ಬಾಲ ಹನುಮಾನ್ ಥೀಮ್‌ನಲ್ಲಿ ಯಥರ್ವ್ ಬರ್ತ್‌ಡೇ ಪಾರ್ಟಿ: ಮಕ್ಕಳೊಟ್ಟಿಗೆ ಮಕ್ಕಳಾಗಿ ಕುಣಿದು ಸಂಭ್ರಮಿಸಿದ ರಾಕಿಂಗ್ ಜೋಡಿ
ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿ ಮುದ್ದಿನ ಮಗ ಯಥರ್ವ್ ಇತ್ತೀಚೆಗೆ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದ್ದ. ಅಕ್ಟೋಬರ್ 30ರಂದು ಯಥರ್ವ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ್ದರು. ರಾಕಿಂಗ್ ಫ್ಯಾಮಿಲಿ ಬಹಳ ಅದ್ಧೂರಿಯಾಗಿ ಯಥರ್ವ್ ಹುಟ್ಟುಹಬ್ಬ ಆಚರಿಸಿದೆ. ಆ ಸುಂದರ ಕ್ಷಣಗಳ ವಿಡಿಯೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
ಯಶ್ ಮನೆಯಲ್ಲಿ ಹಬ್ಬಗಳು, ಹುಟ್ಟುಹಬ್ಬ, ಆನಿವರ್ಸರಿ ಸೆಲೆಬ್ರೇಷನ್ ಜೋರಾಗಿ ನಡೆಯುತ್ತದೆ. ರಾಧಿಕಾ, ಐರಾ, ಯಥರ್ವ್ ಹುಟ್ಟುಹಬ್ಬವನ್ನು ಕೂಡ ಬಹಳ ಜೋರಾಗಿ ಆಚರಿಸುತ್ತಾ ಬರಲಾಗುತ್ತಿದೆ. ಈ ವರ್ಷ ನಾಲ್ಕನೇ ವರ್ಷದ ಯಥರ್ವ್ ಹುಟ್ಟುಹಬ್ಬ ಆಚರಣೆ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ಇತ್ತು. ಖಾಸಗಿ ಹೋಟೆಲ್‌ವೊಂದರಲ್ಲಿ ಭರ್ಜರಿ ಪಾರ್ಟಿ ಆಯೋಜನೆಗೊಂಡಿತ್ತು. ಯಶ್ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಮಾತ್ರ ಪಾರ್ಟಿಯಲ್ಲಿ ಭಾಗವಹಿಸಿದಂತೆ ಕಾಣುತ್ತಿದೆ.

ರಾಧಿಕಾ ಪಂಡಿತ್ ಶೇರ್ ಮಾಡಿರುವ ಯಥರ್ವ್ ಬರ್ತ್‌ಡೇ ಪಾರ್ಟಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಯಥರ್ವ್ ಅಪ್ಪ, ಅಮ್ಮ ಹಾಗೂ ಸ್ನೇಹಿತರ ಜೊತೆ ಕೇಕ್ ಕಟ್ ಮಾಡಿ ಆಡಿ ಕುಣಿದು ಸಂಭ್ರಮಿಸಿದ್ದಾನೆ. ಯಶ್, ರಾಧಿಕಾ ದಂಪತಿ ಕೂಡ ಮಕ್ಕಳ ಜೊತೆ ಮಕ್ಕಳಾಗಿ ಆಡಿ ಕುಣಿದು ಖುಷಿಪಟ್ಟಿದ್ದಾರೆ. ಇತ್ತೀಚೆಗೆ ಯಶ್ ದೀಪಾವಳಿ ಹಬ್ಬದ ದಿನ ಮನೆಯಲ್ಲಿ ಇರಲಿಲ್ಲ. ರಾಧಿಕಾ ಪೋಸ್ಟ್‌ಗೆ ಕಾಮೆಂಟ್ ಮಾಡಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರು.
ಕೋವಿಡ್ ಸಮಯದಲ್ಲಿ ತಮ್ಮದೇ ಫಾರ್ಮ್‌ಹೌಸ್‌ನಲ್ಲಿ ಯಥರ್ವ್ ನಾಮಕರಣ ಮಾಡಿದ್ದರು ಯಶ್. ಕೆಲವೇ ಆಪ್ತರ ಸಮ್ಮುಖದಲ್ಲಿ ಸಮಾರಂಭ ನಡೆದಿತ್ತು. ಆದರೆ ತಮ್ಮ ಆಸೆಯಂತೆ ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ನಡೆದಿತ್ತು. 4 ವರ್ಷಗಳ ಹಿಂದೆ ಐರಾ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗಿತ್ತು. ದರ್ಶನ್, ಪುನೀತ್ ರಾಜ್‌ಕುಮಾರ್, ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಅನಿರುದ್ಧ್ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರೆಲ್ಲಾ ಭಾಗಿ ಆಗಿ ಶುಭ ಕೋರಿದ್ದರು.
