ಯಶ್ ಹೊಸ ದಾಖಲೆ: ಇನ್‌ಸ್ಟಾಗ್ರಾಂನಲ್ಲಿ 9 ಮಿಲಿಯನ್ ಫಾಲೋವರ್ಸ್‌

ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ 'ಕೆಜಿಎಫ್' ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಕನ್ನಡದ ಪಾಲಿಗೆ, ಭಾರತೀಯ ಚಿತ್ರರಂಗದ ಪಾಲಿಗೆ ದೊಡ್ಡ ದಾಖಲೆ ಬರೆದ 'ಕೆಜಿಎಫ್' ಮೂಲಕ ಯಶ್ ಟಾಪ್ ಸ್ಟಾರ್ ಆಗಿ ಬಿಟ್ಟಿದ್ದಾರೆ. 'ಕೆಜಿಎಫ್' ಸಿಕ್ಕಿದ್ದು ಯಶ್ ಅದೃಷ್ಟವೇ ಬದಲಾಗಿ ಹೋಗಿದೆ. ಈಗಂತೂ ಯಶ್ ನ್ಯಾಷನಲ್ ಸ್ಟಾರ್ ಆಗಿ ಬಿಟ್ಟಿದ್ದಾರೆ.

ಇದೇ ಜೋಷ್‌ನಲ್ಲಿ ಯಶ್ ಈಗ ಮತ್ತೊಂದು ದಾಖಲೆ ಬರೆದಿದ್ದಾರೆ. ಆದರೆ ಇದು ಸಿನಿಮಾ ದಾಖಲೆ ಅಲ್ಲ. ಬದಲಿಗೆ ಇದು ಯಶ್ ವೈಯಕ್ತಿಕ ದಾಖಲೆ. ಕನ್ನಡದ ಯಾವ ನಟರು ಮಾಡದ ದಾಖಲೆ ನಟ ಯಶ್ ಹೆಸರಲ್ಲಿ ಆಗಿಬಿಟ್ಟಿದೆ. ಅದು ಮತ್ತೇನು ಅಲ್ಲ. ಯಶ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೆಚ್ಚು, ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

ನಟ ಯಶ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುತ್ತಾರೆ. ಸಿನಿಮಾ ಮತ್ತು ವೈಯಕ್ತಿಕ ವಿಚಾರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಯಶ್ ಇನ್‌ಸ್ಟಾಗ್ರಾಂನಲ್ಲಿ 9 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ನಟರಲ್ಲಿ ಯಶ್ ಮುಂಚೂಣಿಯಲ್ಲಿ ಇದ್ದಾರೆ.

KGF Actor Yash Crosses 9 Million Followers On Instagram

ಇತ್ತೀಚೆಗೆ ಯಶ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಗಳು ಐರಾಳ ಮುದ್ದಾದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಐರಾ, ರಾಕಿ ಭಾಯ್ ಎನ್ನುವ ಮುದ್ದಾದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರೊಂದಿಗೆ 'ಕೆಜಿಎಫ್ 2' ಚಿತ್ರದ ಬಗ್ಗೆ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಯಶ್ ಫಾಲೋಯರ್‌ಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

KGF Actor Yash Crosses 9 Million Followers On Instagram

ಇನ್ನು ಯಶ್ ಬಿಟ್ಟರೆ ನಟ ಪುನೀತ್ ರಾಜ್‌ಕುಮಾರ್ ಇನ್‌ಸ್ಟಾಗ್ರಾಂ ಖಾತೆಗೆ ಹೆಚ್ಚಿನ ಫಾಲೋವರ್ಸ್‌ಗಳು ಇದ್ದಾರೆ. ನಂತರ ಲಿಸ್ಟ್‌ನಲ್ಲಿ ನಟ ಸುದೀಪ್ ಇದ್ದಾರೆ, ಆ ನಂತರ ನಟ ದರ್ಶನ್ ಇದ್ದಾರೆ. ಆದರೆ ಈ ಎಲ್ಲರ ಪೈಕಿ 9 ಮಿಲಿಯನ್ ಫಾಲೋವರ್‌ಗಳನ್ನು ಪಡೆದು, ನಂಬರ್ 1 ಸ್ಥಾನದಲ್ಲಿ ಇದ್ದಾರೆ ನಟ ಯಶ್.

More from Filmibeat

English summary
KGF Actor Yash Crosses 9 Million Followers On Instagram, know More Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X