KGF Chapter 3: 'ಖಂಡಿತಾ ಬರುತ್ತೆ' ನಿರ್ದೇಶಕ ಪ್ರಶಾಂತ್ ನೀಲ್ ವ್ಯಂಗ್ಯ?

ಕೆಜಿಎಫ್.. ಕೆಜಿಎಫ್.. ಕೆಜಿಎಫ್ ಸಾಕಷ್ಟು ಮಂದಿ ಕಾಯುತ್ತಿದ್ದ 'ಕೆಜಿಎಫ್ 2' ಚಿತ್ರದ ಟ್ರೈಲರ್ ನಿರೀಕ್ಷೆಗೆ ತೆರೆಗೆ ಬಿದ್ದಿದೆ. ಚಿತ್ರದ ಟ್ರೈಲರ್ ಮಾರ್ಚ್ 27ರಂದು ರಿಲೀಸ್ ಆಗಿದೆ. ಇಷ್ಟು ದಿನ ಇದ್ದ ಎಲ್ಲಾ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಸಿನಿಮಾ ಹೇಗೆ ಇರಲಿದೆ ಅನ್ನೋ ರೋಚಕತೆಯನ್ನು ಸದ್ಯ ರಿಲೀಸ್ ಆಗಿರುವ ಟ್ರೈಲರ್ ಬಿಚ್ಚಿಟ್ಟಿದೆ.

'ಕೆಜಿಎಫ್ 2' ಚಿತ್ರದ ಟ್ರೈಲರ್‌ 5 ಭಾಷೆಗಳಲ್ಲಿ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಏಪ್ರಿಲ್ 14ಕ್ಕೆ 'ಕೆಜಿಎಫ್ 2' ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಈ ಚಿತ್ರ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, 'ಕೆಜಿಎಫ್ 3' ಬಗ್ಗೆ ಕುತೂಹಲ ಹೆಚ್ಚಾಗಿದೆ. 'ಕೆಜಿಎಫ್ 3' ಸಿನಿಮಾ ರಿಲೀಸ್ ಬರುತ್ತಾ? ಅದಕ್ಕಾಗಿ ಚಿತ್ರತಂಡ ಕಥೆಯನ್ನು ರೆಡಿ ಮಾಡಿದೆಯಾ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

'ಕೆಜಿಎಫ್ 3' ಚಿತ್ರದ ಬರುವ ಬಗ್ಗೆ ಈಗ ಚಿತ್ರತಂಡ ಬಾಯಿ ಬಿಟ್ಟಿದೆ. ಟ್ರೈಲರ್‌ ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. ಹಾಗಾಗಿ ಮತ್ತಷ್ಟು ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಜೊತೆಗೆ 'ಕೆಜಿಎಫ್ 2' ಚಿತ್ರದ ಕ್ಲೈಮ್ಯಾಕ್ಸ್ ಮೇಲೆ ಕುತೂಹಲ ಹೆಚ್ಚಾಗಿದೆ.

'ಕೆಜಿಎಫ್ 3' ಮಾಡಲು 8 ವರ್ಷ ಬೇಕು: ನಿರ್ದೇಶಕ ಪ್ರಶಾಂತ್ ನೀಲ್!

'ಕೆಜಿಎಫ್ 3' ಮಾಡಲು 8 ವರ್ಷ ಬೇಕು: ನಿರ್ದೇಶಕ ಪ್ರಶಾಂತ್ ನೀಲ್!

'ಕೆಜಿಎಫ್ 2' ಟ್ರೈಲರ್ ರಿಲೀಸ್ ವೇಳೆ ಚಿತ್ರತಂಡಕ್ಕೆ 'ಕೆಜಿಎಫ್ 3' ಚಿತ್ರದ ಬಗ್ಗೆ ಪ್ರಮುಖ ಪ್ರಶ್ನೆ ಎದುರಾಗಿತ್ತು. 'ಕೆಜಿಎಫ್ 2' ಚಿತ್ರದ ಬಳಿಕ 'ಕೆಜಿಎಫ್ 3' ಚಿತ್ರ ಬರುತ್ತಾ ಎನ್ನುವ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಚಿತ್ರತಂಡ ಉತ್ತರ ನೀಡಿದೆ. ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಈ ಬಗ್ಗೆ ಒಂದೇ ವಾಕ್ಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಕೆಜಿಎಫ್ 3 ಬರಲು ಇನ್ನು 8 ವರ್ಷಗಳು ಬೇಕಾಗುತ್ತದೆ." ಎಂದು ಹೇಳಿದ್ದಾರೆ.

ವ್ಯಂಗ್ಯವಾಗಿ ಉತ್ತರಿಸಿ ನಕ್ಕು ಬಿಟ್ಟ ಪ್ರಶಾಂತ್ ನೀಲ್!

ವ್ಯಂಗ್ಯವಾಗಿ ಉತ್ತರಿಸಿ ನಕ್ಕು ಬಿಟ್ಟ ಪ್ರಶಾಂತ್ ನೀಲ್!