ಮೂರು ವರ್ಷಗಳ ಹಿಂದೆ ಯಥರ್ವ್ ಕೇಕ್ ಸ್ಮ್ಯಾಶ್ ವಿಡಿಯೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು. ವಿದೇಶಕ್ಕೂ ಫ್ಯಾಮಿಲಿ ಸಮೇತ ರಾಕಿಂಗ್ ದಂಪತಿ ಹೋಗಿ ಬಂದಿದ್ದರು. ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿ ಇದ್ದರೂ ಯಶ್ ಕುಟುಂಬಕ್ಕೆ ಹೆಚ್ಚು ಸಮಯ ಮೀಸಲಿಡುತ್ತಾರೆ. ಸದ್ಯ ಯಥರ್ವ್ ಬರ್ತ್‌ಡೇ ಪಾರ್ಟಿಯಲ್ಲಿ ಮತ್ತೊಮ್ಮೆ ಕುಣಿದು ಸಂಭ್ರಮಿಸಿದ್ದಾರೆ. ಅಭಿಮಾನಿಗಳು ಈ ವಿಡಿಯೋ ನೋಡಿ ಖುಷಿಯಾಗಿದೆ.
ರಾಧಿಕಾ ಪಂಡಿತ್ ಡ್ಯಾನ್ಸ್ ನೋಡಿ ಅತ್ತಿಗೆ ಚಾರ್ಮ್ ಕಿಂಚಿತ್ತು ಕಮ್ಮಿ ಆಗಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಐರಾ- ರಾಧಿಕಾ ಡ್ಯಾನ್ಸ್ ಸಖತ್ ಕ್ಯೂಟ್ ಎಂದು ಹೇಳುತ್ತಿದ್ದಾರೆ. ಯಶ್ ಎಂದಿನ ತಮ್ಮ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಬಿಳಿ ಶರ್ಟ್, ಕಪ್ಪು ಪ್ಯಾಂಟ್ ತೊಟ್ಟು ಕಾಣಿಸಿಕೊಂಡಿದ್ದಾರೆ. ರಾಧಿಕಾ ಡಿಸೈನರ್ ಸಲ್ವಾರ್‌ನಲ್ಲಿ ಕಂಗೊಳಿಸಿದ್ದಾರೆ. ಯಶ್ ಸಹೋದರಿ ನಂದಿನಿ, ಸಾನಿಯಾ ಸರ್ದಾರಿಯಾ ಪಾರ್ಟಿಯಲ್ಲಿ ಭಾಗಿ ಆಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಐರಾ, ಯಥರ್ವ್ ಸ್ನೇಹಿತರಿಗಾಗಿ ವಿವಿಧ ಆಟಗಳನ್ನು ಆಯೋಜಿಸಲಾಗಿತ್ತು. ಕರೊಸಲ್ ಕುದುರೆ ಏರಿ ಯಥರ್ವ್ ಬಹಳ ಎಂಜಾಯ್ ಮಾಡಿದ್ದಾನೆ. ತಮ್ಮನ ಬರ್ತ್‌ಡೇ ಪಾರ್ಟಿಯಲ್ಲಿ ಐರಾ ಸಂಭ್ರಮಕ್ಕೂ ಪಾರವೇ ಇರಲಿಲ್ಲ. ಸದ್ಯ ರಾಕಿಂಗ್ ಸ್ಟಾರ್ ತಮ್ಮ 19ನೇ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 'KGF'-2 ಸಿನಿಮಾ ಬಂದೋಗಿ ಒಂದೂವರೆ ವರ್ಷ ಕಳೆದರೂ ಯಶ್19 ಅಪ್‌ಡೇಟ್ ಸಿಕ್ಕಿಲ್ಲ. ಅಭಿಮಾನಿಗಳೂ ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಶೀಘ್ರದಲ್ಲೇ ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡುವ ಸೂಚನೆ ಸಿಗುತ್ತಿದೆ.


Click it and Unblock the Notifications











