ಮನೆ ಮುಂದೆ ಅಭಿಮಾನಿಗಳ ಜಾತ್ರೆ: ಇದ್ದಪ್ಪಾ ಕ್ರೇಜ್ ಅಂದ್ರೆ, ಯಶ್ ದಿಢೀರ್ ಅಭಿಮಾನಿಗಳ ಭೇಟಿ ಯಾಕೆ?

ಇವತ್ತು ಬೆಳ್ಳಂ ಬೆಳಗ್ಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಯಶ್ ಅವರ ಮನೆ ಮುಂದೆ ಜಮಾಯಿಸಿದ್ದರು. ಏರ್‌ಪೋರ್ಟ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ ಫ್ಲಾಟ್‌ನಲ್ಲಿ ಯಶ್ ಮಡದಿ ಮಕ್ಕಳ ಜೊತೆ ವಾಸವಾಗಿದ್ದಾರೆ. ಅಪಾರ್ಟ್‌ಮೆಂಟ್ ಎದುರು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಕಾಯುತ್ತಿದ್ದರು. ಅವರಿಗೆ ರಾಕಿಂಗ್ ಸ್ಟಾರ್ ನಿರಾಸೆ ಮಾಡಲಿಲ್ಲ.

ಈ ಬಾರಿ ನಟ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಹುಟ್ಟುಹಬ್ಬದ ದಿನ ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ಸಿಹಿ ತಿನ್ನಿಸಿ, ಉಡುಗೊರೆ ನೀಡಿ ಶುಭ ಹಾರೈಸಬೇಕು ಎನ್ನುವ ಅಭಿಮಾನಿಗಳ ಆಸೆ ಈಡೇರಲೇ ಇಲ್ಲ. ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಯಶ್ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಅದಕ್ಕಿಂತ 1 ವರ್ಷ ಹಿಂದೆ ಕೊರೋನಾ ಆ ಸಂಭ್ರಮವನ್ನು ಕಿತ್ತುಕೊಂಡಿತ್ತು. ಮುಂದಿನ ಸಿನಿಮಾ ಅಪ್‌ಡೇಟ್ ಇಲ್ಲದೇ ನಿಮ್ಮ ಮುಂದೆ ನಿಲ್ಲಲು ಮನಸ್ಸಾಗುತ್ತಿಲ್ಲ ಎನ್ನುವ ಅರ್ಥದಲ್ಲಿ ಯಶ್ ಈ ವರ್ಷ ಬಹಿರಂಗ ಪತ್ರ ಬರೆದಿದ್ದರು.

ಯಶ್‌19 ಅಪ್‌ಡೇಟ್ ಯಾವಾಗ ಎಂದು ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. 'KGF'- 2 ಸಿನಿಮಾ ರಿಲೀಸ್‌ ಆಗಿ 9 ತಿಂಗಳು ಕಳೆದಿದೆ. ಆದರೆ ಯಶ್ ಮುಂದಿನ ಸಿನಿಮಾ ಯಾವ್ದು ಎನ್ನುವ ಸುಳಿವು ಮಾತ್ರ ಸಿಕ್ಕಿಲ್ಲ.

ಯಶ್ ಅಭಿಮಾನಿಗಳ ಭೇಟಿ

ಯಶ್ ಅಭಿಮಾನಿಗಳ ಭೇಟಿ

ಹುಟ್ಟುಹಬ್ಬದ ದಿನವೂ ಕೈಗೆ ಸಿಗದ ಯಶ್, ಇವತ್ತು ಮನೆ ಬಳಿ ಸಿಗುತ್ತಾರೆ ಎನ್ನುವ ಸುದ್ದಿ ತಿಳಿದು ಅಭಿಮಾನಿಗಳು ಜಮಾಯಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳ ಬೆಳಗ್ಗೆಯಿಂದಲೇ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಬಳಿ ಕಾದು ನಿಂತಿದ್ದರು. ಸಾಕಷ್ಟು ಜನ ಮಹಿಳಾ ಅಭಿಮಾನಿಗಳು ಕೂಡ ಬಂದಿದ್ದರು. ಅಭಿಮಾನಿಗಳಿಗೆ ನಿರಾಸೆ ಮಾಡದೇ ಯಶ್ ಎಲ್ಲರನ್ನು ಭೇಟಿ ಮಾಡಿ ಮಾತನಾಡಿಸಿದ್ದರು. ಸರತಿ ಸಾಲಿನಲ್ಲಿ ಬಂದು ಅಭಿಮಾನಿಗಳು ಕೈ ಕುಲುಕಿ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು.

