ಗಂಡನ ಜೊತೆ ಏಕಾಂತ ಬಯಸಿದ್ದ ರಾಧಿಕಾ ಪಂಡಿತ್: ಆದರೆ...

ರಾಕಿಂಗ್ ಸ್ಟಾರ್ ಅಭಿಮಾನಿಗಳು ಯಶ್‌19 ಅಪ್‌ಡೇಟ್‌ಗಾಗಿ ಕಾಯ್ತಿದ್ದಾರೆ. KGF- 2 ಸಿನಿಮಾ ಬಂದೋಗಿ ವರ್ಷ ಕಳೆದ್ರು ಯಶ್ ಹೊಸ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಭಿಮಾನಿಗಳು ಅಪ್‌ಡೇಟ್‌ ಕೇಳಿ ಕೇಳಿ ಸುಸ್ತಾಗಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಸೈಲೆಂಟ್ ಆಗಿರುವ ಯಶ್, ಸದ್ಯ ಪತ್ನಿ ರಾಧಿಕಾ ಪಂಡಿತ್ ಬಗ್ಗೆ ಫನ್ನಿ ಪೋಸ್ಟ್‌ ಮಾಡಿದ್ದಾರೆ.

ಪರಸ್ಪರ ಪ್ರೀತಿಸಿ ಯಶ್ ಹಾಗೂ ರಾಧಿಕಾ ಪಂಡಿತ್‌ ಮದುವೆ ಆಗಿದ್ದರು. ಐರಾ ಹಾಗೂ ಯಥರ್ವ್ ಬಂದಮೇಲೆ ಅವರ ಫ್ಯಾಮಿಲಿ ಕಂಪ್ಲೀಟ್ ಆಯಿತು. ಬಿಡುವಿನ ಬಹುತೇಕ ಸಮಯವನ್ನು ಯಶ್ ಮಡದಿ ಮಕ್ಕಳಿಗೆ ಮೀಸಲಿಡುತ್ತಾರೆ. ಫ್ಯಾಮಿಲಿಯ ಸುಂದರ ಕ್ಷಣಗಳನ್ನು ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ಹಂಚಿಕೊಳ್ಳುತ್ತಿರುತ್ತಾರೆ. ರಾಧಿಕಾ ಪಂಡಿತ್ ಅಂತು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟೀವ್ ಆಗಿರ್ತಾರೆ. ನಟ ಯಶ್ ಆಗೊಮ್ಮೆ ಈಗೊಮ್ಮೆ ಮಾಡುವ ಪೋಸ್ಟ್ ಸಖತ್ ವೈರಲ್ ಆಗುತ್ತದೆ.

KGF actor Yash shares hilarious glimpse of Wife Radhika Pandits Expectation vs Reality

ಪತ್ನಿ ರಾಧಿಕಾ ಪಂಡಿತ್ ನಿರೀಕ್ಷೆಯೇನು ? ಆದರೆ ರಿಯಾಲಿಟಿ ಏನು? ಎನ್ನುವುದರ ಬಗ್ಗೆ ಸದ್ಯ ಯಶ್ ಫನ್ನಿಯಾಗಿ ಪೋಸ್ಟ್ ಮಾಡಿದ್ದಾರೆ. ರಾಧಿಕಾ ಪಂಡಿತ್‌ಗೆ ಪತಿ ಯಶ್‌ ಜೊತೆ ಏಕಾಂತದಲ್ಲಿ ಕಾಲ ಕಳೆಯುವ ಆಸೆಯಂತೆ. ಆದರೆ ಪುಟ್ಟಮಕ್ಕಳು ಜೊತೆಗಿರುವುದರಿಂದ ಅದು ಸಾಧ್ಯವಾಗುತ್ತಿಲ್ಲವಂತೆ. ಇದನ್ನೇ ಯಶ್ "ನನ್ನ ಮಡದಿಯ ನಿರೀಕ್ಷೆ? ಆದರೆ ರಿಯಾಲಿಟಿ? ಎಂದು ಹೇಳಿ ಎರಡು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದರಲ್ಲಿ ಯಶ್‌- ರಾಧಿಕಾ ಕೈ ಕೈ ಹಿಡಿದು ಹಾಯಾಗಿ ನಡೆದು ಹೋಗುವಂತಿದ್ದರೆ ಮತ್ತೊಂದರಲ್ಲಿ ಇಬ್ಬರು ತಮ್ಮ ಮಕ್ಕಳನ್ನು ಎತ್ತಿಕೊಂಡಿದ್ದಾರೆ.

