For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ಟ್ರೇಲರ್‌: ಸುಳ್ಳು ಸುದ್ದಿ ನಂಬಬೇಡಿ ಎಂದ ಚಿತ್ರತಂಡ

  |

  'ಕೆಜಿಎಫ್ 2' ಬಿಡುಗಡೆಗೆ 50 ಕ್ಕಿಂತಲೂ ಕಡಿಮೆ ದಿನಗಳು ಬಾಕಿ ಇವೆ. ಪರಭಾಷೆಯ ಬಿಗ್ ಬಜೆಟ್ ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆ ಆಗುತ್ತಿವೆ. ಆದರೆ 'ಕೆಜಿಎಫ್ 2' ಚಿತ್ರತಂಡ ಈ ವರೆಗೆ ಅಧಿಕೃತವಾಗಿ ಪ್ರಚಾರ ಆರಂಭಿಸಿಲ್ಲ.

  ಆದರೆ ಕೆಲವು ದಿನಗಳ ಹಿಂದೆ 'ಕೆಜಿಎಫ್ 2' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯನ್ನು 'ಕೆಜಿಎಫ್2' ಸಿನಿಮಾದ ಯಾವ ಅಪ್‌ಡೇಟ್ ನಿಮಗೆ ಬೇಕು? ಎಂಬ ಪ್ರಶ್ನೆಯನ್ನು ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಕೇಳಲಾಗಿತ್ತು.

  'ಕೆಜಿಎಫ್ 2' ರಿಲೀಸ್‌ಗೆ 50 ದಿನಗಳು ಮಾತ್ರ ಬಾಕಿ: 'ರಾಧೆಶ್ಯಾಮ್', 'RRR' ಜೊತೆ ಮಾಸ್ಟರ್‌ ಪ್ಲ್ಯಾನ್?'ಕೆಜಿಎಫ್ 2' ರಿಲೀಸ್‌ಗೆ 50 ದಿನಗಳು ಮಾತ್ರ ಬಾಕಿ: 'ರಾಧೆಶ್ಯಾಮ್', 'RRR' ಜೊತೆ ಮಾಸ್ಟರ್‌ ಪ್ಲ್ಯಾನ್?

  ಹಾಡು, ಸರ್ಪ್ರೈಸ್ ಅಪ್‌ಡೇಟ್ ಹಾಗೂ ಟ್ರೇಲರ್ ಈ ಮೂರು ಆಯ್ಕೆಗಳ ನಡುವೆ ಟ್ರೇಲರ್ ಅನ್ನು ಅತಿ ಹೆಚ್ಚು ಮಂದಿ ಆಯ್ಕೆ ಮಾಡಿದ್ದರು. ಹಾಗಾಗಿ ಇದೀಗ ಸಿನಿಮಾದ ಟ್ರೇಲರ್ ಅನ್ನೇ ಮೊದಲು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ಹೊಂಬಾಳೆ, ''ಎಲ್ಲರೂ ಕಾತರದಿಂದ ಕಾಯುತ್ತಿರಿ ಶೀಘ್ರವೇ ಟ್ರೇಲರ್ ಬರಲಿದೆ'' ಎಂದಿದೆ. ಆದರೆ ಈ ನಡುವೆ ಕೆಲವರು 'ಕೆಜಿಎಫ್ 2' ಟ್ರೇಲರ್ ಬಗ್ಗೆ ಸುಳ್ಳು ಸುದ್ದಿ ಹರಡಿಸಲು ಆರಂಭ ಮಾಡಿದ್ದಾರೆ.

  'ಕೆಜಿಎಫ್ 2' ಬಗ್ಗೆ ಸುಳ್ಳು ಸುದ್ದಿ

  'ಕೆಜಿಎಫ್ 2' ಬಗ್ಗೆ ಸುಳ್ಳು ಸುದ್ದಿ

  'ಕೆಜಿಎಫ್ 2' ಸಿನಿಮಾದ ಟ್ರೇಲರ್ ಮಾರ್ಚ್ 08 ರಂದು ಸಂಜೆ 6:12 ಕ್ಕೆ ಬಿಡುಗಡೆ ಆಗುತ್ತದೆ ಎಂದು ಹಲವು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸುಳ್ಳೆಂದು ಚಿತ್ರತಂಡ ಸ್ಪಷ್ಟಪಡಿಸಿದೆ. 'ಕೆಜಿಎಫ್ 2' ಟ್ರೇಲರ್ ಬಿಡುಗಡೆ ಬಗ್ಗೆ ಟ್ವೀಟ್ ಮಾಡಿರುವ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ''ಕೆಜಿಫ್ 2' ಟ್ರೇಲರ್‌ ಬಗ್ಗೆ ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ, ಸಿನಿಮಾದ ಕುರಿತಾದ ಸುದ್ದಿಗಳು ಅಧಿಕೃತ ಖಾತೆಗಳಿಂದಷ್ಟೆ ಬರುತ್ತವೆ'' ಎಂದಿದ್ದಾರೆ.

