'KGF' ತಾತನ ಕೊನೆಯ ಸಿನಿಮಾ 'ನ್ಯಾನೋ ನಾರಾಯಣಪ್ಪ' ತೆರೆಗಪ್ಪಳಿಸಲು ಮುಹೂರ್ತ ಫಿಕ್ಸ್
'ಕೆಮಿಸ್ಟ್ರೀ ಆಫ್ ಕರಿಯಪ್ಪ' ಹಾಗೂ 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾಗಳ ಖ್ಯಾತಿಯ ನಿರ್ದೇಶಕ ಕುಮಾರ್ ಹೊಸದೊಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. 'ನ್ಯಾನೋ ನಾರಾಯಣಪ್ಪ' ಎನ್ನುವ ವಿಭಿನ್ನ ಟೈಟಲ್‌ನಿಂದಲೇ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ವಿಶೇಷ ಅಂದ್ರೆ 'KGF' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿ ಗಮನ ಸೆಳೆದ ದಿವಂಗತ ಕೃಷ್ಣೋಜಿ ರಾವ್ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ.
ಹಾಸ್ಯದ ಜೊತೆಗೆ ಭಾವಾನತ್ಮಕ ಅಂಶವನ್ನು ಹದವಾಗಿ ಬೆರೆಸಿ ಕುಮಾರ್ 'ನ್ಯಾನೋ ನಾರಾಯಣಪ್ಪ' ಸಿನಿಮಾ ಕಥೆ ಎಣೆದಿದ್ದಾರೆ. 6 ತಿಂಗಳ ಹಿಂದೆಯಷ್ಟೆ ನಟ ಕೃಷ್ಣೋಜಿ ರಾವ್ ನಿಧನರಾಗಿದ್ದರು. ಅನಾರೋಗ್ಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಅವರ ಕೊನೆಯ ಸಿನಿಮಾ 'ನ್ಯಾನೋ ನಾರಾಯಣಪ್ಪ' ಜುಲೈ 7ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

'ನ್ಯಾನೋ ನಾರಾಯಣಪ್ಪ' ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿರುವ ಸಮಯದಲ್ಲೇ ಚಿತ್ರದ 'ಮನಿ ಹಂಟರ್' ಸಾಂಗ್ ಬಿಡುಗಡೆಯಾಗಿದೆ. ನಿರ್ದೇಶಕ ಕುಮಾರ್ ಸಾಹಿತ್ಯದ ಬರೆದಿರುವ ಈ ಹಾಡನ್ನು ಅಂಕಿತಾ ಕುಂಡು ಹಾಡಿದ್ದಾರೆ. ಆಕಾಶ್ ಪರ್ವ ಟ್ಯೂನ್ ಹಾಕಿದ್ದು ಹಾಟ್ ಅಂಡ್ ಸ್ಪೈಸಿ ಸಾಂಗ್‌ಗೆ ಗಿರಿ, ಶಿವಣ್ಣ, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ಹೆಜ್ಜೆ ಹಾಕಿದ್ದಾರೆ.
ಕೇಸರಿ ಫಿಲ್ಮಂ ಕ್ಯಾಪ್ಚರ್ ಬ್ಯಾನರ್ ಅಡಿಯಲ್ಲಿ ಸ್ವತಃ ಕುಮಾರ್ 'ನ್ಯಾನೋ ನಾರಾಯಣಪ್ಪ' ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಅನಂತು, ಅಪೂರ್ವಾ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ದೀಪು ಮತ್ತು ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದೆ.

ಈಗಾಗಲೇ 'ನ್ಯಾನೋ ನಾರಾಯಣಪ್ಪ' ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕಾಮಿಡಿ, ಕಾಡುವ ಕಥೆ, ಮನೆ ಮಂದಿಯೆಲ್ಲಾ ಕುಳಿತು ಕಣ್ತುಂಬಿಕೊಳ್ಳುವಂತಹ ಸಿನಿಮಾ ಜುಲೈ 7ಕ್ಕೆ ಥಿಯೇಟರ್‌ಗಳಿಗೆ ಎಂಟ್ರಿ ಕೊಡಲಿದೆ.


Click it and Unblock the Notifications