ಸದ್ಯ ಯಶ್ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್‌, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. "ರಾಕಿಭಾಯ್ ಆದ್ರು ಅಷ್ಟೇ ನಿಮ್ಮ ಮಗನನ್ನು ನೀವು ನೋಡಿಕೊಳ್ಳಲೇಬೇಕು" ಎಂದು ಕಾಮೆಂಟ್ ಮಾಡಿದ್ದಾರೆ. "ರಿಯಾಲಿಟಿನಿ ತುಂಬಾ ಚೆನ್ನಾಗಿದೆ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇನ್ನುಳಿದಂತೆ ಬಹುತೇಕರು ಯಶ್‌19 ಅಪ್‌ಡೇಟ್‌ ಕೊಡಿ ಎಂದು ಕೇಳುತ್ತಿದ್ದಾರೆ. "ಯಶ್‌19 ಅನ್ನೋದು ನಿರೀಕ್ಷೆ, ರಿಯಾಲಿಟಿ ನಿರಾಸೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸ್ಟಾರ್‌ ನಟರು ಒಂದು ಸಿನಿಮಾ ಮುಗಿಯೋಕು ಮುನ್ನ ಇನ್ನೊಂದು ಸಿನಿಮಾ ಲೈನಪ್‌ ಮಾಡಿಕೊಂಡಿರುತ್ತಾರೆ. ಆದರೆ ಯಶ್ ಮಾತ್ರ KGF- 2 ರಿಲೀಸ್ ಆಗಿ ವರ್ಷ ಕಳೆದ್ರು ಮುಂದಿನ ಸಿನಿಮಾ ಬಗ್ಗೆ ಮೌನವಾಗಿದ್ದಾರೆ. ಕಥೆಯ ಆಯ್ಕೆಯಲ್ಲಿ ಒತ್ತಡದಲ್ಲಿ ಇರುವಂತೆ ಕಾಣುತ್ತಿದೆ. ಆದರೆ ಅವರು ಈ ಮಾತನ್ನು ಒಪ್ಪಲು ಸಿದ್ಧರಿಲ್ಲ. ಪರ ಭಾಷಾ ಫಿಲ್ಮ್ ಮೇಕರ್ಸ್ ಕೂಡ ಯಶ್ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ತೆರೆಮರೆಯಲ್ಲಿ ಮುಂದಿನ ಚಿತ್ರಕ್ಕಾಗಿ ಕಸರತ್ತು ನಡೆಸ್ತಿದ್ದಾರೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್ ನಿರ್ದೇಶನದಲ್ಲಿ ಯಶ್ ನಟಿಸ್ತಾರೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು. ಇನ್ನು ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಕೂಡ ಗ್ಯಾಂಗ್‌ಸ್ಟರ್ ಕಥೆ ಆಧರಿಸಿ ಬರುತ್ತೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಮಾಲಿವುಡ್‌ನಲ್ಲಿ ಒಂದೆರಡು ಸಿನಿಮಾ ಮಾಡಿರುವ ನಿರ್ದೇಶಕಿಯ ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ಕೊಡ್ತಾರಾ ಕಾದು ನೋಡಬೇಕಿದೆ.

KGF ಸರಣಿಗಾಗಿ ಐದಾರು ವರ್ಷ ವ್ಯಯಿಸಿದ ಯಶ್ ಮುಂದಿನ ಸಿನಿಮಾ ಶುರು ಮಾಡಲು ಬಹಳ ತಡ ಮಾಡುತ್ತಿದ್ದಾರೆ. ಇನ್ನು ಸಿನಿಮಾ ಅನೌನ್ಸ್ ಆಗಿಲ್ಲ. ಶೂಟಿಂಗ್ ಯಾವಾಗ? ಪೋಸ್ಟ್ ಪ್ರೊಡಕ್ಷನ್, ರಿಲೀಸ್ ಯಾವಾಗ? ಅಂತೆಲ್ಲಾ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಮತ್ತೆ ಕೆಲವರು KGF -2 ನಂತರ ಅದಕ್ಕಿಂತ ದೊಡ್ಡ ಸಿನಿಮಾ ಮಾಡಬೇಕು ಅಂತೇನು ಇಲ್ಲ. ಚಿಕ್ಕ ಸಿನಿಮಾ ಕೂಡ ಮಾಡಬಹುದು ಎಂದು ಸಲಹೆ ನೀಡುತ್ತಿದ್ದಾರೆ.

More from Filmibeat

English summary
KGF actor Yash shares hilarious glimpse of Wife Radhika Pandit's Expectation v/s Reality. Fans Asking Yash19 upadate in comments section. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X