  'ಕೆಜಿಎಫ್ 2', 'ವಿಕ್ರಾಂತ್ ರೋಣ' ಸಿನಿಮಾಗಳ ಬಗ್ಗೆ ನಟ ಕಾರ್ತಿಕೇಯ ಮಾತು'ಕೆಜಿಎಫ್ 2', 'ವಿಕ್ರಾಂತ್ ರೋಣ' ಸಿನಿಮಾಗಳ ಬಗ್ಗೆ ನಟ ಕಾರ್ತಿಕೇಯ ಮಾತು

  ಟೀಸರ್ ಸೋರಿಕೆ ಆಗಿತ್ತು

  ಟೀಸರ್ ಸೋರಿಕೆ ಆಗಿತ್ತು

  ''ಕೆಜಿಎಫ್ 2' ಸಿನಿಮಾದ ಟೀಸರ್ ಕಳೆದ ವರ್ಷ ಬಿಡುಗಡೆ ಆಗಿತ್ತು, ಆದರೆ ಆಗ ಚಿತ್ರತಂಡವು ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡುವ ಮುನ್ನವೇ ಅದೇ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಆಗಿಬಿಟ್ಟಿತು. ಸೋರಿಕೆ ಆದರೂ ಸಹ 'ಕೆಜಿಎಫ್ 2' ಟೀಸರ್ ಅತಿ ಬೇಗನೆ ಕೋಟ್ಯಂತರ ವೀವ್ಸ್ ಗಳಿಸಿ ದಾಖಲೆಯನ್ನೇ ಬರೆಯಿತು. ಆದರೆ ಕಳೆದ ಬಾರಿಯಂತೆ ಈ ಬಾರಿ ಟ್ರೇಲರ್ ಲೀಕ್ ಆಗದಂತೆ ಹೆಚ್ಚಿನ ಎಚ್ಚರಿಕೆಯನ್ನು ಚಿತ್ರತಂಡ ವಹಿಸಿದೆ ಎನ್ನಲಾಗುತ್ತಿದೆ.

  ಕಳೆದ ಬಾರಿ ಭರ್ಜರಿ ಪ್ರಚಾರ

  ಕಳೆದ ಬಾರಿ ಭರ್ಜರಿ ಪ್ರಚಾರ

  'ಕೆಜಿಎಫ್ 2' ಸಿನಿಮಾದ ಪ್ರಚಾರ ಅಧಿಕೃತವಾಗಿ ಇನ್ನೂ ಆರಂಭವಾಗಿಲ್ಲ. 'ಕೆಜಿಎಫ್: ಚಾಪ್ಟರ್ ಒನ್' ಸಿನಿಮಾದ ಪ್ರಚಾರವನ್ನು ಹಲವು ರಾಜ್ಯಗಳಲ್ಲಿ, ಹಲವು ವಿಧಗಳಲ್ಲಿ ಮಾಡಲಾಗಿತ್ತು. ಹಿಂದಿಯ ಜನಪ್ರಿಯ ಯೂಟ್ಯೂಬ್ ಚಾನೆಲ್‌ಗಳಿಗೂ ಯಶ್ ಹೋಗಿ ಸಂದರ್ಶನ ನೀಡಿದ್ದರು. ತೆಲುಗು, ತಮಿಳಿನಲ್ಲಿಯೂ ಹಲವು ಸಂದರ್ಶನಗಳನ್ನು ಮಾಡಿದ್ದರು. ಆದರೆ ಈ ಬಾರಿ ಬೇರೆಯದೇ ಯೋಜನೆಯೊಂದಿಗೆ ಚಿತ್ರತಂಡ ಪ್ರಚಾರಕ್ಕೆ ಇಳಿಯಲಿದೆ. ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಯಶ್ ಹಾಗೂ ಇತರರು ಕೆಲ ದಿನಗಳ ಹಿಂದಷ್ಟೆ ಕರಾವಳಿ ಭಾಗದ ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಕೆಲವೇ ದಿನಗಳಲ್ಲಿ ಪ್ರಚಾರ ಕಾರ್ಯ ಆರಂಭವಾಗಲಿದೆ.

  ಪ್ರಧಾನಿ ಕಾರ್ಯಾಲಯದಿಂದ ವಿಜಯ್ ಕಿರಗಂದೂರ್‌ಗೆ ಪತ್ರ..? ಬೆಸ್ತು ಬಿದ್ದ ಹೊಂಬಾಳೆ ಟೀಂ!ಪ್ರಧಾನಿ ಕಾರ್ಯಾಲಯದಿಂದ ವಿಜಯ್ ಕಿರಗಂದೂರ್‌ಗೆ ಪತ್ರ..? ಬೆಸ್ತು ಬಿದ್ದ ಹೊಂಬಾಳೆ ಟೀಂ!

  ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ

  ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ

  'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. ಈ ಬಾರಿ ವಿದೇಶಗಳಲ್ಲಿಯೂ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ. ವಿದೇಶದಲ್ಲಿಯೂ ಸಿನಿಮಾದ ಪ್ರಚಾರ ಕಾರ್ಯ ನಡೆಯಲಿದೆ. 'ಕೆಜಿಫ್ 2' ಭಾರಿ ಬೇಡಿಕೆ ಇದ್ದು, ಈಗಾಗಲೇ ಆಡಿಯೋ ಹಕ್ಕುಗಳು ಲಹರಿ ಆಡಿಯೋ ಸಂಸ್ಥೆಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. 'ಕೆಜಿಎಫ್ 2' ಸಿನಿಮಾದಲ್ಲಿ ಯಶ್ ಜೊತೆಗೆ, ಬಾಲಿವುಡ್‌ನ ಸಂಜಯ್ ದತ್, ರವೀನಾ ಟಂಡನ್, ನಟ ಪ್ರಕಾಶ್ ರೈ, ರಾವ್ ರಮೇಶ್ ಇನ್ನೂ ಹಲವರು ನಟಿಸಿದ್ದಾರೆ.

  English summary
  KGF 2 team warned fans not to believe fake news about KGF 2 movie trailer. Some fake news spreading about KGF 2 trailer release date.
  Monday, February 28, 2022, 20:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X