KGF 3: ಇದು ಪ್ಯಾನ್‌ವರ್ಲ್ಡ್ ಸಿನಿಮಾ ಆಗಲಿದೆ, ಯಶ್ ಹೇಳಿದ್ದೇನು?

'ಕೆಜಿಎಫ್ ಚಾಪಕ್ಟರ್ 2' ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅದ್ದೂರಿಯಾಗಿ ಕಲೆಕ್ಷನ್ ಮಾಡಿದೆ. ಏಪ್ರಿಲ್ 14ರಂದು 'ಕೆಜಿಎಫ್ 2' ಬಹು ಭಾಷೆಗಳಲ್ಲಿ ತೆರೆಗೆ ಬಂದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಎಲ್ಲಾ ಕಡೆಗಳಲ್ಲಿ ಕೆಜಿಎಫ್ 2 ಚಿತ್ರದ ಅಬ್ಬರ ಎಗ್ಗಿಲ್ಲದೆ ಸಾಗಿದೆ.

ಇರೋ ಬರೋ ದಾಖಲೆಗಳನ್ನು ಮುರಿದು, ನೀರಿಕ್ಷೆಗಳನ್ನು ಮೀರಿ ಮುನ್ನುತ್ತಿದೆ 'ಕೆಜಿಎಫ್ 2'. ಬಾಕ್ಸಾಫೀಸ್‌ನಲ್ಲಿ 'ಕೆಜಿಫ್ 2' ದಾಖಲೆ ಮೇಲೆ, ದಾಖಲೆ ಬರೆಯುತ್ತಿದೆ. ಯಾರು ಅಂದುಕೊಳ್ಳದ ಮಟ್ಟಿಗೆ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು ಭಾರತೀಯ ಚಿತ್ರರಂಗದ ಕಿರೀಟ ಆಗಿದೆ.

'ಕೆಜಿಎಫ್ 2' ರಿಲೀಸ್ ಆಗಿದ್ದು ಆಯ್ತು. ದಾಖಲೆ ಮಾಡಿದ್ದು ಆಯ್ತು. ಕನ್ನಡದ ಚಿತ್ರತಂಡವೊಂದು ಈ ಮಟ್ಟಿಗೆ ಸದ್ದು ಮಾಡಿ, ಇತಿಹಾಸ ಹುಟ್ಟು ಹಾಕಿರುವುದು ಕನ್ನಡಿಗರಿಗೆ ಹೆಮ್ಮೆಯೆ ಸರಿ. ಈಗ 'ಕೆಜಿಎಫ್ 3' ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ. 'ಕೆಜಿಎಫ್ 3' ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಚಿತ್ರ ಆಗಲಿದೆ.

Recommended Video

'KGF 2' 14th Day Collection | ಭಾರತದ ಹೆಚ್ಚು ಗಳಿಕೆಯ ಸಿನಿಮಾ ಆಗತ್ತಾ KGF 2 ? | Yash | Prashanth Neel

ಕೆಜಿಎಫ್ 3 ಪ್ಯಾನ್ ವರ್ಲ್ಡ್ ಚಿತ್ರ!

ಕೆಜಿಎಫ್ 3 ಪ್ಯಾನ್ ವರ್ಲ್ಡ್ ಚಿತ್ರ!

ಕೆಜಿಎಫ್ ಚಿತ್ರ ತಂಡದ ಮುಂದಿನ ಗುರಿ ತುಂಬಾ ದೊಡ್ಡದಾಗಿದೆ. 'ಕೆಜಿಎಫ್ 2' ಚಿತ್ರದ ಮೂಲಕ ಇತಿಹಾಸ ಬರೆದ ಚಿತ್ರ ತಂಡ ಮುಂದಿನ ಪ್ರಯತ್ನದಲ್ಲಿ ಮತ್ತೊಂದು ಇತಿಹಾಸ ಬರೆಯಲು ಸಜ್ಜಾಗಿದೆ. 'ಕೆಜಿಎಫ್ 3' ವಿಶ್ವದ ಮೂಲೆ ಮೂಲೆಯಲ್ಲೂ ಘರ್ಜಿಸಲಿದೆ. ಜಗತ್ತಿನ ಹಲವು ಭಾಷೆಗಳಲ್ಲಿ, ದೇಶಗಳಲ್ಲಿ ಕೆಜಿಎಫ್ ನಾದ ಮೊಳಗಲಿದೆ. ಇದಕ್ಕೆ 'ಕೆಜಿಎಫ್ 2' ಚಿತ್ರ ಕ್ಲೈಮ್ಯಾಕ್ಸ್‌ನಲ್ಲೆ ಸೂಚನೆ ಇಡಲಾಗಿದೆ.

'ಕೆಜಿಎಫ್ 2' ಕ್ಲೈಮ್ಯಾಕ್ಸ್ ಟ್ವಿಸ್ಟ್!

'ಕೆಜಿಎಫ್ 2' ಕ್ಲೈಮ್ಯಾಕ್ಸ್ ಟ್ವಿಸ್ಟ್!

