'ಕೆಜಿಎಫ್ 2' ತಾತ ಈಗ ಹೀರೋ: 'ಯಾರೂ ಅಡ್ಡ ನಿಲ್ಲೊಂಗಿಲ್ಲ'

ಒಂದು ಸಣ್ಣ ಪಾತ್ರ ಕೆಲವು ನಟರ ಜೀವನವನ್ನೇ ಬದಲಾಯಿಸಿಬಿಟ್ಟಿವೆ. ಲೂಸ್ ಮಾದನ ಪಾತ್ರದಲ್ಲಿ ನಟಿಸಿದ್ದ ಯೋಗಿ ಇದಕ್ಕೆ ಅತ್ಯುತ್ತಮ ಉದಾಹರಣೆ. 'ಮನಸಾರೆ' ಸಿನಿಮಾದಲ್ಲಿ ಸತೀಶ್ ನೀನಾಸಂನ ಪಾತ್ರ ಸಖತ್ ಶೈನ್ ಆಗಿತ್ತು. ಹೀಗೆ ಕೆಲವು ನಟರು ನಿರ್ವಹಿಸಿದ ಒಂದೇ ಸಣ್ಣ ಪಾತ್ರದಿಂದ ದೊಡ್ಡ ದೊಡ್ಡ ಅವಕಾಶಗಳು ಅವರನ್ನು ಅರಸಿ ಬಂದಿವೆ.

ಕೆಲವು ಸಿನಿಮಾಗಳ ಕೆಲವು ಸಣ್ಣ ಪಾತ್ರಗಳು ಪ್ರೇಕ್ಷಕನ ಮೇಲೆ ಪರಿಣಾಮ ಬೀರಿದ್ದಿದೆ. 'ಕೆಜಿಎಫ್' ಸರಣಿ ಸಿನಿಮಾಗಳಲ್ಲಿ ನಟಿಸಿರುವ ತಾತನ ಪಾತ್ರ ಇದರಲ್ಲೊಂದು. 'ಕೆಜಿಎಫ್' ಸಿನಿಮಾದಲ್ಲಿ ದೃಷ್ಟಿಹೀನನ ಪಾತ್ರದಲ್ಲಿ ನಟಿಸಿದ್ದ ಕೃಷ್ಣ ಜಿ ರಾವ್ ಅದೊಂದು ಪಾತ್ರದಿಂದ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದಾರೆ.

ಕೆಜಿಎಫ್ ನ ತಾತ ಕೃಷ್ಣ ಜಿ ರಾವ್ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಕೆಜಿಎಫ್ ತಾತ ಅಂತಾನೇ ಖ್ಯಾತಿ ಪಡೆದಿರುವ ಕೃಷ್ಣ ಜಿ ರಾವ್, 'ಕೆಮಿಸ್ಟ್ರೀ ಆಫ್ ಕರಿಯಪ್ಪ' ಸಿನಿಮಾದ ಸಾರಥಿ ಕುಮಾರ್ ನಿರ್ದೇಶನದ ಹೊಸ ಸಿನಿಮಾ 'ನ್ಯಾನೋ ನಾರಾಯಣಪ್ಪ' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.

ಪೋಸ್ಟರ್ ಬಿಡುಗಡೆ ಆಗಿದೆ

ಪೋಸ್ಟರ್ ಬಿಡುಗಡೆ ಆಗಿದೆ

ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ಕೃಷ್ಣ ಜಿ ರಾವ್ ಕಿರೀಟ, ಗ್ಲಾಸ್ ಹಾಕಿಕೊಂಡು ಫೋಸ್ ಕೊಟ್ಟಿದ್ದಾರೆ. ನ್ಯಾನೋ ಕಾರು ಕೂಡ ಪೋಸ್ಟರ್‌ನಲ್ಲಿ ಹೈಲೇಟ್ ಆಗಿದ್ದು, ಒಂದಷ್ಟು ಪ್ರತಿಭಾನ್ವಿತ ಕಲಾವಿದರು ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಆನಂತು, ಅಪೂರ್ವ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Recommended Video

Darshan Thoogudeepa | ಮರಿ ಟೈಗರ್ ಜೊತೆ ಡಿಬಾಸ್ ಹೇಳಿದ್ದೇನು? | Vinod Prabhakar *Sandalwood
ಕಾಮಿಡಿ ಮತ್ತು ಎಮೋಷನಲ್ ಡ್ರಾಮಾ

