ಶ್ರೀನಿಧಿ ಶೆಟ್ಟಿ ಹತ್ತನೇ ತರಗತಿ ಅಂಕ ಪಟ್ಟಿ ವೈರಲ್: ಕನ್ನಡದಲ್ಲಿ ಅತಿ ಹೆಚ್ಚು ಅಂಕ!

ಕನ್ನಡದ ನಟಿ ಶ್ರೀನಿಧಿ ಶೆಟ್ಟಿ‌ ಕೆಜಿಎಫ್ ಬೆಡಗಿ ಅಂತಲೇ ಹೆಸರುವಾಸಿ. ಕೆಜಿಎಫ್ ಚಿತ್ರದ ಮೂಲಕವೇ ಶ್ರೀನಿಧಿ ಶೆಟ್ಟಿ ತಮ್ಮ ಸಿನಿಮಾ ಪಯಣವನ್ನು ಆರಂಭಿಸಿದ್ದಾರೆ. ಚಾಪ್ಟರ್ 1 ಬಳಿಕ 'ಕೆಜಿಎಫ್ 2‌‌‌' ಚಿತ್ರದಲ್ಲಿ ನಟಿಸಿದ್ದಾರೆ. ಈ ಎರಡು ಸಿನಿಮಾಗಳಲ್ಲಿ ನಟಿಸಲು ಶ್ರೀನಿಧಿ ಶೆಟ್ಟಿ ಹಲವು ವರ್ಷಗಳನ್ನು ಕೆಜಿಎಫ್ ಗಾಗಿಯೇ ಮುಡಿಪಿಟ್ಟರು.‌

ಕೆಜಿಎಫ್ ಬಳಿಕ ಈಗ ತೆಲುಗು, ತಮಿಳು ಸೇರಿದಂತೆ ಹಲವು ಚಿತ್ರಗಳ ಅವಕಾಶಗಳು ಒದಗಿ ಬರುತ್ತಿವೆ. ಸದ್ಯ ನಟ ವಿಕ್ರಂ ಜೊತೆಗೆ 'ಕೋಬ್ರಾ' ಚಿತ್ರದಲ್ಲಿ ತೆರೆ ಮೇಲೆ ಬರಲಿದ್ದಾರೆ. ಈ ಚಿತ್ರದಲ್ಲಿ ಶ್ರೀನಿಧಿ ಲುಕ್ ಕೂಡ ರಿವೀಲ್ ಆಗಿದೆ.ಸದ್ಯ ಶ್ರೀನಿಧಿ ಶೆಟ್ಟಿಯ ಸಿನಿಮಾ ಅಲ್ಲ, ಆಕೆಯ ಮಾರ್ಕ್ಸ್ ಕಾರ್ಡ್ ಹೆಚ್ಚು ಕುತೂಹಲ ಮೂಡಿದೆ. ಹೌದು, ನಟಿ ಶ್ರೀನಿಧಿ ಶೆಟ್ಟಿಯ ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಶ್ರೀನಿಧಿ ಶೆಟ್ಟಿ ಹತ್ತನೇ ತರಗತಿಯ ಅಂಕ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.‌‌ ಅದರಲ್ಲೂ ಕನ್ನಡ ಸಬ್ಜೆಕ್ಟ್ ನಲ್ಲಿ ಪಡೆದ ಅಂಕ ಹೆಚ್ಚು ಗಮನ ಸೆಳೆದಿದೆ. ಇನ್ನು ಈ ಮಾರ್ಕ್ಸ್ ಕಾರ್ಡ್ ನೋಡಿದರವು ಶ್ರೀನಿಧಿ ಶೆಟ್ಟಿಗೆ ಭೇಷ್ ಎನ್ನುತ್ತಿದ್ದಾರೆ.‌

ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಶ್ರೀನಿಧಿ!

ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಶ್ರೀನಿಧಿ!

ನಟಿ ಶ್ರೀನಿಧಿ ಶೆಟ್ಟಿ ಮೂಲತಃ ಕನ್ನಡದ ಹುಡುಗಿ. ಇನ್ನೂ ಹತ್ತನೇ ತರಗತಿಯಲ್ಲಿ ಶ್ರೀನಿಧಿ ಶೆಟ್ಟಿ ಹೆಚ್ಚು ಅಂಕ ಪಡೆದಿದ್ದಾರೆ. ಕನ್ನಡ ವಿಭಾಗದಲ್ಲಿ 121 ಅಂಕಗಳನ್ನು ಪಡೆದುಕೊಂಡಿದ್ದಾರೆ. ಹೌದು, ಶ್ರೀನಿಧಿ ಶೆಟ್ಟಿ ಹತ್ತನೇ ತರಗತಿಯಲ್ಲಿ ಕನ್ನಡ ವಿಭಾಗದಲ್ಲಿ 125 ಅಂಕಕ್ಕೆ 121 ಅಂಕವನ್ನು ಪಡೆದುಕೊಂಡಿದ್ದಾರೆ. ಸದ್ಯ ಈ ಶ್ರೀನಿಧಿ ಶೆಟ್ಟಿ ಅವ್ರ ಹತ್ತನೇ ತರಗತಿಯ ಈ ಕನ್ನಡ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಜಿಎಫ್ ಮೂಲಕ ದೊಡ್ಡ ಯಶಸ್ಸು!

