KGF 2 Trailer : 'ಕೆಜಿಎಫ್ 2' ಟ್ರೈಲರ್ ರಿಲೀಸ್‌ಗೆ ವಿಶೇಷ ಪ್ಲಾನ್ ಮಾಡಿಕೊಂಡ ಯಶ್ ಫ್ಯಾನ್ಸ್!

ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ 'ಕೆಜಿಎಫ್ 2' ಸಿನಿಮಾ ಏಪ್ರಿಲ್ 14ರಂದು ವರ್ಲ್ಡ್‌ವೈಡ್ ರಿಲೀಸ್ ಆಗುತ್ತಿದೆ. ಚಿತ್ರ ರಿಲೀಸ್‌ಗೂ ಮೊದಲೇ ಚಿತ್ರದ ಪ್ರಮೋಷನ್ ದೊಡ್ಡ ಮಟ್ಟದಲ್ಲಿ ಮಾಡಲು ಅಭಿಮಾನಿಗಳು ಹಾಗೂ ಚಿತ್ರತಂಡ ಕಾತುರದಿಂದ ಕಾಯುತ್ತಿದ್ದಾರೆ.

ಇತ್ತೀಚೆಗೆ 'ಕೆಜಿಎಫ್ 2' ಚಿತ್ರದ ಮೊದಲ ಲಿರಿಕಲ್ ಸಾಂಗ್ 'ತೂಫಾನ್' ಅನ್ನು ರಿಲೀಸ್ ಮಾಡಿತ್ತು. ಈ ಹಾಡು ಬಿಡುಗಡೆಯಾಗುತ್ತಿದ್ದಂತೆ ದಾಖಲೆಗಳನ್ನು ಸೃಷ್ಟಿಸಲು ಆರಂಭಿಸಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‌ನಲ್ಲಿ ನಂ 1 ಸ್ವಾನದಲ್ಲಿತ್ತು. ಚಿತ್ರತಂಡ ಈಗಾಗಲೇ ಅನೌನ್ಸ್ ಮಾಡಿದಂತೆ ಮಾರ್ಚ್ 27ಕ್ಕೆ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ರಿಲೀಸ್ ಮಾಡುತ್ತಿದೆ.

'ಕೆಜಿಎಫ್ 2' ಟ್ರೈಲರ್ ರಿಲೀಸ್ ಮಾಡಲು ಚಿತ್ರತಂಡ ದೊಡ್ಡ ಪ್ಲಾನ್ ಮಾಡಿಕೊಂಡಿದ್ದೆ. ಇದರ ಜೊತೆಗೆ ಅಭಿಮಾನಿಗಳು ಕೂಡ 'ಕೆಜಿಎಫ್ 2' ಟ್ರೈಲರ್‌ ಅನ್ನು ಸಂಭ್ರಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ದೊಡ್ಡ ತಯಾರಿಯನ್ನೇ ಮಾಡಿಕೊಂಡಿದ್ದಾರೆ. ಎಲ್‌ಇಡಿ ಪರದೆ ಮೇಲೆ ಈ ಚಿತ್ರದ ಟ್ರೈಲರ್ ನೋಡಲು ಸಜ್ಜಾಗಿದ್ದಾರೆ.

ಟ್ರೈಲರ್ ಕಣ್ತುಂಬಿಕೊಳ್ಳುವ ಕಾತುರ

ಟ್ರೈಲರ್ ಕಣ್ತುಂಬಿಕೊಳ್ಳುವ ಕಾತುರ

'ಕೆಜಿಎಫ್ 2' ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಒಮ್ಮೆ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ಅನ್ನು ಕಣ್ತುಂಬಿಕೊಳ್ಳಬೇಕು ಎಂಬ ಕಾತುರದಲ್ಲಿದ್ದಾರೆ. ಹೀಗಾಗಿ ಟ್ರೈಲರ್‌ ರಿಲೀಸ್‌ಗೆ ಚಿತ್ರತಂಡ ದೊಡ್ಡ ತಯಾರಿಯನ್ನೇ ಮಾಡಿಕೊಂಡಿದೆ. ಇತ್ತ ಅಭಿಮಾನಿಗಳು ಕೂಡ ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಬಹಳ ಅದ್ಧೂರಿಯಾಗಿ ಟ್ರೈಲರ್‌ ಅನ್ನು ಸ್ವಾಗತ ಮಾಡಲು ಸಜ್ಜಾಗಿದ್ದಾರೆ.

