For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್ ನೀಲ್ ಗೆ 'ಕೆಜಿಎಫ್' ಹೀರೋಯಿನ್ ಸ್ವೀಟ್ ಶುಭಾಶಯ

  |
  ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟೆಯಿಂದ ನಿರ್ದೇಶಕ ಪ್ರಶಾಂತ್ ನೀಲ್ ಗೆ ಸಿಹಿಯಾದ ಶುಭಾಶಯ

  ಕನ್ನಡಕ್ಕೆ 'ಕೆಜಿಎಫ್' ಎಂಬ ಮಹಾ ಸಿನಿಮಾವನ್ನು ನೀಡಿದ ನಿರ್ದೇಶಕ ಪ್ರಶಾಂತ್ ನೀಲ್. ಇಂದು ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಅಭಿಮಾನಿಗಳ ಜೊತೆಗೆ ಚಿತ್ರರಂಗದ ಸ್ನೇಹಿತರು ಅವರಿಗೆ ವಿಶ್ ಮಾಡುತ್ತಿದ್ದಾರೆ.

  ಅಭಿಮಾನಿ ಕೇಳಿದ ತಕ್ಷಣ ಮೊಬೈಲ್ ನಂಬರ್ ನೀಡಿದ 'ಕೆಜಿಎಫ್' ಕ್ವೀನ್

  'ಕೆಜಿಎಫ್' ಸಿನಿಮಾದ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಡೈರೆಕ್ಟರ್ ಪ್ರಶಾಂತ್ ನೀಲ್ ಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ ''ಒಂದು ಅದ್ಭುತ ಮನಸ್ಸಿಗೆ ಹ್ಯಾಪಿ ಬರ್ತ್ ಡೇ. ನೀವು ನಮಗೆಲ್ಲ ಸ್ಫೂರ್ತಿ. ಹ್ಯಾಪಿ ಬರ್ತ್ ಡೇ ಪ್ರಶಾಂತ್. ನನ್ನ ಜೀವನದಲ್ಲಿ ನಿಮ್ಮನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ.'' ಎಂದು ಬರೆದುಕೊಂಡಿದ್ದಾರೆ.

  ಪ್ರಶಾಂತ್ ನೀಲ್ ಎಷ್ಟೋ ಯುವ ನಿರ್ದೇಶಕರಿಗೆ ಸ್ಫೂರ್ತಿ ಮಾತ್ರವಲ್ಲದೆ, ಚಿತ್ರದ ನಾಯಕಿಗೆ ಕೂಡ ಸ್ಫೂರ್ತಿಯಾಗಿದ್ದಾರೆ. ಪ್ರಶಾಂತ್ ನೀಲ್ ಜೊತೆಗಿನ ಕೆಲ ಫೋಟೋಗಳನ್ನು ಶ್ರೀನಿಧಿ ಹಂಚಿಕೊಂಡಿದ್ದಾರೆ. 'ಕೆಜಿಎಫ್' ಶ್ರೀನಿಧಿ ಶೆಟ್ಟಿ ನಟನೆಯ ಮೊದಲ ಸಿನಿಮಾ ಆಗಿದ್ದು, ಪ್ರಶಾಂತ್ ನೀಲ್ ಅವರನ್ನು ಲಾಂಚ್ ಮಾಡಿದ್ದಾರೆ.

  'ಕೆಜಿಎಫ್ 2' ನಲ್ಲಿ ಮದುವೆ ಆಗ್ತಾರಾ ರಾಕಿ - ರೀನಾ?

  ಸದ್ಯ, ಪ್ರಶಾಂತ್ ನೀಲ್ 'ಕೆಜಿಎಫ್' ಚಾಪ್ಟರ್ 2 ಚಿತ್ರದ ತಯಾರಿಯಲ್ಲಿ ಇದ್ದಾರೆ. ಮೊದಲ ಅಧ್ಯಾಯದಲ್ಲಿ ಇಡೀ ಭಾರತದ ತುಂಬ ಈ ಸಿನಿಮಾ ಸದ್ದು ಮಾಡಿದ್ದು, ಮುಂದಿನ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅದೇ ಚಿತ್ರತಂಡ ಇಲ್ಲಿಯೂ ಮುಂದುವರೆದಿದೆ.

  English summary
  KGF movie actress Srinidhi Shetty wishes for director Prashanth Neel's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X