ನಿರ್ದೇಶಕ ಪ್ರಶಾಂತ್ ನೀಲ್ 'ಕೆಜಿಎಫ್ 3' ಚಿತ್ರದ ಬಗ್ಗೆ ಮಾತನಾಡಿ ಈ ಚಿತ್ರ ಬರಬೇಕಾದರೆ ಇನ್ನು 8 ವರ್ಷಗಳು ಬೇಕು ಎಂದು ಹೇಳಿ ನಕ್ಕು ಬಿಟ್ಟರು. ಅಂದರೆ 'ಕೆಜಿಎಫ್ 3' ಚಿತ್ರ ಬರುವುದಿಲ್ಲ. ಈ ಪ್ರಶ್ನೆಯ ಅವಶ್ಯಕತೆಯೇ ಇಲ್ಲ ಎನ್ನುವ ನಿಟ್ಟಿನಲ್ಲಿ ಉತ್ತರಿಸಿ ಸುಮ್ಮನಾದರು. ಜೊತೆಗೆ ಈ ವಿಚಾರವನ್ನು ಅಲ್ಲಿಗೆ ಬಿಟ್ಟು ಬಿಟ್ಟರು. ಹಾಗಾಗಿ ಸಿನಿಮಾ ಬರುವುದಿಲ್ಲ ಎನ್ನುವುದು ಬಹುತೇಕ ಖಚಿತ ಅದಂತಾಗಿದೆ. ಹಾಗೇನಾದರೂ 'ಕೆಜಿಎಫ್' ಸರಣಿ ಈ ಚಿತ್ರದ ಬಳಿಕವೂ ಮುಂದುವರೆಯುತ್ತದೆ ಅಂತಾದರೆ ಅದಕ್ಕೆ 'ಕೆಜಿಎಫ್ 2'ನಲ್ಲಿ ಉತ್ತರ ಸಿಗಲಿದೆ.

'ಕೆಜಿಎಫ್ 2' ಕ್ಲೈಮ್ಯಾಕ್ಸ್ ಮೇಲೆ ಹೆಚ್ಚಿದ ನಿರೀಕ್ಷೆ!

'ಕೆಜಿಎಫ್ 2' ಕ್ಲೈಮ್ಯಾಕ್ಸ್ ಮೇಲೆ ಹೆಚ್ಚಿದ ನಿರೀಕ್ಷೆ!

'ಕೆಜಿಎಫ್ ಚಾಪ್ಟರ್ 1' ಒಂದರಲ್ಲಿ ಇದ್ದ ಕ್ಲೈಮ್ಯಾಕ್ಸ್, ಚಾಪ್ಟರ್ 2 ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ರಾಕಿ ಭಾಯ್ ಸಾಮ್ರಾಜ್ಯದ ದರ್ಶನ ಮಾಡಿದವರಿಗೆ ಮುಂದೇನಾಗುತ್ತೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. ಅದೇ ರೀತಿ ಈಗ 'ಕೆಜಿಎಫ್ 2' ಚಿತ್ರದ ಕ್ಲೈಮ್ಯಾಕ್ಸ್ ಮೇಲೆ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟುಕೊಂಡಿದೆ. ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಏನಾದ್ರೂ ಭಾಗ 3ಕ್ಕೆ ಲೀಡ್ ಕೊಟ್ಟಿರಬಹುದಾ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಚಿತ್ರತಂಡ ಸ್ಪಷ್ಟ ಚಿತ್ರಣ ನೀಡಿಲ್ಲ. ಹಾಗಾಗಿ ಚಿತ್ರದಲ್ಲಿಯೇ ಇದಕ್ಕೆ ಉತ್ತರ ಸಿಗಲಿದೆ.

Recommended Video

KGF Verse | ಅಷ್ಟಕ್ಕೂ Meta Verse ನಿಂದ KGF 2 ಗೆ ಆಗೋ ಲಾಭ ಏನು..? | Yash | Sanjay Dutt | Raveena Tandon
ಅಂತ್ಯ ಆಗಲಿದ್ಯಾ ರಾಕಿ ಭಾಯ್ ಸಾಮ್ರಾಜ್ಯ?

ಅಂತ್ಯ ಆಗಲಿದ್ಯಾ ರಾಕಿ ಭಾಯ್ ಸಾಮ್ರಾಜ್ಯ?

'ಕೆಜಿಎಫ್ 2' ಚಿತ್ರದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಸೃಷ್ಟಿ ಆಗಿವೆ. ಚಾಪ್ಟರ್ ಒಂದರ ಅಂತ್ಯದಲ್ಲಿ ರಾಕಿ ಭಾಯ್ ತನ್ನ ಭವ್ಯ ಸಾಮ್ರಾಜ್ಯ ನಿರ್ಮಾಣಕ್ಕೆ ಬುನಾದಿ ಹಾಕಿದ್ದಾನೆ. ಚಾಪ್ಟರ್ 2ನಲ್ಲಿ ಎನಿದ್ದರೂ, ಆ ಸಾಮ್ರಾಜ್ಯವನ್ನು ಆಳುವುದು ಮತ್ತು ಉಳಿಸಿಕೊಳ್ಳುವ ಹೋರಾಟವೇ ಇರಲಿದೆ. ಆದರೆ ಚಾಪ್ಟರ್ 3 ಬರುವುದಿಲ್ಲ ಎಂದಾದರೆ ಇಲ್ಲಿಗೆ ರಾಕಿ ಭಾಯ್ ಅಂತ್ಯ ಆಗುತ್ತದೆ. ರಾಕಿ ವಿರುದ್ಧ ಡೆತ್ ವಾರೆಂಟ್ ಪ್ರಕಟ ಆದರೆ, ಕೆಜಿಎಫ್ ಅಂತ್ಯದಲ್ಲಿ ರಾಕಿ ಭಾಯ್ ಪಾತ್ರ ಏನಾಗಬಹುದು ಎಂಬ ಕುತೂಹಲವಿದೆ.

More from Filmibeat

English summary
KGF 3 Will Definitely Happen But Only After 8 Years Say's Diretcor Prashanth Neel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X