ಕಾಮಿಡಿ ಮತ್ತು ಎಮೋಷನಲ್ ಡ್ರಾಮಾ

'ಕೆಮಿಸ್ಟ್ರೀ ಆಫ್ ಕರಿಯಪ್ಪ' ಸಿನಿಮಾ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿದ್ದ ನಿರ್ದೇಶಕ ಕುಮಾರ್, 'ಕ್ರಿಟಿಕಲ್ ಕೀರ್ತನೆ'ಗಳು ಸಿನಿಮಾದಲ್ಲಿ ಬೆಟ್ಟಿಂಗ್ ಧಂದೆಯ ಕರಾಳತೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದರು. ಇದೀಗ 'ನ್ಯಾನೋ ನಾರಾಯಣಪ್ಪ' ಸಿನಿಮಾದ ಮೂಲಕ ಮತ್ತೊಮ್ಮೆ ಚಿತ್ರಪ್ರೇಮಿಗಳನ್ನು ಎಂಟರ್ ಟೈನ್ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಕುಮಾರ್ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಸಹ ತಾವೇ ಹೂಡಿದ್ದಾರೆ. ಇದೊಂದು ಕಾಮಿಡಿ ಎಮೋಷನಲ್ ಡ್ರಾಮಾ ಸಿನಿಮಾ ಆಗಿದ್ದು, ತುಂಬ ಕಾಡುವ ಕಥೆ, ಮನೆ ಮಂದಿಯಲ್ಲಾ ಕುಳಿತು ನೋಡುವ ಸಿನಿಮಾ ಎಂದಿದ್ದಾರೆ ಕುಮಾರ್.

ಆಗಸ್ಟ್‌ನಲ್ಲಿ ಬಿಡುಗಡೆ ಆಗಲಿದೆ

ಆಗಸ್ಟ್‌ನಲ್ಲಿ ಬಿಡುಗಡೆ ಆಗಲಿದೆ

ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಆಗಸ್ಟ್ ನಲ್ಲಿ ಈ ಸಿನಿಮಾವನ್ನು ತೆರೆಗೆ ಯೋಜನೆ ಹಾಕಿಕೊಂಡಿದೆ. ಕುಮಾರ್ ನಿರ್ಮಾಣದ ನ್ಯಾನೋ‌ ನಾರಾಯಣಪ್ಪ ಸಿನಿಮಾಗೆ ರಾಜಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ಸಿದ್ದು ಸಂಕಲನವಿದೆ. ಸದ್ಯ ಫಸ್ಟ್ ಲುಕ್ ರಿವೀಲ್ ಮಾಡಿರುವ ಚಿತ್ರತಂಡ ಶೀರ್ಘದಲ್ಲಿ ಟೀಸರ್ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.

'ಸಲಾರ್' ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಕೃಷ್ಣ ಜಿ ರಾವ್

'ಸಲಾರ್' ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಕೃಷ್ಣ ಜಿ ರಾವ್

'ಕೆಜಿಎಫ್' ಸಿನಿಮಾದಿಂದ ಪ್ರಖ್ಯಾತರಾಗಿರುವ ಕೃಷ್ಣ ಜಿ ರಾವ್ ಗೆ ಚಿತ್ರರಂಗ ಹೊಸದೇನೂ ಅಲ್ಲ. 'ಕೆಜಿಎಫ್' ಸಿನಿಮಾದ ಬಳಿಕ ಹಲವು ಅವಕಾಶಗಳು ಅವರನ್ನು ಹುಡುಕಿ ಬರುತ್ತಿವೆ. ಪ್ರಶಾಂತ್ ನೀಲ್‌ರ ನಿರ್ದೇಶಿಸಿ, ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾದಲ್ಲಿ ಸಹ ಕೃಷ್ಣ ಜಿ ರಾವ್ ನಟಿಸುತ್ತಿದ್ದಾರೆ. ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿಯೂ ಕೃಷ್ಣ ಜಿ ರಾವ್ ನಟಿಸುತ್ತಿದ್ದು, ಇದೀಗ 'ನ್ಯಾಯೊ ನಾರಾಯಣಪ್ಪ' ಮೂಲಕ ಈ ವಯಸ್ಸಿನಲ್ಲಿ ನಾಯಕ ನಟರೇ ಆಗಿಬಿಟ್ಟಿದ್ದಾರೆ.

More from Filmibeat

English summary
KGF actor Krishna G Rao became hero from Nano Narayanappa movie. Kumar directing and producing the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X