'ಯುವರಾಜ'ನನ್ನು ಲಾಂಚ್ ಮಾಡ್ತಿದ್ದಾರೆ 'ಕೆಜಿಎಫ್' ಸಹ ನಿರ್ದೇಶಕ
ವರನಟ ಡಾ ರಾಜ್ ಕುಮಾರ್ ಮೊಮ್ಮಗ ಯುವರಾಜ್ ಕುಮಾರ್ ಸಿನಿಮಾ ಇಂಡಸ್ಟ್ರಿಗೆ ಬರುವುದು ಪಕ್ಕಾ ಆಗಿತ್ತು. ಇದೀಗ ಅವರನ್ನು ಲಾಂಚ್ ಮಾಡಲು ಸಿದ್ಧವಾಗಿರುವ ನಿರ್ದೇಶಕರ ಹೆಸರು ಬಹಿರಂಗವಾಗಿದೆ.
'ಕೆಜಿಎಫ್' ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್ ಈಗ ತಾವೇ ಒಂದು ಸಿನಿಮಾ ಮಾಡುವ ತಯಾರಿಯಲ್ಲಿ ಇದ್ದಾರೆ. ಪ್ರಶಾಂತ್ ನೀಲ್ ಜೊತೆಗೆ ಕೆಲಸ ಮಾಡಿದ ಅನುಭವ ಹೊಂದಿರುವ ಪುನೀತ್ 'ಕೆಜಿಎಫ್' ಚಿತ್ರದ ಸಣ್ಣ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು.
ಪುನೀತ್ ಮೊದಲ ಸಿನಿಮಾಗೆ ಯುವರಾಜ್ ಕುಮಾರ್ ನಾಯಕನಾಗಿದ್ದಾರೆ. ದೊಡ್ಮೆನೆ ಹುಡುಗನ ಮೊದಲ ಸಿನಿಮಾ ಮಾಡುವ ಅವಕಾಶ ಪುನೀತ್ ಪಾಲಾಗಿದೆ. ಈಗಾಗಲೇ ಈ ಸಿನಿಮಾದ ಬಗ್ಗೆ ಸಾಕಷ್ಟು ಬಾರಿ ಮಾತುಗಳು ಆಗಿದೆಯಂತೆ.

ಸದ್ಯ, ಪುನೀತ್ ಅಂಡ್ ಟೀಮ್ ಸ್ಟೋರಿ ಬೋರ್ಡ್ ತಯಾರು ಮಾಡುತ್ತಿದ್ದಾರೆ. ಕೆಲವು ತಯಾರಿಗಳ ನಂತರ ಮುಂದಿನ ವರ್ಷ ಸಿನಿಮಾ ಶುರು ಆಗುತ್ತಿದೆ. ವಿನಯ್ ರಾಜ್ ಕುಮಾರ್ ನಂತರ ಯುವರಾಜ್ ಸಿನಿಮಾ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಯುವರಾಜ್ ಕುಮಾರ್ ನಟನೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆಕ್ಷನ್ ಹಾಗೂ ಡ್ಯಾನ್ಸ್ ನಲ್ಲಿ ಈಗಾಗಲೇ ಯುವ ಅನೇಕರ ಗಮನ ಸೆಳೆದಿದ್ದಾರೆ. ಈ ಹಿಂದೆ 'ನಟ ಸಾರ್ವಭೌಮ' ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಯುವ ಡ್ಯಾನ್ಸ್ ಮೆಚ್ಚುಗೆ ಪಡೆದಿತ್ತು.


Click it and Unblock the Notifications











