"ಪಪ್ಪಾ ನಿನ್ನ ಬೈಸಿಪ್ಸ್‌ಗಿಂತ ನನ್ನ ಬೈಸಿಪ್ಸ್ ಗಟ್ಟಿ": ನಾನೇ ಬಾಹುಬಲಿ ಎಂದ ಯಥರ್ವ್

By ಫಿಲ್ಮಿಬೀಟ್ ಡೆಸ್ಕ್

KGF- 2 ನಂತರ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಿಸಿಲ್ಲ. ಮುಂದಿನ ಚಿತ್ರಕ್ಕಾಗಿ ಭರ್ಜರಿ ಕಸರತ್ತು ನಡೀತಿದೆ. ಇನ್ನು ಸಮಯ ಸಿಕ್ಕಾಗಲೆಲ್ಲಾ ಮಕ್ಕಳೊಂದಿಗೆ ರಾಕಿ ಭಾಯ್ ಮಗುವಾಗಿಬಿಡುತ್ತಾರೆ. ಮಕ್ಕಳ ಜೊತೆ ಕಾಲ ಕಳೆಯುವ ಫೋಟೊ, ವಿಡಿಯೋ ಶೇರ್ ಮಾಡುತ್ತಾರೆ.

ಸದ್ಯ ರಾಕಿಂಗ್ ಸ್ಟಾರ್ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಕ್ಯೂಟ್ ವಿಡಿಯೋ ಶೇರ್ ಮಾಡಿದ್ದಾರೆ. ಮಗ ಯಥರ್ವ್ ಜೊತೆಗಿನ ಕ್ಯೂಟ್ ಸಂಭಾಷಣೆಯನ್ನು ಅದರಲ್ಲಿ ನೋಡಬಹುದು. ಯಥರ್ವ್ ತಂದೆಯನ್ನು ನೋಡಿ ನಾನೇ ನಿನಗಿಂತ ಸ್ಟ್ರಾಂಗ್ ಎಂದು ಹೇಳುವ ವಿಡಿಯೋ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ. ಕೆಲವರು ರಾಕಿಭಾಯ್ 2.0 ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಏರ್‌ಪೋರ್ಟ್ ರಸ್ತೆಯ ಪ್ರೆಸ್ಟ್ರೀಜ್ ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿ ನಟ ಯಶ್ ಮಡದಿ ಮಕ್ಕಳ ಜೊತೆ ವಾಸವಾಗಿದ್ದಾರೆ. ಇತ್ತೀಚೆಗೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಯಶ್ ಮನೆ ಮುಂದೆ ಜಮಾಯಿಸಿದ್ದರು. ನೆಚ್ಚಿನ ನಟನನ್ನು ನೋಡಿ ವಿಶ್ ಮಾಡಿ, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು.

ಯಶ್‌- ಯಥರ್ವ್ ಯಾರು ಸ್ಟ್ರಾಂಗ್?

ಸೋಫಾದಲ್ಲಿ ಕೂತು ಯಶ್ ಮಗ ಯಥರ್ವ್‌ ಜೊತೆ ಆಟ ಆಡುತ್ತಿರುವುದನ್ನು ನೋಡಬಹುದು. ಯಶ್ ಬೈಸಿಪ್ಸ್‌ ತೋರಿಸಿ ಹೇಗಿದೆ ಎಂದು ಕೇಳಿದ್ದರೆ, ಯಥರ್ವ್ ಸಾಫ್ಟ್ ಆಗಿದೆ ಎಂದು ಹೇಳಿದ್ದಾನೆ. ಅದಕ್ಕೆ ಯಶ್, ಹಾಗಾದರೆ ನಿನ್ನ ಬೈಸಿಪ್ಸ್ ತೋರಿಸು, ಎಂದಾಗ ಮುಷ್ಠಿ ಬಿಗಿ ಹಿಡಿದು ಕೈ ಮಡಿಚಿ ನೋಡು ನನ್ನ ಬೈಸಿಪ್ಸ್ ಬಹಳ ಗಟ್ಟಿಯಾಗಿದೆ ಎನ್ನುತ್ತಾನೆ. ಹಾಗಾದರೆ ನನ್ನ ಬೈಸಿಪ್ಸ್‌ ಸ್ಟ್ರಾಂಗ್ ಇಲ್ವಾ ಅಂದ್ರೆ, ನೋಡು ಬೇಕಿದ್ದರೆ ಸಾಫ್ಟ್ ಆಗಿದೆ. ನನ್ನದು ಗಟ್ಟಿಯಾಗಿದೆ ಎಂದು ಕ್ಯೂಟ್ ಆಗಿ ಹೇಳಿದ್ದಾನೆ. ಸೂಪರ್ ಮಗನೇ ನೀನು ತುಂಬಾ ಸ್ಟ್ರಾಂಗ್ ಎಂದು ಯಶ್ ಮಗನನ್ನು ಎತ್ತಿಕೊಂಡಿದ್ದಾರೆ.

