'KGF 2' ಜೊತೆ 'ವಿಕ್ರಾಂತ್ ರೋಣ' ಟೀಸರ್ ರಿಲೀಸ್!
ಕನ್ನಡದ ಸ್ಟಾರ್ ನಟರಾದ ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಚ್ಚ ಸುದೀಪ್ ನಡುವೆ ಸಿನಿಮಾಗಳ ಬಗ್ಗೆ ಹೊಸದೊಂದು ಸುದ್ದಿ ಬಂದಿದೆ. ಈ ಇಬ್ಬರು ನಟರ ಸಿನಿಮಾಗಳು ಒಟ್ಟಿಗೆ ತೆರೆಗೆ ಅಪ್ಪಳಿಸುತ್ತಿವೆ. ಅದು ಹೇಗೆ ಸಾಧ್ಯ ಅಂತೀರ ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ...
ಈ ಜೋಡಿ ಒಂದಾಗಿ ಸಿಹಿ ಸುದ್ದಿ ಕೊಡುತ್ತೆ ಎನ್ನವ ಬಗ್ಗೆ ಸೂಚನೆ ಸಿಕ್ಕಿದೆ. ಈ ಜೋಡಿ ಬಗ್ಗೆ ಈಗ ಮಾತನಾಡಲು ಕಾರಣ ಕನ್ನಡದ ಕೆಜಿಎಫ್ ಮತ್ತು ವಿಕ್ರಾಂತ್ ರೋಣ ಸಿನಿಮಾ. ಹೌದು ಕೆಜಿಎಫ್ ಸಿನಿಮಾ ರಿಲೀಸ್‌ಗೆ ರೆಡಿ ಆಗುತ್ತಿದ್ದ ಹಾಗೆ ಹೊಸ ವಿಚಾರ ಒಂದು ಹೊರ ಬಿದ್ದಿದೆ. ಕೆಜಿಎಫ್ ಜೊತೆಗೆ ಸುದೀಪ್ ಚಿತ್ರದ ಟೀಸರ್ ಬರಲಿದೆಯಂತೆ.
ಹೌದು ವಿಕ್ರಾಂತ್ ರೋಣ ಸಿನಿಮಾದ ಟೀಸರ್ ರಿಲೀಸ್‌ಗೆ ಕೌನ್ ಡೌನ್ ಶುರುವಾಗಿದೆ. ಈ ಚಿತ್ರದ ಟೀಸರ್ ಕೆಜಿಎಫ್ ಚಿತ್ರದ ಜೊತೆಗೆ ಬಿಡುಗಡೆ ಆಗುತ್ತಂತೆ. ಅಂದರೆ ಕೆಜಿಎಫ್ ಸಿನಿಮಾ ಮಧ್ಯಂತರದಲ್ಲಿ ವಿಕ್ರಾಂತ್ ರೋಣ ಚಿತ್ರದ ಟೀಸರ್, ಚಿತ್ರ ಮಂದಿರಗಳಲ್ಲಿ ಬಿಗ್ ಸ್ಕ್ರೀನ್ ಮೇಲೆ ಮೂಡಿ ಬರಲಿದೆ.

ಮುನಿಸು ಮರೆತು ಬಿಟ್ಟರೆ ಸುದೀಪ್, ಯಶ್!
ಕಿಚ್ಚ ಸುದೀಪ್ ಮತ್ತು ಯಶ್ ಇಬ್ಬರ ಸಿನಿಮಾಗಳ ಒಟ್ಟಿಗೆ ತೆರೆಗೆ ಬರ್ತಿವೆ ಎಂದರೆ ಅದು ಸಣ್ಣ ವಿಚಾರ ಅಲ್ಲ. ಯಾಕೆಂದರೆ ಕಿಚ್ಚ ಮತ್ತು ಯಶ್ ಇಬ್ಬರೂ ಕೂಡ ಕನ್ನಡ ಚಿತ್ರರಂಗದ ಸ್ಟಾರ್ ನಟರು. ಈಗ ಕೆಜಿಎಫ್ ಸಿನಿಮಾದ ಜೊತೆಗೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಟೀಸರ್ ಬರ್ತಿದೆ. ಹಾಗಾಗಿ ಈ ಇಬ್ಬರು ನಟರು ಮುನಿಸು ಮರೆತು ಒಂದಾಗಿದ್ದಾರಾ ಎನ್ನುವ ಕುತೂಹಲ ಮೂಡಿದೆ. ಆದರೆ ಮುನಿಸು ಇತ್ತು ಎನ್ನುವ ಬಗ್ಗೆ ಕೇವಲ ಊಹಾ ಪೋಹಗಳು ಹಬ್ಬಿದ್ದು ಬಿಟ್ಟರೆ ನಿಜಾಂಶ ಬೇರೆನೇ ಇದೆ.

