Don't Miss!
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- News
Jio, Airtel 5G: ಕೇವಲ 4 ತಿಂಗಳಲ್ಲಿ ಎಷ್ಟು ಕೋಟಿ ಗ್ರಾಹಕರು ಗೊತ್ತೇ? ದಾಖಲೆ ಅಂಕಿಅಂಶ- ಮಾಹಿತಿ ಇಲ್ಲಿದೆ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Yash19: ಪಟ್ಟು ಹಿಡಿದು ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ರಾಕಿಂಗ್ ಫ್ಯಾನ್ಸ್: ಇನ್ನಾದರೂ ಬ್ರೇಕಿಂಗ್ ನ್ಯೂಸ್ ಸಿಗುತ್ತಾ?
ಸೂಪರ್ ಸ್ಟಾರ್ಗಳು ಒಂದು ಸಿನಿಮಾ ಮುಗಿಯೋಕು ಮೊದಲೇ ಮತ್ತೊಂದು ಸಿನಿಮಾವನ್ನು ಲೈನ್ನಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ KGF ಚಾಪ್ಟರ್- 2 ರಿಲೀಸ್ ಆಗಿ 6 ತಿಂಗಳು ಕಳೆದರೂ ಮುಂದಿನ ಸಿನಿಮಾ ಬಗ್ಗೆ ಯಶ್ ಮೌನವಾಗಿದ್ದಾರೆ.
KGF ಸರಣಿ ಸಿನಿಮಾಗಳಿಂದ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ರಾಕಿಭಾಯ್ ಮುಂದಿನ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಪರಭಾಷೆಯ ದೊಡ್ಡ ದೊಡ್ಡ ಫಿಲ್ಮ್ ಮೇಕರ್ಸ್ ಯಶ್ ಜೊತೆ ಸಿನಿಮಾ ಮಾಡಲು ಕ್ಯೂ ನಿಂತಿದ್ದಾರೆ. ಆದರೆ ಯಶ್ ಮಾತ್ರ ಅಳೆದು ತೂಗಿ ಸಿನಿಮಾ ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. KGF- 2 ನಂತರ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆಯ ಜೊತೆಗೆ ಒತ್ತಡವೂ ಇದೆ. ಹಾಗಾಗಿಯೇ ಸಿನಿಮಾ ಆಯ್ಕೆ ಮಾಡಿಕೊಳ್ಳಲು ಹಿಂದು ಮುಂದು ನೋಡುತ್ತಿದ್ದಾರೆ. ಯಾವಾಗ್ಯಾಗ ಯಶ್19 ಅಪ್ಡೇಟ್ ಬರುತ್ತೋ ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ.
Yash
19
:
ಯಶ್
ಮುಂದಿನ
ಚಿತ್ರಕ್ಕೆ
ಯಶ್
ಅವರೇ
ನಿರ್ಮಾಪಕರಂತೆ;
ಬ್ಯಾನರ್
ಹೆಸರೇನು?
ಕಳೆದ 6 ವರ್ಷಗಳಲ್ಲಿ ಯಶ್ ಮಾಡಿರುವುದು ಬರೀ 2 ಸಿನಿಮಾ. ಆ 2 ಸಿನಿಮಾಗಳು ಅವರ ಕರಿಯರ್ಗೆ ದೊಡ್ಡ ಟರ್ನಿಂಗ್ ಪಾಯಿಂಟ್ ಆಗಿದೆ. ಆದರೆ ಮುಂದಿನ ಸಿನಿಮಾ ಯಾವಾಗ ಶುರು ಮಾಡುತ್ತಾರೆ? ಯಾವಾಗ ಶೂಟಿಂಗ್? ಯಾವಾಗ? ರಿಲೀಸ್ ಅನ್ನುವುದೇ ಅಭಿಮಾನಿಗಳಿಗೆ ದೊಡ್ಡ ಚಿಂತೆಯಾಗಿದೆ.