ವಿದೇಶದಲ್ಲಿ ಯಶ್ ಹುಟ್ಟುಹಬ್ಬ

ವಿದೇಶದಲ್ಲಿ ಯಶ್ ಹುಟ್ಟುಹಬ್ಬ

ಸಿನಿಮಾ ಕೆಲಸಗಳು ಇಲ್ಲದೇ ಇರುವುದರಿಂದ ಬಹುತೇಕ ಸಮಯವನ್ನು ಯಶ್ ಮನೆಯಲ್ಲೇ ಕಳೆಯುತ್ತಿದ್ದಾರೆ. ಇತ್ತೀಚೆಗೆ ಫ್ಯಾಮಿಲಿ ಸಮೇತ ವಿದೇಶಕ್ಕೆ ಹೋಗಿ ಬಂದಿದ್ದರು. ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ದಿನವೂ ಯಶ್ ಅಭಿಮಾನಿಗಳ ಕೈಗೆ ಸಿಕ್ಕಿರಲಿಲ್ಲ. ಬಹಳ ದೊಡ್ಡದಾಗಿ ಏನೋ ಪ್ಲ್ಯಾನ್ ಮಾಡ್ತಿದ್ದೀನಿ. ಅದಕ್ಕೆ ಮತ್ತಷ್ಟು ಸಮಯ ಬೇಕು. ಬರೀ ಕೈಯಲ್ಲಿ ನಿಮ್ಮ ಮುಂದೆ ಬಂದು ನಿಲ್ಲಲ್ಲ. ಕ್ಷಮಿಸಿ, ನಿಮ್ಮೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಯಶ್ ಬಹಿರಂಗ ಪತ್ರ ಬರೆದಿದ್ದರು.

ಯಶ್‌19 ಅಪ್‌ಡೇಟ್ ಯಾವಾಗ?

ಯಶ್‌19 ಅಪ್‌ಡೇಟ್ ಯಾವಾಗ?

KGF- 2 ಸಿನಿಮಾ ಬಂದೋಗಿ 9 ತಿಂಗಳು ಕಳದರೂ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಸುಳಿವು ಸಿಕ್ಕಿಲ್ಲ. ಅಭಿಮಾನಿಗಳು ಕೂಡ ಯಶ್‌19 ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಇನ್ನು ಎಷ್ಟು ದಿನ ಕಾಯುವುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇದ್ದಾರೆ. ಮುಂದಿನ ಸಿನಿಮಾ ಅನೌನ್ಸ್ ಯಾವಾಗ? ಶೂಟಿಂಗ್ ಯಾವಾಗ? ರಿಲೀಸ್ ಯಾವಾಗ? ಎಂದು ಲೆಕ್ಕಾಚಾರ ಹಾಕಿ ಹಾಕಿ ಸುಸ್ತಾಗಿದ್ದಾರೆ. ಇನ್ನೆರಡು ವರ್ಷ ನೆಚ್ಚಿನ ನಟನನ್ನು ತೆರೆಮೇಲೆ ನೋಡೋದು ಕಷ್ಟ ಎಂದು ಕೊಂಡಿದ್ದಾರೆ.

ಕೆವಿಎನ್ ಬ್ಯಾನರ್‌ನಲ್ಲಿ ಯಶ್19?

ಕೆವಿಎನ್ ಬ್ಯಾನರ್‌ನಲ್ಲಿ ಯಶ್19?

ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು? ಯಾರು ಆಕ್ಷನ್ ಕಟ್ ಹೇಳ್ತಾರೆ? ನಿರ್ದೇಶಕರು ಯಾರು? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಯಶ್19 ಸಿನಿಮಾ ಬಹುತೇಕ ಖಚಿತ ಎನ್ನಲಾಗುತ್ತಿದೆ. ಯಶ್ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಮಾತುಗಳು ಕೂಡ ಬಲವಾಗಿಯೇ ಕೇಳಿಬಂದಿತ್ತು. ಆದರೆ ವಾಟ್ ನೆಕ್ಸ್ಟ್ ಎನ್ನುವುದನ್ನು ಸ್ವತಃ ಯಶ್ ರಿವೀಲ್ ಮಾಡಬೇಕಿದೆ.

More from Filmibeat

English summary
KGF Actor Yash And his Son Yatharv Cute conversation video goes viral. Yash fans have been waiting for the announcement of his next project. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X