ಕೆಜಿಎಫ್ 2 ಚಿತ್ರವನ್ನು ನೋಡಿದರೆ ನಿಮಗೂ ಕೂಡ ಚಿತ್ರದ ಬಗ್ಗೆ, ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಗೊತ್ತೆ ಇರುತ್ತೆ. ರಾಕಿ ಭಾಯ್ ಅಂತ್ಯ ಆಯ್ತಾ? ಇಲ್ಲ ಮತ್ತೆ ರಾಕಿ ಎದ್ದು ಬರ್ತಾನ ಎನ್ನುವ ಗೊಂದಲವನ್ನು ಪ್ರೇಕ್ಷಕರಲ್ಲಿ ಉಳಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಜೊತೆಗೆ ರಾಕಿ ಭಾಯ್‌ಗೆ ಜಗತ್ತಿನ ಹಲವು ದೇಶಗಳ ಇದ್ದ ನಂಟು, ವ್ಯವಹಾರದ ಬಗ್ಗೆ ರಮಿಕಾ ಸೇನ್ ತಿಳಿದುಕೊಳ್ಳಲು ಮುಂದಾಗುತ್ತಾಳೆ. ಭಾಗ 3ರಲ್ಲಿ ಇದೇ ಕಥೆ ಮುಂದುವರೆಯುತ್ತದೆ ಎನ್ನುವ ನಿರೀಕ್ಷೆ ಹುಟ್ಟಿದೆ.

ಯಶ್ ಹೇಳಿಕೆ 'ಕೆಜಿಎಫ್ 3' ಪ್ಯಾನ್ ವರ್ಲ್ಡ್ ಚಿತ್ರ!

ಯಶ್ ಹೇಳಿಕೆ 'ಕೆಜಿಎಫ್ 3' ಪ್ಯಾನ್ ವರ್ಲ್ಡ್ ಚಿತ್ರ!

ಕೆಜಿಎಫ್ 3 ಚಿತ್ರದ ಬಗ್ಗೆ ಮತ್ತಷ್ಟು ಚರ್ಚೆ ಹುಟ್ಟಿಕೊಳ್ಳಲು ಕಾರಣ ಚಿತ್ರದ ಬಗ್ಗೆ ನಟ ಯಶ್ ನೀಡಿರುವ ಹೇಳಿಕೆ. ಸಂದರ್ಶನ ಒಂದರಲ್ಲಿ ಮಾತನಾಡಿರುವ ಯಶ್ "ಇನ್ನೇನಿದ್ದರು ವಿಶ್ವದ ಬಾಕ್ಸಾಫೀಸ್ ಅನ್ವೇಷಣೆ ಮಾಡಬೇಕು". ಎಂದಿದ್ದಾರೆ. ಇದು ಅವರು ಕೆಜಿಎಫ್ 3 ವಿಶ್ವ ಮಟ್ಟದ ಸಿನಿಮಾ ಆಗಲಿದೆ. ಈ ಮೂಲಕ ವಿಶ್ವಾದ್ಯಂತ ಬಾಕ್ಸಾಫೀಸ್ ಕೊಳ್ಳೆ ಹೊಡೆಯಲು ಸಜ್ಜಾಗಲಿದೆ ಎನ್ನುವ ಸೂಚನೆ ನೀಡಿದ್ದಾರೆ.

ಕನ್ನಡದ ಮೊದಲ ಪ್ಯಾನ್ ವರ್ಲ್ಡ್ ಚಿತ್ರ 'ಕೆಜಿಎಫ್ 3'?

ಕನ್ನಡದ ಮೊದಲ ಪ್ಯಾನ್ ವರ್ಲ್ಡ್ ಚಿತ್ರ 'ಕೆಜಿಎಫ್ 3'?

ಕೆಜಿಎಫ್ ಸಿನಿಮಾ ಮಾಡಿದ್ದೇ ದಾಖಲೆಗಳನ್ನು ಹುಟ್ಟು ಹಾಕಲು, ಇತಿಹಾಸವನ್ನು ಸೃಷ್ಟಿ ಮಾಡಲು ಎನ್ನುವಂತಾಗಿದೆ. ಮೊದಲ ಭಾಗ ರಿಲೀಸ್ ಆಗಿ ಸಾಕಷ್ಟು ಪ್ರಥಮಗಳಿಗೆ ಸಾಕ್ಷಿ ಆಗಿತ್ತು. ಅದೆ ರೀತಿ 'ಕೆಜಿಎಫ್ 2' ಕೂಡ ಹೊಸ ದಾಖಲೆಗಳನ್ನು ಮಾಡಿದೆ. ಇನ್ನು ಈಗ ಕೆಜಿಎಫ್ 3 ಚಿತ್ರದ ಅಬ್ಬರ ಹೇಗೆ ಇರಲಿದೆ ಎನ್ನುವುದನ್ನು ನೋಡಬೇಕಿದೆ. ಆದರೆ ಅದಕ್ಕಾಗಿ ಇನ್ನು ಸುಮಾರು 8 ವರ್ಷಗಳು ಕಾಯಲೇ ಬೇಕು.

More from Filmibeat

English summary
KGF 3 Will Be The Pan World Film, Yash Talk about it, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X