For Quick Alerts
  ALLOW NOTIFICATIONS  
  For Daily Alerts

  KGF 3: ಈ ವರ್ಷ ಖಂಡಿತಾ ಇಲ್ಲ, ವಿಜಯ್ ಕಿರಗಂದೂರು ಸ್ಪಷ್ಟನೆ!

  |

  ಯಶ್ ಅಭಿನಯದ 'ಕೆಜಿಎಫ್ 2' ಹಿಂದಿ ಬೆಲ್ಟ್ ಸೇರಿದಂತೆ, ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಏಪ್ರಿಲ್ 14 ರಂದು ಬಿಡುಗಡೆಯಾದ ಈ ಸಿನಿಮಾ ಸದ್ಯ 50 ದಿನಗಳತ್ತ ಪಯಣ ಮುಂದುವರೆಸಿದೆ. ಈ ನಡುವೆ ಕೆಜಿಎಫ್ 3 ಸಿನಿಮಾದ ಬಗ್ಗೆ ಸುದ್ದಿ ಹಬ್ಬಿದೆ.

  'ಕೆಜಿಎಫ್ 2'ನಲ್ಲಿ ಬಾಲಿವುಡ್ ಕಲಾವಿದರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂಜಯ್ ದತ್ ಮತ್ತು ರವೀನಾ ಟಂಡನ್ ಚಿತ್ರದಲ್ಲಿ ಇದ್ದಾರೆ. ಈಗ ಕೆಜಿಎಫ್ 3 ಸಿನಿಮಾಗಾಗಿ ನಿರ್ಮಾಪಕರು ಬಾಲಿವುಡ್ ನಟಿ ಹೃತಿಕ್ ರೋಷನ್‌ರನ್ನು ಕರೆತರಲಿದ್ದಾರೆ ಎನ್ನಲಾಗಿದೆ.

  ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?

  ಈ ಎಲ್ಲಾ ವದಂತಿಗಳ ಬಗ್ಗೆ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಮಾತಾನಾಡಿದ್ದಾರೆ. 'ಕೆಜಿಎಫ್ 3' ಸಿನಿಮಾ ಯಾವಾಗ ಬರಲಿದೆ ಮತ್ತು ಸಿನಿಮಾದಲ್ಲಿ ಯಾರೆಲ್ಲಾ ಇರುತ್ತಾರೆ ಎನ್ನುವ ಬಗ್ಗೆ ಸಂದರ್ಶನ ಒಂದರಲ್ಲಿ ಸ್ಪಷ್ಟ ಪಡಿಸಿದ್ದಾರೆ.

  ಈ ವರ್ಷ ಕೆಜಿಎಫ್ 3 ಇಲ್ಲ: ವಿಜಯ್ ಕಿರಗಂದೂರು!

  ಈ ವರ್ಷ ಕೆಜಿಎಫ್ 3 ಇಲ್ಲ: ವಿಜಯ್ ಕಿರಗಂದೂರು!

  ನಿರ್ಮಾಪಕ ವಿಜಯ್ ಕಿರಗಂದೂರು 'ಕೆಜಿಎಫ್ 3' ಸಿನಿಮಾದ ಬಗ್ಗೆ ಮಾತನಾಡಿದ್ದು ಹೀಗೆ. "ಕೆಜಿಎಫ್ 3' ಈ ವರ್ಷ ಸೆಟ್ಟೇರುವುದಿಲ್ಲ. ನಾವು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ನಿರ್ದೇಶಕ ಪ್ರಶಾಂತ್ ನೀಲ್ ಸದ್ಯಕ್ಕೆ 'ಸಲಾರ್'‌ನಲ್ಲಿ ನಿರತರಾಗಿದ್ದಾರೆ ಮತ್ತು ಯಶ್ ಶೀಘ್ರದಲ್ಲೇ ತಮ್ಮ ಹೊಸ ಚಲನಚಿತ್ರವನ್ನು ಘೋಷಿಸಲಿದ್ದಾರೆ. ಆದ್ದರಿಂದ, KGF 3 ಸಿನಿಮಾದ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಕೆಜಿಎಫ್ ಮೂರನೇ ಭಾಗದ ಕೆಲಸ ಯಾವಾಗ ಪ್ರಾರಂಭವಾಗಲಿದೆ ಎಂಬುದಕ್ಕೆ ನಮಗೆ ನಿಗದಿತ ದಿನಾಂಕ ಅಥವಾ ಸಮಯ ನಿಗದಿ ಮಾಡಬೇಕೆಂದು ಇಲ್ಲ." ಎಂದಿದ್ದಾರೆ.

