For Quick Alerts
  ALLOW NOTIFICATIONS  
  For Daily Alerts

  ಹಿಂದಿ ಟೆಲಿವಿಷನ್‌ನಲ್ಲಿಯೂ ದಾಖಲೆ ನಿರ್ಮಿಸಿದ ಕನ್ನಡದ ಕೆಜಿಎಫ್-1

  |

  ಕನ್ನಡದ ಚಿತ್ರಗಳು ಹಿಂದಿಗೆ ಡಬ್ ಆಗಿ ಅಧಿಕ ವೀಕ್ಷಕರನ್ನು ಸಂಪಾದಿಸುತ್ತಿವೆ. ಕೆಜಿಎಫ್ ಚಿತ್ರದ ಮೊದಲ ಭಾಗ, ಹಿಂದಿಯಲ್ಲಿಯೂ ಬಿಡುಗಡೆಯಾಗಿತ್ತು. ಅದೀಗ ಕಿರುತೆರೆಯಲ್ಲಿ ಪ್ರಸಾರವಾಗಿದ್ದು, ದಾಖಲೆಯ ವೀಕ್ಷಣೆ ಕಂಡಿದೆ.

  ಹಿಂದಿಯ ಕಿರುತೆರೆ ವಾಹಿನಿಗಳಲ್ಲಿ ದಕ್ಷಿಣ ಭಾರತದ ಅನೇಕ ಚಿತ್ರಗಳು ಪ್ರಸಾರವಾಗಿವೆ. ತಮಿಳು, ತೆಲುಗು ಚಿತ್ರಗಳ ಡಬ್ಬಿಂಗ್ ಅವತರಣಿಕೆಗೆ ಹಿಂದಿಯಲ್ಲಿ ಅಪಾರ ಬೇಡಿಕೆ ಇದೆ. ಈ ಚಿತ್ರಗಳನ್ನು ಜನರೂ ಇಷ್ಟಪಟ್ಟು ವೀಕ್ಷಿಸುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರಗಳಲ್ಲಿ ಕಥೆಗಳು ಉತ್ತರ ಭಾರತದ ಸಿನಿ ಪ್ರಿಯರಿಗೆ ಇಷ್ಟವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಅನೇಕ ಹಿಟ್ ಚಿತ್ರಗಳು ಈ ಗುಂಪಿಗೆ ಸೇರಲು ಆರಂಭಿಸಿವೆ. ಕನ್ನಡದ ಡಬ್ ಚಿತ್ರಗಳು ಯೂಟ್ಯೂಬ್, ಟೆಲಿವಿಷನ್ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದು, ಅಧಿಕ ವೀಕ್ಷಣೆಗೆ ಒಳಪಡುತ್ತಿವೆ. ಮುಂದೆ ಓದಿ...

  ಕಳೆದ ವರ್ಷ ಕಿರುತೆರೆಯಲ್ಲಿ ಪ್ರಸಾರ

  ಕಳೆದ ವರ್ಷ ಕಿರುತೆರೆಯಲ್ಲಿ ಪ್ರಸಾರ

  ಪ್ಯಾನ್ ಇಂಡಿಯಾ ಚಿತ್ರವಾಗಿದ್ದ ಕೆಜಿಎಫ್-1 ಹಿಂದಿಯಲ್ಲಿಯೂ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಪ್ರಶಂಸೆಗೆ ಪಾತ್ರವಾಗಿದ್ದ ಸಿನಿಮಾ, 2019ರ ಮಾರ್ಚ್‌ನಲ್ಲಿ ಇದು ಹಿಂದಿ ವಾಹಿನಿ ಸೋನಿ ಮ್ಯಾಕ್ಸ್‌ನಲ್ಲಿ ಮೊದಲ ಬಾರಿಗೆ ಪ್ರಸಾರವಾಗಿತ್ತು.

  'KGF-2' ಟೀಸರ್ ಬಿಡುಗಡೆಗೆ ಅಭಿಮಾನಿಗಳ ಅಭಿಯಾನ: ಟ್ವಿಟ್ಟರ್ ನಲ್ಲಿ ಟ್ರೆಂಡ್'KGF-2' ಟೀಸರ್ ಬಿಡುಗಡೆಗೆ ಅಭಿಮಾನಿಗಳ ಅಭಿಯಾನ: ಟ್ವಿಟ್ಟರ್ ನಲ್ಲಿ ಟ್ರೆಂಡ್

  ಡಬ್ ಆದ ಕನ್ನಡದ ಚಿತ್ರ

  ಡಬ್ ಆದ ಕನ್ನಡದ ಚಿತ್ರ

  ಬಳಿಕ ಇದುವರೆಗೂ ಕೆಜಿಎಫ್ ಹಲವು ಬಾರಿ ಕಿರುತೆರೆಯಲ್ಲಿ ಪ್ರಸಾರವಾಗಿದೆ. ಒಟ್ಟು ಎಂಟು ಬಾರಿ ಸೋನಿ ಮ್ಯಾಕ್ಸ್‌ನಲ್ಲಿ ಬಿತ್ತರಗೊಂಡಿದೆ. ಈ ವಾರ ಕೂಡ ಪ್ರಸಾರವಾಗಿದ್ದು, ಹಿಂದಿಗೆ ಡಬ್ ಆದ ಇದುವರೆಗಿನ ಕನ್ನಡ ಚಿತ್ರಗಳಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.