ಇದು ಕೇಲವ ಸಿನಿಮಾ ಬ್ಯುಸಿನೆಸ್ ಮಾತ್ರನಾ?
ಈ ಹಿಂದೆ ಸುದೀಪ್ ಮತ್ತು ಯಶ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನಲಾಗಿತ್ತು. ಆದರೆ ಅದು ಈಗ ಹಳೆ ಸುದ್ದಿ ಆಗಿದೆ. ಈಗ ಈ ಜೋಡಿ ತಮ್ಮ ಸಿನಿಮಾಗಳ ಮೂಲಕ ಇಬ್ಬರ ನಡುವೆ ಅಂತಹ ಮುನಿಸು ಏನಿಲ್ಲಾ ಎನ್ನುವುದನ್ನು ತೋರಿಸಿದ್ದಾರೆ. ಸದ್ಯ ಕನ್ನಡದಲ್ಲಿ ಒಬ್ಬರನ್ನೋಬ್ಬರು ಸಪೋರ್ಟ್ ಮಾಡುತ್ತಾ, ಒಂದು ಸಿನಿಮಾಗೆ ಮತ್ತೊಂದು ಚಿತ್ರದ ತಂಡದ ಸಹಕಾರ ಪ್ರತೀ ಹಂತದಲ್ಲೂ ಮುಂದುವರೆದಿದೆ. ಹಾಗಾಗಿ ಈಗ ಸಿನಿಮಾಗಳು ಗೆಲ್ಲುವುದು, ಕನ್ನಡ ಚಿತ್ರರಂಗ ಮತ್ತಷ್ಟು ಮುಂದೆ ಹೋಗುವ ಗುರಿಯನ್ನು ಬಹುತೇಹ ಎಲ್ಲರೂ ಹೊಂದಿದ್ದಾರೆ.

ಯಶ್ ವಿಡಿಯೋ ಮೂಲಕ ಕೋಲ್ಡ್ ವಾರ್ ಬಹಿರಂಗ!
ನಟ ಸುದೀಪ್ ಮತ್ತು ಯಶ್ ನಡುವೆ ಎಲ್ಲವೂ ಸರಿ ಇದೆ ಎಂದು ತಿಳಿದುಕೊಂಡಿದ್ದವರಿಗೆ ಶಾಕ್ ಕೊಟ್ಟಿದ್ದು ಯಶ್ ಹಂಚಿಕೊಂಡಿದ್ದ ಒಂದು ವಿಡಿಯೋ. 2019ರಲ್ಲಿ ನಟ ಸುದೀಪ್ ಯಶ್‌ಗೆ ವರ್ಕೌಟ್ ಚಾಲೆಂಜ್ ಒಂದನ್ನು ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದರು. ಈ ಚಾಲೆಂಜ್ ಸ್ವೀಕರಿಸಿದ ನಟ ಯಶ್ ವಿಡಿಯೋ ಮಾಡಿದರು. ಅದರೆ ಅವರು ವರ್ಕೌಟ್ ಮಾಡುವ ಬದಲು, ಬೇರೆ ಯಾರದ್ದೋ ಕೈಯಲ್ಲಿ ವರ್ಕೌಟ್ ಮಾಡಿಸಿದರು. ಅಲ್ಲದೆ ವಿಡಿಯೋದಲ್ಲಿ ಸುದೀಪ್ ಅವರಿಗೆ ಏಕವಚನದಲ್ಲಿ ಕರೆದಿದ್ದು ಶಾಕಿಂಗ್ ಆಗಿತ್ತು. ಆಗಲೇ ಇವರ ನಡುವಿನ ಶೀಲತ ಸಮರದ ಬಗ್ಗೆ ಜಗತ್ತಿಗೆ ಗೊತ್ತಾಗಿದ್ದು. ಇನ್ನು ಯಾವುದೇ ವಿಚಾರ ಬಂದರು ಕೂಡ ಇಬ್ಬರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಾರ್‌ಗೆ ಇಳಿದು ಬಿಡುತ್ತಾರೆ.

ಸುದೀಪ್ ಯಶ್ ಒಂದಾಗಿ ಬರ್ತಾರ?
ಕನ್ನಡ ಚಿತ್ರರಂಗದಲ್ಲಿ ಒಂದು ಕಡೆ ನಟ ದರ್ಶನ್ ಮತ್ತು ಸುದೀಪ್, ಮತ್ತೊಂದು ಕಡೆ ನಟ ಸುದೀಪ್ ಮತ್ತು ಯಶ್ ನಡುವೆ ಎಲ್ಲವೂ ಸರಿ ಇಲ್ಲ. ಹಾಗೆ ನೋದರೆ ದರ್ಶನ್ ಮತ್ತು ಯಶ್ ಕೂಡ ಅಷ್ಟಕ್ಕಷ್ಟೆ. ಆದರೆ ಅಪ್ಪು ನಿಧನದ ಬಳಿಕ ಈ ಜೋಡಿ ಒಂದಾಗುತ್ತದೆ ಎನ್ನುವ ನಿರೀಕ್ಷೆಗಳು ಮೂಡಿದ್ದವು. ಅದೆಲ್ಲವೂ ಸುಳ್ಳಾಗಿದೆ. ಈಗಲಾದರು ಈ ಸ್ಟಾರ್ ಜೋಡಿ ಒಟ್ಟಾದರೆ ಕನ್ನಡ ಚಿತ್ರರಂಗದ ಶಕ್ತಿ ದುಪ್ಪಟ್ಟು ಆಗುವುದರಲ್ಲಿ ಅನುಮಾವನೇ ಇಲ್ಲ.


Click it and Unblock the Notifications











