twitter
    For Quick Alerts
    ALLOW NOTIFICATIONS  
    For Daily Alerts

    'ಯುವರಾಜ'ನನ್ನು ಲಾಂಚ್ ಮಾಡ್ತಿದ್ದಾರೆ 'ಕೆಜಿಎಫ್' ಸಹ ನಿರ್ದೇಶಕ

    |

    ವರನಟ ಡಾ ರಾಜ್ ಕುಮಾರ್ ಮೊಮ್ಮಗ ಯುವರಾಜ್ ಕುಮಾರ್ ಸಿನಿಮಾ ಇಂಡಸ್ಟ್ರಿಗೆ ಬರುವುದು ಪಕ್ಕಾ ಆಗಿತ್ತು. ಇದೀಗ ಅವರನ್ನು ಲಾಂಚ್ ಮಾಡಲು ಸಿದ್ಧವಾಗಿರುವ ನಿರ್ದೇಶಕರ ಹೆಸರು ಬಹಿರಂಗವಾಗಿದೆ.

    'ಕೆಜಿಎಫ್' ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್ ಈಗ ತಾವೇ ಒಂದು ಸಿನಿಮಾ ಮಾಡುವ ತಯಾರಿಯಲ್ಲಿ ಇದ್ದಾರೆ. ಪ್ರಶಾಂತ್ ನೀಲ್ ಜೊತೆಗೆ ಕೆಲಸ ಮಾಡಿದ ಅನುಭವ ಹೊಂದಿರುವ ಪುನೀತ್ 'ಕೆಜಿಎಫ್' ಚಿತ್ರದ ಸಣ್ಣ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು.

    ಫೋಟೋ ನೋಡಿ: ಯುವ ರಾಜ್ ಕುಮಾರ್ ನಿಶ್ಚಿತಾರ್ಥದಲ್ಲಿ ವಿದ್ವತ್ ಮಿಂಚಿಂಗ್.!ಫೋಟೋ ನೋಡಿ: ಯುವ ರಾಜ್ ಕುಮಾರ್ ನಿಶ್ಚಿತಾರ್ಥದಲ್ಲಿ ವಿದ್ವತ್ ಮಿಂಚಿಂಗ್.!

    ಪುನೀತ್ ಮೊದಲ ಸಿನಿಮಾಗೆ ಯುವರಾಜ್ ಕುಮಾರ್ ನಾಯಕನಾಗಿದ್ದಾರೆ. ದೊಡ್ಮೆನೆ ಹುಡುಗನ ಮೊದಲ ಸಿನಿಮಾ ಮಾಡುವ ಅವಕಾಶ ಪುನೀತ್ ಪಾಲಾಗಿದೆ. ಈಗಾಗಲೇ ಈ ಸಿನಿಮಾದ ಬಗ್ಗೆ ಸಾಕಷ್ಟು ಬಾರಿ ಮಾತುಗಳು ಆಗಿದೆಯಂತೆ.

    KGF Associate Director Pneeth Will Be Directing Yuvaraj Kumar Debut Movie

    ಸದ್ಯ, ಪುನೀತ್ ಅಂಡ್ ಟೀಮ್ ಸ್ಟೋರಿ ಬೋರ್ಡ್ ತಯಾರು ಮಾಡುತ್ತಿದ್ದಾರೆ. ಕೆಲವು ತಯಾರಿಗಳ ನಂತರ ಮುಂದಿನ ವರ್ಷ ಸಿನಿಮಾ ಶುರು ಆಗುತ್ತಿದೆ. ವಿನಯ್ ರಾಜ್ ಕುಮಾರ್ ನಂತರ ಯುವರಾಜ್ ಸಿನಿಮಾ ಚಿತ್ರರಂಗಕ್ಕೆ ಬರುತ್ತಿದ್ದಾರೆ.

    ಸಖತ್ತಾಗಿತ್ತು ಯುವ ರಾಜ್ ಕುಮಾರ್ - ಶ್ರೀ ದೇವಿ ಎಂಗೇಜ್ ಮೆಂಟ್ ಪಾರ್ಟಿಸಖತ್ತಾಗಿತ್ತು ಯುವ ರಾಜ್ ಕುಮಾರ್ - ಶ್ರೀ ದೇವಿ ಎಂಗೇಜ್ ಮೆಂಟ್ ಪಾರ್ಟಿ

    ಯುವರಾಜ್ ಕುಮಾರ್ ನಟನೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆಕ್ಷನ್ ಹಾಗೂ ಡ್ಯಾನ್ಸ್ ನಲ್ಲಿ ಈಗಾಗಲೇ ಯುವ ಅನೇಕರ ಗಮನ ಸೆಳೆದಿದ್ದಾರೆ. ಈ ಹಿಂದೆ 'ನಟ ಸಾರ್ವಭೌಮ' ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಯುವ ಡ್ಯಾನ್ಸ್ ಮೆಚ್ಚುಗೆ ಪಡೆದಿತ್ತು.

    English summary
    KGF associate director Puneeth will be directing Yuvaraj Kumar debut movie.
    Thursday, December 26, 2019, 11:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X