twitter
    For Quick Alerts
    ALLOW NOTIFICATIONS  
    For Daily Alerts

    ಯಶ್ ಹೊಸ ದಾಖಲೆ: ಇನ್‌ಸ್ಟಾಗ್ರಾಂನಲ್ಲಿ 9 ಮಿಲಿಯನ್ ಫಾಲೋವರ್ಸ್‌

    |

    ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ 'ಕೆಜಿಎಫ್' ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಕನ್ನಡದ ಪಾಲಿಗೆ, ಭಾರತೀಯ ಚಿತ್ರರಂಗದ ಪಾಲಿಗೆ ದೊಡ್ಡ ದಾಖಲೆ ಬರೆದ 'ಕೆಜಿಎಫ್' ಮೂಲಕ ಯಶ್ ಟಾಪ್ ಸ್ಟಾರ್ ಆಗಿ ಬಿಟ್ಟಿದ್ದಾರೆ. 'ಕೆಜಿಎಫ್' ಸಿಕ್ಕಿದ್ದು ಯಶ್ ಅದೃಷ್ಟವೇ ಬದಲಾಗಿ ಹೋಗಿದೆ. ಈಗಂತೂ ಯಶ್ ನ್ಯಾಷನಲ್ ಸ್ಟಾರ್ ಆಗಿ ಬಿಟ್ಟಿದ್ದಾರೆ.

    ಇದೇ ಜೋಷ್‌ನಲ್ಲಿ ಯಶ್ ಈಗ ಮತ್ತೊಂದು ದಾಖಲೆ ಬರೆದಿದ್ದಾರೆ. ಆದರೆ ಇದು ಸಿನಿಮಾ ದಾಖಲೆ ಅಲ್ಲ. ಬದಲಿಗೆ ಇದು ಯಶ್ ವೈಯಕ್ತಿಕ ದಾಖಲೆ. ಕನ್ನಡದ ಯಾವ ನಟರು ಮಾಡದ ದಾಖಲೆ ನಟ ಯಶ್ ಹೆಸರಲ್ಲಿ ಆಗಿಬಿಟ್ಟಿದೆ. ಅದು ಮತ್ತೇನು ಅಲ್ಲ. ಯಶ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೆಚ್ಚು, ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

    ಕರ್ನಾಟಕದ 'ಕೆಜಿಎಫ್ 2' ವಿತರಕರಿಗೆ ಸನ್ಮಾನ: ಗೆಲುವಿಗೆ ಕಾರಣವಾದವರನ್ನು ಹೊಂಬಾಳೆ, ಯಶ್ ಮರೆಯಲಿಲ್ಲಕರ್ನಾಟಕದ 'ಕೆಜಿಎಫ್ 2' ವಿತರಕರಿಗೆ ಸನ್ಮಾನ: ಗೆಲುವಿಗೆ ಕಾರಣವಾದವರನ್ನು ಹೊಂಬಾಳೆ, ಯಶ್ ಮರೆಯಲಿಲ್ಲ

    ನಟ ಯಶ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುತ್ತಾರೆ. ಸಿನಿಮಾ ಮತ್ತು ವೈಯಕ್ತಿಕ ವಿಚಾರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಯಶ್ ಇನ್‌ಸ್ಟಾಗ್ರಾಂನಲ್ಲಿ 9 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ನಟರಲ್ಲಿ ಯಶ್ ಮುಂಚೂಣಿಯಲ್ಲಿ ಇದ್ದಾರೆ.

    KGF Actor Yash Crosses 9 Million Followers On Instagram

    ಇತ್ತೀಚೆಗೆ ಯಶ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಗಳು ಐರಾಳ ಮುದ್ದಾದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಐರಾ, ರಾಕಿ ಭಾಯ್ ಎನ್ನುವ ಮುದ್ದಾದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರೊಂದಿಗೆ 'ಕೆಜಿಎಫ್ 2' ಚಿತ್ರದ ಬಗ್ಗೆ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಯಶ್ ಫಾಲೋಯರ್‌ಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಒಟಿಟಿಲಾದ್ರೂ ದಾಖಲೆ ಮಾಡುತ್ತಾ ದಳಪತಿ ವಿಜಯ್ ಸಿನಿಮಾ 'ಬೀಸ್ಟ್'?ಒಟಿಟಿಲಾದ್ರೂ ದಾಖಲೆ ಮಾಡುತ್ತಾ ದಳಪತಿ ವಿಜಯ್ ಸಿನಿಮಾ 'ಬೀಸ್ಟ್'?

    KGF Actor Yash Crosses 9 Million Followers On Instagram

    ಇನ್ನು ಯಶ್ ಬಿಟ್ಟರೆ ನಟ ಪುನೀತ್ ರಾಜ್‌ಕುಮಾರ್ ಇನ್‌ಸ್ಟಾಗ್ರಾಂ ಖಾತೆಗೆ ಹೆಚ್ಚಿನ ಫಾಲೋವರ್ಸ್‌ಗಳು ಇದ್ದಾರೆ. ನಂತರ ಲಿಸ್ಟ್‌ನಲ್ಲಿ ನಟ ಸುದೀಪ್ ಇದ್ದಾರೆ, ಆ ನಂತರ ನಟ ದರ್ಶನ್ ಇದ್ದಾರೆ. ಆದರೆ ಈ ಎಲ್ಲರ ಪೈಕಿ 9 ಮಿಲಿಯನ್ ಫಾಲೋವರ್‌ಗಳನ್ನು ಪಡೆದು, ನಂಬರ್ 1 ಸ್ಥಾನದಲ್ಲಿ ಇದ್ದಾರೆ ನಟ ಯಶ್.

    English summary
    KGF Actor Yash Crosses 9 Million Followers On Instagram, know More Details
    Thursday, May 5, 2022, 15:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X