ಅಪರೂಪಕ್ಕೆ ರಾಕಿಂಗ್ ಸ್ಟಾರ್ ಯಶ್ ದರ್ಶನ: ಅಭಿಮಾನಿಗಳು ಕೇಳಿದ್ದು ಒಂದೇ ಪ್ರಶ್ನೆ!

KGF- 2 ಸಿನಿಮಾ ಬಂದು 9 ತಿಂಗಳಾಯಿತು. ಯಶ್ ಮುಂದಿನ ಸಿನಿಮಾ ಬಗ್ಗೆ ಮಾತ್ರ ಸುಳಿವೇ ಸಿಗುತ್ತಿಲ್ಲ. ಅಭಿಮಾನಿಗಳು ಕೂಡ ಕಾದು ಕಾದು ಸುಸ್ತಾಗಿದ್ದಾರೆ. ಯಶ್ ಇತ್ತೀಚೆಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಹುಟ್ಟುಹಬ್ಬಕ್ಕೂ ಯಶ್ ಅಭಿಮಾನಿಗಳ ಕೈಗೆ ಸಿಗಲಿಲ್ಲ.

ರಾಕಿಭಾಯ್ ಆಗಿ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದು ಗೊತ್ತೇಯಿದೆ. ಫಸ್ಟ್ ಚಾಪ್ಟರ್ ಬಂದು 3 ವರ್ಷಗಳ ನಂತರ ಸೆಕೆಂಡ್ ಚಾಪ್ಟರ್ ಬಂದಿತ್ತು. ದೊಡ್ಡ ಸಿನಿಮಾ ಸಮಯ ಬೇಕು, ನಡುವೆ ಕೊರೋನಾ ಹಾವಳಿ ಕೂಡ ಇತ್ತು. ಪರವಾಗಿಲ್ಲ, ಅಭಿಮಾನಿಗಳು ಕಾದಿದ್ದಕ್ಕೂ ಚಾಪ್ಟರ್‌-2 ಭರಪೂರ ಮನರಂಜನೆ ನೀಡಿತ್ತು. ಆ ನಂತರ ಯಶ್ ಸೈಲೆಂಟ್ ಆಗಿಬಿಟ್ಟರು. ಸ್ಟಾರ್ ನಟರು ಒಂದು ಸಿನಿಮಾ ಮುಗಿಸೋಕು ಮುನ್ನ ಮತ್ತೊಂದು ಸಿನಿಮಾ ಲೈನ್‌ನಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಯಶ್ ಮಾತ್ರ ಮುಂದಿನ ಸಿನಿಮಾ ಬಗ್ಗೆ ಇಷ್ಟು ದಿನಗಳಾದರೂ ಮೌನವಾಗಿರುವುದು ಅಭಿಮಾನಿಗಳಿಗೂ ಬೇಸರ ತರಿಸಿದೆ.

"ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರೋದೆನನ್ನೋ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಇರಲಿ" ಎಂದು ಯಶ್ ಅಭಿಮಾನಿಗಳಿಗೆ ಪತ್ರ ಬರೆದಿದ್ದರು. ಹಾಗಾಗಿ ಅಭಿಮಾನಿಗಳು ಇನ್ನು ಕಾಯುತ್ತಲೇ ಇದ್ದಾರೆ.

ಅಪರೂಪಕ್ಕೆ ಯಶ್ ದರ್ಶನ

ಅಪರೂಪಕ್ಕೆ ಯಶ್ ದರ್ಶನ

ನಟ ಯಶ್ ಏರ್‌ಪೋರ್ಟ್ ರಸ್ತೆಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿ ಪತ್ನಿ, ಮಕ್ಕಳ ಜೊತೆ ವಾಸಿಸುತ್ತಿದ್ದಾರೆ. ಅಪಾರ್ಟ್‌ಮೆಂಟ್ ಸುತ್ತ ವಾಕಿಂಗ್, ಜಾಗಿಂಗ್ ಮಾಡುತ್ತಾ ದೇಹ ಹುರಿಗೊಳಿಸುತ್ತಿದ್ದಾರೆ. ಯಶ್ ಅಪಾರ್ಟ್‌ಮೆಂಟ್ ಕಾಂಪೌಂಡ್‌ ಒಳಗೆ ವಾಕ್‌ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಶಾರ್ಟ್ಸ್, ಟೀಶರ್ಟ್‌ ಯಶ್ ಖಡಕ್ ಲುಕ್ ನೋಡಿದ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಏನ್ ಬಾಸ್ ನಿಮ್ಮ ವರ್ಕೌಟ್‌, ಬಾಡಿ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

ಅಭಿಮಾನಿಗಳ ಪ್ರಶ್ನೆ ಒಂದೇ!