ಎಲ್‍ಇಡಿ ಪರದೆಯಲ್ಲಿ ಟ್ರೇಲರ್ ವೀಕ್ಷಣೆಗೆ ವ್ಯವಸ್ಥೆ

ಎಲ್‍ಇಡಿ ಪರದೆಯಲ್ಲಿ ಟ್ರೇಲರ್ ವೀಕ್ಷಣೆಗೆ ವ್ಯವಸ್ಥೆ

ದೊಡ್ಡಬಳ್ಳಾಪುರದಲ್ಲಿ 'ಕೆಜಿಎಫ್ 2' ಚಿತ್ರದ ಟ್ರೈಲರ್ ಅನ್ನು ಬೃಹತ್ ಎಲ್‍ಇಡಿ ಪರದೆಯ ಮೂಲಕ ವೀಕ್ಷಣೆ ಮಾಡಲು ಯಶ್ ಅಭಿಮಾನಿಗಳು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ದೊಡ್ಡಬಳ್ಳಾಪುರ ತಾಲೂಕು ಘಟಕದಿಂದ ಬೃಹತ್ ಎಲ್‍ಇಡಿ ಪರದೆ ಮೂಲಕ ಟ್ರೈಲರ್ ಪ್ರದರ್ಶನಕ್ಕೆ ತಯಾರಿ ಮಾಡಿಕೊಂಡಿದೆ. ದೊಡ್ಡ ಗ್ರೌಂಡ್‌ನಲ್ಲಿ ಟ್ರೈಲರ್ ವೀಕ್ಷಣೆಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಅದೆಷ್ಟೇ ಅಭಿಮಾನಿಗಳು ಆಗಮಿಸಿದರೂ ಟ್ರೈಲರ್ ನೋಡಲು ಅನುಕೂಲ ಆಗುವಂತೆ ತಯಾರಿ ಮಾಡುತ್ತಿದ್ದಾರೆ ಫ್ಯಾನ್ಸ್!

ಸಾರ್ವಜನಿಕರಿಗೆ ಟ್ರೈಲರ್ ವೀಕ್ಷಿಸಲು ವ್ಯವಸ್ಥೆ

ಸಾರ್ವಜನಿಕರಿಗೆ ಟ್ರೈಲರ್ ವೀಕ್ಷಿಸಲು ವ್ಯವಸ್ಥೆ

'ಕೆಜಿಎಫ್ 2' ಟ್ರೈಲರ್ ವೀಕ್ಷಣೆ ಬಗ್ಗೆ ಅಭಿಮಾನಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷ ಯಶವಂತ್ ಆರಾಧ್ಯ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. "ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಟ್ರೈಲರ್ ಮಾರ್ಚ್ 27ರಂದು ಸಂಜೆ 6.40ಕ್ಕೆ ರಿಲೀಸ್ ಆಗಲಿರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಬೃಹತ್ ಎಲ್‍ಇಡಿ ಪರದೆ ಮೂಲಕ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಟ್ರೈಲರ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.

Recommended Video

KGF 2 Trailer | 7000 ಸಾವಿರ ಸ್ಕ್ರೀನ್, ಅದ್ದೂರಿ ಟ್ರೈಲರ್ ರಿಲೀಸ್, ಇದು KGF 2 ಹವಾ | KGF 2 | Yash
ಸ್ಟಾರ್ ಹೋಟೇಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ

ಸ್ಟಾರ್ ಹೋಟೇಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ

'ಕೆಜಿಎಫ್ 2' ಟ್ರೈಲರ್‌ ಅನ್ನು ಮಾರ್ಚ್ 27 ಕ್ಕೆ ರಿಲೀಸ್ ಮಾಡಲು ಇದೀಗ ಇಡೀ ಚಿತ್ರತಂಡವೇ ಸಿದ್ಧತೆಯನ್ನು ಮಾಡಿಕೊಂಡಿದೆ. 'ಕೆಜಿಎಫ್ 2' ಟ್ರೈಲರ್‌ ನಗರದ ಸ್ಟಾರ್ ಹೋಟೇಲ್‌ನಲ್ಲಿ ಬಹಳ ಅದ್ಧೂರಿಯಾಗಿ ನೆರವೇರಲಿದ್ದು, ಸುದ್ದಿಗೋಷ್ಟಿಯನ್ನು ಮಾಡಿ ಟ್ರೈಲರ್ ಲಾಂಚ್ ಮಾಡಲಿದೆ ಚಿತ್ರತಂಡ. ಇನ್ನು 'ಕೆಜಿಎಫ್ 2' ಟ್ರೈಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಬೇರೆ ಬೇರೆ ಭಾಷೆಯ 200ಕ್ಕೂ ಹೆಚ್ಚು ಪತ್ರಕರ್ತರು ಭಾಗಿ ಆಗಲಿದ್ದು, ಚಿತ್ರತಂಡ ಹಾಗೂ ಮಾಧ್ಯಮದವರ ಸಂವಾದ ಕೂಡ ನಡೆಯಲಿದೆ. ಶಿವರಾಜ್‌ಕುಮಾರ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಸೇರಿದಂತೆ ಈಡೀ ಚಿತ್ರತಂಡವೇ ಭಾಗಿ ಆಗಲಿದೆ.

More from Filmibeat

English summary
Kgf 2 film trailer launch at March 27th. here is fans preparation for trailer release. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X