ಕೆಜಿಎಫ್ ಮೂಲಕ ದೊಡ್ಡ ಯಶಸ್ಸು!

ಕೆಜಿಎಫ್ ಸಕ್ಸಸ್ ಶ್ರೀನಿಧಿಗೆ ಮತ್ಯಾವ ಚಿತ್ರಗಳು ತಂದುಕೊಡಲು ಸಾಧ್ಯವಿಲ್ಲ. ದೇಶಾದ್ಯಂತ ಅಪಾರವಾದ ಅಭಿಮಾನಿ ಬಳಗ ಇದೆ ಎಂದು ಹೇಳಬಹುದು. ಸದ್ಯ ಶ್ರೀನಿಧಿ ಶೆಟ್ಟಿ ಅವರಿಗೆ ಸಾಲುಸಾಲು ಚಿತ್ರಗಳು ಬರುತ್ತಿದ್ದು, ಶ್ರೀನಿಧಿ ಶೆಟ್ಟಿ ಬೇಡಿಕೆ ಹೆಚ್ಚಾಗಿದೆ.‌ ಇದರ ನಡುವೆ ನಟಿ ಶ್ರೀನಿಧಿ ಶೆಟ್ಟಿ ಅವರ ಹತ್ತನೇ ತರಗತಿಯ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಇದು ಶ್ರೀನಿಧಿ ಅವರ ಅಂಕಪಟ್ಟಿಯಾ ಎನ್ನುವ ಬಗ್ಗೆ ನಟಿ ಉತ್ತರ ಕೊಡಬೇಕು.

ತಮಿಳು, ತೆಲುಗಿನಲ್ಲಿ ಶ್ರೀನಿಧಿಗೆ ಆಫರ್!

ತಮಿಳು, ತೆಲುಗಿನಲ್ಲಿ ಶ್ರೀನಿಧಿಗೆ ಆಫರ್!

ಇನ್ನೂ ಶ್ರೀನಿಧಿ ತಮ್ಮ ಮುಂದಿನ ಚಿತ್ರದಲ್ಲಿ ಯಾವ ರೀತಿಯ ಪಾತ್ರದ ಮೂಲಕ ಜನರ ಮುಂದೆ ಬರ್ತಾರೆ ಎನ್ನುವುದನ್ನು ನೋಡಬೇಕಿದೆ. ಇನ್ನು ಯಾವ ಭಾಷೆಯ ಹೊಸ ಸಿನಿಮಾ ಪ್ರಕಟ ಆಗಲಿದೆ ಎನ್ನುವ ಕುತೂಹಲ ಕೂಡ ಮನೆ ಮಾಡಿದೆ. ಕೋಬ್ರಾ ಚಿತ್ರದಲ್ಲಿ ಹೋಮ್ಲಿ ಹುಡುಗೊಯ ಪಾತ್ರದಲ್ಲಿ ಶ್ರೀನಿಧಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತೆಲುಗು ಮತ್ತು ತಮಿಳು ಚಿತ್ರಗಳ ಅವಕಾಶಗಳು ಬರುತ್ತಿದ್ದು, ಪಾತ್ರಹಳನ್ನು ಎಚ್ಚರಿಕೆಯಿಂದ ಅಯ್ಕೆ ಮಾಡಿಕೊಳ್ಳುತ್ತಾ ಇದ್ದಾರೆ ಶ್ರೀನಿಧಿ.

'ಕೆಜಿಎಫ್ 3'ಯಲ್ಲಿ ಶ್ರೀನಿಧಿ ಇರ್ತಾರಾ?

'ಕೆಜಿಎಫ್ 3'ಯಲ್ಲಿ ಶ್ರೀನಿಧಿ ಇರ್ತಾರಾ?

ಶ್ರೀನಿಧಿ ಶೆಟ್ಟಿ ಕೆಜಿಎಫ್ ಸರಣಿ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆದರೆ ಕೆಜಿಎಫ್ 2 ಚಿತ್ರದಲ್ಲಿ, ಶ್ರೀನಿಧಿಯ ಪಾತ್ರ ಅಂತ್ಯವಾಗಿದೆ. ಗುಂಡೇಟಿಗೆ ಬಲಿಯಾಗಿ ಶ್ರೀನಿಧಿ ಪಾತ್ರ ಸತ್ತು ಹೋತ್ತೆ. ಹಾಗಾಗಿ ಕೆಜಿಎಫ್ 3 ಚಿತ್ರದಲ್ಲಿ ಶ್ರೀನಿಧಿ ಪಾತ್ರ ಇರುವುದು ಅನುಮಾನ. ಒಂದು ವೇಳೆ ಇದ್ದರೂ, ಅದು ಫ್ಲ್ಯಾಶ್ ಬ್ಯಾಕ್‌ನಲ್ಲಿ ಬಂಉ ಹೋಗ ಬಹುದು.

More from Filmibeat

English summary
Kgf Actress Srinidhi Shetty 10th Marks Card Viral in Social Media, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X