ಅಭಿಮಾನಿಗಳಿಂದ ವಿಶೇಷ ಉಡುಗೊರೆ

ಅಭಿಮಾನಿಗಳಿಂದ ವಿಶೇಷ ಉಡುಗೊರೆ

ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಬಗೆಬಗೆಯ ಉಡುಗೊರೆ ತಂದಿದ್ದರು. ಸರಳ ಸಂತ ಸಿದ್ದೇಶ್ವರ ಸ್ವಾಮಿಜಿ ಫೋಟೊ ಸೇರಿದಂತೆ ನಟ ಯಶ್ ಅವರ ದೊಡ್ಡ ದೊಡ್ಡ ಫೋಟೊಗಳನ್ನು ಹೊತ್ತು ಅಭಿಮಾನಿಗಳು ಬಂದಿದ್ದರು. ಹಾರ, ಶಾಲು ಹಾಕಿ ನೆಚ್ಚಿನ ನಟನನ್ನು ಸನ್ಮಾನಿಸಿದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ನಟ ಯಶ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಬಹಳ ದಿನಗಳ ನಂತರ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಕಾಲೇಜು ಯುವಕ, ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಯಶ್‌ ಭೇಟಿಗೆ ಬಂದಿದ್ದರು.

ಯಶ್‌19 ಅಪ್‌ಡೇಟ್ ಯಾವಾಗ?

ಯಶ್‌19 ಅಪ್‌ಡೇಟ್ ಯಾವಾಗ?

'KGF'- 2 ಸಿನಿಮಾ ರಿಲೀಸ್ ಆಗಿ ತಿಂಗಳುಗಳೇ ಕಳೆದರೂ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮೌನ ವಹಿಸಿದ್ದಾರೆ. ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸ್ತಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಇನ್ನು ಪರಭಾಷಾ ಫಿಲ್ಮ್ ಮೇಕರ್ಸ್ ಕೂಡ ಯಶ್ ಜೊತೆ ಕೈ ಜೋಡಿಸೋಕೆ ಮುಂದಾಗಿದ್ದಾರೆ ಎನ್ನಲಾಗಿತ್ತು. ಆದರೆ ಯಾವುದು ಕೂಡ ಪಕ್ಕಾ ಆಗ್ಲಿಲ್ಲ. ಸ್ವತಃ ಯಶ್ ನನ್ನ ಸಿನಿಮಾ ಬಗ್ಗೆ ನಾನೇ ಅಪ್‌ಡೇಟ್ ಕೊಡ್ತೀನಿ. ಅಲ್ಲಿಯವರೆಗೂ ಯಾವುದೇ ಊಹಾಪೋಹಗಳನ್ನು ನಂಬಬೇಡಿ ಎಂದಿದ್ದರು.

ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ

ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ

ಯಶ್ ತಮ್ಮ ಮಗಳು ಐರಾ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸುತ್ತಾರೆ ಎನ್ನುವ ಮಾತುಗಳು ಕೂಡ ಕೇಳಿಬರ್ತಿದೆ. ಆದರೆ ಆ ಬ್ಯಾನರ್‌ನಲ್ಲಿ ಬೇರೆ ಸಿನಿಮಾಗಳನ್ನು ನಿರ್ಮಿಸ್ತಾರೆ ಎನ್ನಲಾಗ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಯಶ್‌19 ಸಿನಿಮಾ ಮೂಡಿ ಬರುತ್ತೆ ಎನ್ನುವ ಮಾತುಗಳು ಕೂಡ ಜೋರಾಗಿ ಕೇಳಿಬಂದಿತ್ತು. ಒಟ್ನಲ್ಲಿ ತಮ್ಮ ಮುಂದಿನ ಚಿತ್ರವನ್ನು ಹಾಲಿವುಡ್ ರೇಂಜ್‌ನಲ್ಲಿ ಮಾಡಲು ಯಶ್ ಮನಸ್ಸು ಮಾಡಿದ್ದಾರೆ. ಯಾವಾಗ ಯಶ್19 ಅನೌನ್ಸ್ ಆಗುತ್ತೆ? ಬ್ಯಾನರ್ ಯಾವ್ದು? ನಿರ್ದೇಶಕರು ಯಾರು? ಎನ್ನುವ ಪ್ರಶ್ನೆಗೆ ಯಾವಾಗ ಉತ್ತರ ಸಿಗುತ್ತೋ ಗೊತ್ತಿಲ್ಲ.

More from Filmibeat

English summary
KGF Actor Yash meets fans outside his house. Fans across India are no doubt waiting to hear about Yash19 Update. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X