KGF 2 Toofan Song: 'ತೂಫಾನ್' ಭಾರತದ ನಂ1 ಹಾಡಾಗಿದ್ದು ಹೇಗೆ?
'ಕೆಜಿಎಫ್ 2' ಚಿತ್ರದ ಅಬ್ಬರ ಶುರುವಾಗಿದೆ. ಚಿತ್ರದ ಮೊದಲ ಹಾಡು 'ತೂಫಾನ್' ರಿಲೀಸ್ ಆಗಿದೆ. ತೂಫಾನ್ ಹಾಡು ರಿಲೀಸ್ ಆಗುತ್ತಲೆ ವೈರಲ್ ಆಗಿದೆ. ಹಾಡಿನ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಈ ಹಾಡು ಹೆಸರಿಗೆ ತಕ್ಕ ಹಾಗೆ ತೂಫಾನ್ ರೀತಿಯಲ್ಲಿ ಬಂದು ದಾಖಲೆಗಳನ್ನು ಸರಿಗಟ್ಟಿ ಹೊಸ ದಾಖಲೆ ಬರೆದಿದೆ.
ಈ ಹಾಡಿನ ಮೂಲಕ 'ಕೆಜಿಎಫ್ 2' ಚಿತ್ರದ ದಾಖಲೆ ಲಿಸ್ಟ್‌ಗೆ ಮತ್ತೊಂದು ದಾಖಲೆ ಸೇರಿಕೊಂಡಿದೆ. ಈಗಾಗಲೇ ಹೆಚ್ಚು ವೀಕ್ಷಣೆ ಪಡೆದು ಟಾಪ್‌ನಲ್ಲಿ ಇದ್ದ ತಮಿಳಿನ 'ಬೀಸ್ಟ್' ಚಿತ್ರದ ಹಾಡನ್ನು ಕಡಿಮೆ ಸಮಯದಲ್ಲೇ 'ತೂಫಾನ್' ಹಿಂದಿಕ್ಕಿದೆ.
'ತೂಫಾನ್' ಹಾಡಿನಷ್ಟು ಯಾವ ಲಿರಿಕಲ್ ವಿಡಿಯೋ ಕೂಡ ಇಷ್ಟು ವೀವ್ಸ್ ಪಡೆದುಕೊಂಡಿಲ್ಲ. ಐದು ಭಾಷೆಗಳಲ್ಲಿ 26 ಮಿಲಿಯನ್‌ಗೂ ಅಧಿಕ ವೀಕ್ಷಣೆ ಮತ್ತು 2 ಮಿಲಿಯನ್‌ಗೂ ಅಧಿಕ ಲೈಕ್ಸ್ ಪಡೆದಿರುವ ಕಾರಣ, 24 ಗಂಟೆಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಲಿರಿಕಲ್ ಸಾಂಗ್ ಇದಾಗಿದೆ.

ಈ ಚಿತ್ರದಲ್ಲಿ ಯಶ್, ಸಂಜಯ್ ದತ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿದ್ದಾರೆ ಮತ್ತು ಇದನ್ನು ಪ್ರಶಾಂತ್ ನೀಲ್ ಅವರು ನಿರ್ದೇಶಿಸುತ್ತಿದ್ದಾರೆ. ಹಾಡಿನ ಬಳಿಕ ಚಿತ್ರದ ಟ್ರೈಲರ್ ರಿಲೀಸ್‌ಗಾಗಿ ಕೆಜಿಎಫ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಚಿತ್ರದ ಟ್ರೈಲರ್ ಯುಟ್ಯೂಬ್‌ನಲ್ಲಿ ಚಂಡಮಾರುತ್ತವನ್ನೇ ಸೃಷ್ಟಿಸುತ್ತಾ ಅನ್ನುವುದನ್ನು ನೋಡ್ಬೇಕು.
'ಕೆಜಿಎಫ್ 2' 2022 ರ ಏಪ್ರಿಲ್ 14 ರಂದು ತೆರೆಗೆ ಬರುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಒಮ್ಮೆಲೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಮತ್ತೊಂದು ಇತಿಹಾಸ ಬರೆಯಲು ಯಶ್ ಮತ್ತು 'ಕೆಜಿಎಫ್ 2' ತಂಡ ಸಜ್ಜಾಗಿದೆ.


Click it and Unblock the Notifications