  'ಯಶ್' ಮುಂದಿನ ಸಿನಿಮಾ 'ಹೊಂಬಾಳೆ ಫಿಲ್ಮ್ಸ್' ನಿರ್ಮಾಣ!?'ಯಶ್' ಮುಂದಿನ ಸಿನಿಮಾ 'ಹೊಂಬಾಳೆ ಫಿಲ್ಮ್ಸ್' ನಿರ್ಮಾಣ!?

  Kgf 3 ನಲ್ಲಿ ಹೃತಿಕ್ ರೋಷನ್?

  Kgf 3 ನಲ್ಲಿ ಹೃತಿಕ್ ರೋಷನ್?

  ಈ 'ಕೆಜಿಎಫ್ 3'ಗಾಗಿ ಬಾಲಿವುಡ್ ನಟ ಹೃತಿಕ್ ರೋಷನ್ ಅವರನ್ನು ಕೇಳಲಾಗಿದೆ ಎನ್ನುವ ಮಾಹಿತಿ ಇತ್ತು. ಈ ಬಗ್ಗೆಯೂ ವಿಜಯ್ ಕಿರಗಂದೂರು ಸ್ಪಷ್ಟನೆ ಕೊಟ್ಟಿದ್ದಾರೆ. "ಇನ್ನು ಕೆಜಿಎಫ್ 3 ಸಿನಿಮಾದ ಪಾತ್ರವರ್ಗದ ಬಗ್ಗೆ ಯಾವುದೆ ನಿರ್ಧಾರಗಳು ಆಗಿಲ್ಲ. ಸಿನಿಮಾದ ಪಾತ್ರಗಳ ಬಗ್ಗೆ ಯಾವುದೆ ನಿರ್ಧಾರ ತೆಗೆದುಕೊಂಡಿಲ್ಲ." ಎಂದು ಹೇಳುವ ಮೂಲಕ ಹೃತಿಕ್ ರೋಷನ್ ಅಥವಾ ಇತರ ಯಾವುದೇ ಕಲಾವಿದರು ಹೆಸರನ್ನು ದೃಢ ಪಡಿಸಿಲ್ಲ ಎಂದಿದ್ದಾರೆ.

  'ಕೆಜಿಎಫ್ 3' ಬಗ್ಗೆ ವಿಜಯ್ ಕಿರಗಂದೂರು ಮಾತು!

  'ಕೆಜಿಎಫ್ 3' ಬಗ್ಗೆ ವಿಜಯ್ ಕಿರಗಂದೂರು ಮಾತು!

  ಇನ್ನು ಕೆಜಿಎಫ್ 3 ಸಿನಿಮಾದ ಬಗ್ಗೆ ಮಾತನಾಡಿರುವ ವಿಜಯ್ ಕಿರಗಂದೂರು "ಒಮ್ಮೆ ನಾವು ದಿನಾಂಕವನ್ನು ಅಂತಿಮಗೊಳಿಸಿದ ನಂತರ, ಪಾತ್ರ ವರ್ಗದ ಬಗ್ಗೆ ಯೋಚನೆ ಮಾಡುತ್ತೇವೆ. ಆಗ ಸಿನಿಮಾದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದನ್ನು ಪ್ರಕಟ ಮಾಡಲು ಉತ್ತಮ ಸಮಯ." ಎಂದಿದ್ದಾರೆ.

  ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ಕೆಜಿಎಫ್ 2!

  ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ಕೆಜಿಎಫ್ 2!

  'ಕೆಜಿಎಫ್ 2' ಚಿತ್ರವು ದೇಶದಾದ್ಯಂತ ಮತ್ತು ವಿಶ್ವದಾದ್ಯಂತ ಅಬ್ಬರಿಸಿದೆ. ರಿಲೀಸ್ ಆದಾಗಿನಿಂದಲು ಸಿನಿಮಾ ಕಲೆಕ್ಷನ್‌ನಲ್ಲಿ ಒಂದು ಕೈ ಮೇಲೆ ಇದೆ. ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಹಿಂದಿಯಲ್ಲಿ 430.95 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಮಾತ್ರವಲ್ಲದೆ ಒಟ್ಟಾರೆ ವಿಶ್ವದಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್ 1250 ಕೋಟಿ ಹತ್ತಿರ ಆಗಿದೆ.

  English summary
  KGF 3 Will Not Happen This Year Says Hombale Films Producer Vijay Kiragandur, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X