ಅಭಿಮಾನಿಗಳ ಪ್ರಶ್ನೆ ಒಂದೇ!

ಯಶ್‌ ಪಾನಿಪುರಿ ಕಿಟ್ಟಿ ಮಾರ್ಗದರ್ಶನದಲ್ಲಿ ಜಿಮ್‌ನಲ್ಲಿ ವರ್ಕ್ಔಟ್‌ ಮಾಡುತ್ತಾರೆ. ದೇಹ ಹುರಿಗೊಳಿಸುವುದನ್ನು ಮರೆಯುವುದಿಲ್ಲ. ಜಿಮ್‌ಗೆ ಹೋಗಲು ಸಾಧ್ಯವಾಗದೇ ಇದ್ದಾಗ ಹೀಗೆ ಅಪಾರ್ಟ್‌ಮೆಂಟ್ ಒಳಗೆ ಲಘು ವ್ಯಾಯಾಮ ಮಾಡುತ್ತಾರೆ. ಸದ್ಯ ಯಶ್ ಹೀಗೆ ಅಪಾರ್ಟ್‌ಮೆಂಟ್ ಒಳಗೆ ಕಸರತ್ತು ಮಾಡಿ ಬೆವರಿಳಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ ಅಭಿಮಾನಿಗಳು, "ಎಲ್ಲಾ ಸರಿ ಯಶ್‌19 ಅಪ್‌ಡೇಟ್ ಯಾವಾಗ" ಎಂದು ಕೇಳುತ್ತಿದ್ದಾರೆ.

ವಿದೇಶದಲ್ಲಿ ಹುಟ್ಟುಹಬ್ಬ ಆಚರಣೆ

ವಿದೇಶದಲ್ಲಿ ಹುಟ್ಟುಹಬ್ಬ ಆಚರಣೆ

ಯಶ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಹುಟ್ಟುಹಬ್ಬದ ಸಂಭ್ರಮದಲ್ಲಿ ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ, ಕೇಕ್ ಕತ್ತರಿಸಿ, ಉಡುಗೊರೆ ನೀಡಿ ಶುಭಕೋರಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಯಶ್ ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ, ಕ್ಷಮಿಸಿ ಎಂದು ಪತ್ರದಲ್ಲಿ ಕೇಳಿಕೊಂಡಿದ್ದರು. ಇದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಯಶ್‌19 ಅಪ್‌ಡೇಟ್ ಕೊಡದಿದ್ದರೂ ಪರವಾಗಿಲ್ಲ, ನಮಗೆ ವಿಶ್ ಮಾಡಲು ಅವಕಾಶ ಕೊಡಿ ಎಂದಿದ್ದರು. ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆ ದುಬೈನಲ್ಲಿ ಯಶ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ಯಶ್‌19 ಕಥೆ ಏನಾಯ್ತು?

ಯಶ್‌19 ಕಥೆ ಏನಾಯ್ತು?

ಇನ್ನು KGF ಸರಣಿ ಸಕ್ಸಸ್ ನಂತರ ಯಶ್‌ ಕಥೆ ಆಯ್ಕೆಯಲ್ಲಿ ಒತ್ತಡಕ್ಕೆ ಒಳಗಾಗಿದ್ದಾರಾ ಎನ್ನುವ ಪ್ರಶ್ನೆಯೂ ಏಳುತ್ತದೆ. ಆದರೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯಶ್ ಯಾವುದೇ ಒತ್ತಡ ಇಲ್ಲ ಎಂದಿದ್ದರು. ಇನ್ನು ಈ ಬಾರಿ ಹಾಲಿವುಡ್‌ ರೇಂಜ್‌ನಲ್ಲಿ ಮತ್ತೊಂದು ಚಿತ್ರಕ್ಕೆ ಯಶ್ ಪ್ಲ್ಯಾನ್ ಮಾಡಿದಂತೆ ಕಾಣುತ್ತಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಯಶ್ ಮುಂದಿನ ಸಿನಿಮಾ ಬರುತ್ತೆ ಎನ್ನಲಾಗುತ್ತಿದೆ. ಇನ್ನು ನರ್ತನ್ ಯಶ್‌ಗಾಗಿ 3 ವರ್ಷಗಳಿಂದ ಕಥೆ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಅದು ಕೂಡ ಫೈನಲ್ ಆಗಿರುವಂತೆ ಕಾಣುತ್ತಿಲ್ಲ.

More from Filmibeat

English summary
KGF Actor Yash Fast Walking workout in Apartment Compound video Goes Viral. an other side Fans Asking Yash19 Update. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X