ಟ್ವಿಟ್ಟರ್ನಲ್ಲಿ ಯಶ್ ಫ್ಯಾನ್ಸ್ ಟ್ರೆಂಡ್
ಯಶ್19 ಸಿನಿಮಾ ಅಪ್ಡೇಟ್ಗಾಗಿ ಕಾದು ಕಾದು ಅಭಿಮಾನಿಗಳು ಬೇಸತ್ತಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಮಾತ್ರ ನಾನೇ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತೀನಿ. ಅಲ್ಲಿವರೆಗೂ ಊಹಾಪೋಹಗಳನ್ನ ನಂಬಬೇಡಿ ಎಂದಿದ್ದಾರೆ. ಯಶ್ ನಟನೆಯ 19ನೇ ಸಿನಿಮಾ ಅಪ್ಡೇಟ್ಗಾಗಿ ಈಗ ಪಟ್ಟು ಹಿಡಿದಿದ್ದಾರೆ. ಟ್ವಿಟ್ಟರ್ನಲ್ಲಿ ಅಭಿಮಾನಿಗಳು #WeWantYash19Update ಎನ್ನುವ ಟ್ಯಾಗ್ ಕ್ರಿಯೇಟ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ. ಆ ಮೂಲಕ ಬೇಗ ಅಪ್ಡೇಟ್ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಬರ್ತ್ಡೇಗೆ ಯಶ್19 ಅಪ್ಡೇಟ್!
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ 33 ದಿನಗಳು ಮಾತ್ರ ಬಾಕಿಯಿದೆ. ಹುಟ್ಟುಹಬ್ಬದ ಸಂಭ್ರಮದಲ್ಲೇ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಸಿಗಬಹುದು, ಅಂದೇ ಸಿನಿಮಾ ಘೋಷಣೆ ಆಗಬಹುದು ಎನ್ನುವ ಲೆಕ್ಕಾಚಾರವೂ ಇದೆ. ಹಾಗಾಗಿ ಆ ದಿನಕ್ಕಾಗಿ ರಾಕಿಂಗ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೊರೊನಾ ಹಾವಳಿಯಿಂದ ಕಳೆದ ವರ್ಷ ಯಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಅಭಿಮಾನಿಗಳು ಆ ವಿಶೇಷ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಎದುರು ನೋಡುತ್ತಿದ್ದಾರೆ.

ತಮ್ಮದೇ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣ
KGF- 2 ನಂತರ ಬರೀ ಸ್ಯಾಂಡಲ್ವುಡ್ ಅಲ್ಲ ಬಾಲಿವುಡ್ನಲ್ಲೂ ಯಶ್ ಬಗ್ಗೆ ಕ್ರೇಜ್ ಹುಟ್ಟಿಕೊಂಡಿದೆ. ಪರಭಾಷಾ ಪ್ರೇಕ್ಷಕರಲ್ಲೂ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಇದೆ. ಈ ಕ್ರೇಜ್, ಈ ಕುತೂಹಲವನ್ನು ಎನ್ಕ್ಯಾಶ್ ಮಾಡಿಕೊಳ್ಳಲು ಯಶ್ ತಮ್ಮ ಮುಂದಿನ ಸಿನಿಮಾವನ್ನು ತಮ್ಮದೇ ಬ್ಯಾನರ್ನಲ್ಲಿ ನಿರ್ಮಾಣ ಮಾಡುತ್ತಾರೆ ಎನ್ನಲಾಗ್ತಿದೆ. ಮಗಳು ಐರಾ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.

ನರ್ತನ್ ಜೊತೆಗೆ ಯಶ್ ಸಿನಿಮಾ?
'ಮಫ್ತಿ' ಸಿನಿಮಾ ಮುಗಿತ್ತಿದ್ದಂತೆ ರಾಕಿಂಗ್ ಸ್ಟಾರ್ ಯಶ್ಗಾಗಿ ನಿರ್ದೇಶಕ ನರ್ತನ್ ಕಥೆಯೊಂದನ್ನು ಸಿದ್ಧಪಡಿಸಿದ್ದರು. KGF ಮೊದಲ ಚಾಪ್ಟರ್ ಹಿಟ್ ಆಗುತ್ತಿದ್ದಂತೆ ಯಶ್ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದರು. ಚಾಪ್ಟರ್ - 2 ಬರೋದು ಗೊತ್ತಿತ್ತು. ಆದರೆ ಆ ನಂತರ ಏನು ? ಎಂದಾಗ ನರ್ತನ್ ಸಿನಿಮಾ ಎನ್ನಲಾಗಿತ್ತು. KGF - 2 ತೆರೆಕಂಡು 6 ತಿಂಗಳು ಕಳೆದರು ಯಶ್ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಯಶ್ಗೆ ನರ್ತನ್ ಬರೆದ ಕಥೆ ಇಷ್ಟವಾಗಿಲ್ಲ ಎನ್ನುವ ಗುಸುಗುಸು ಕೂಡ ಕೇಳಿ ಬಂದಿತ್ತು. ಈ ನಡುವೆ ಕಾಲಿವುಡ್, ಬಾಲಿವುಡ್, ಟಾಲಿವುಡ್ ಫಿಲ್ಮ್ ಮೇಕರ್ಸ್ ಜೊತೆ ಯಶ್ ಕೈಜೋಡಿಸುತ್ತಾರೆ ಎನ್ನುವ ಚರ್ಚೆ ಕೂಡ ನಡೀತು. ಆದರೆ ಅದೆಲ್ಲಾ ಸುಳ್ಳು ಎಂದು ಯಶ್ ಹೇಳಿದ್ದಾರೆ. ಹಾಗಾಗಿ ನರ್ತನ್ ಕಥೆಯನ್ನು ತಿದ್ದಿ ತೀಡುವ ಕೆಲಸ ಮುಂದುವರೆಸಿದಂತೆ ಕಾಣ್ತಿದೆ.