  ಮೂರನೇ ಸ್ಥಾನದಲ್ಲಿ ಕೆಜಿಎಫ್

  ಮೂರನೇ ಸ್ಥಾನದಲ್ಲಿ ಕೆಜಿಎಫ್

  ಸ್ಟಾರ್ ಗೋಲ್ಡ್‌ನಲ್ಲಿ ಪ್ರಸಾರವಾಗಿದ್ದ ತಮಿಳಿನ ದರ್ಬಾರ್ ಚಿತ್ರದ ಹಿಂದಿ ಡಬ್ಬಿಂಗ್ ಕಳೆದ ವಾರ ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡಿದೆ. ಸೋನಿ ಮ್ಯಾಕ್ಸ್‌ನಲ್ಲಿ ಪ್ರಸಾರವಾದ ಜುರಾಸಿಕ್ ವರ್ಡ್ ಎರಡನೆಯ ಸ್ಥಾನದಲ್ಲಿದೆ. 7191 ಟಿಆರ್‌ಪಿಯೊಂದಿಗೆ ಕೆಜಿಎಫ್ ಮೂರೇ ಸ್ಥಾನದಲ್ಲಿತ್ತು.

  ಯಶ್ ಒಬ್ಬ ಅದ್ಭುತ ವ್ಯಕ್ತಿ ಎಂದು ಹೊಗಳಿದ ಬಾಲಿವುಡ್ ತಾರೆ ರವೀನಾ ಟಂಡನ್ಯಶ್ ಒಬ್ಬ ಅದ್ಭುತ ವ್ಯಕ್ತಿ ಎಂದು ಹೊಗಳಿದ ಬಾಲಿವುಡ್ ತಾರೆ ರವೀನಾ ಟಂಡನ್

  ಮೊದಲ ಸಲದಷ್ಟೇ ವೀಕ್ಷಕರ ಸಂಪಾದನೆ

  ಮೊದಲ ಸಲದಷ್ಟೇ ವೀಕ್ಷಕರ ಸಂಪಾದನೆ

  ಕೆಜಿಎಫ್ ಮೊದಲ ಭಾಗ ಪ್ರಥಮ ಬಾರಿ ಟೆಲಿವಿಷನ್‌ನಲ್ಲಿ ಪ್ರಸಾರವಾದಾಗ 0.73 ಕೋಟಿ ಇಂಪ್ರೆಷನ್ಸ್ ಪಡೆದುಕೊಂಡಿತ್ತು. ಎಂಟನೆಯ ಬಾರಿ ಪ್ರಸಾರವಾದಾಗ 0.71 ಕೋಟಿಯೊಂದಿಗೆ ಹೆಚ್ಚೂಕಡಿಮೆ ಅಷ್ಟೇ ಸಂಖ್ಯೆಯ ವೀಕ್ಷಕರನ್ನು ಪಡೆದುಕೊಂಡಿದೆ.

  ತೆಲುಗಿನಲ್ಲಿ ಯಶಸ್ವಿ ಪ್ರದರ್ಶನ

  ತೆಲುಗಿನಲ್ಲಿ ಯಶಸ್ವಿ ಪ್ರದರ್ಶನ

  ಕೆಜಿಎಫ್‌ನ ತೆಲುಗು ಅವತರಣಿಕೆ ಹೈದರಾಬಾದ್‌ನ ಶಾಂತಿ ಚಿತ್ರಮಂದಿರದಲ್ಲಿ 63 ದಿನಗಳ ಪ್ರದರ್ಶನ ಕಂಡಿದೆ. ಈ ಒಂದು ಚಿತ್ರಮಂದಿರದಲ್ಲಿಯೇ ಅದು 66 ಲಕ್ಷ ರೂ ಗಳಿಕೆ ಕಂಡಿದೆ ಎನ್ನಲಾಗಿದೆ. ಒಟ್ಟಾರೆ ತೆಲುಗು ರಾಜ್ಯಗಳಲ್ಲಿ ಕೆಜಿಎಫ್ 24.39 ಕೋಟಿ ರೂ ಗಳಿಕೆ ಕಂಡಿದೆ ಎಂದು ಹೇಳಲಾಗಿದೆ.

  ನಮಗೆ ಯಾವಾಗ ಎಂದು ಕೇಳ್ತಿದ್ದಾರೆ ತೆಲುಗು ಮಂದಿ

  ನಮಗೆ ಯಾವಾಗ ಎಂದು ಕೇಳ್ತಿದ್ದಾರೆ ತೆಲುಗು ಮಂದಿ

  ಕೆಜಿಎಫ್ ಹಿಂದಿ ಟೆಲಿವಿಷನ್‌ನಲ್ಲಿ ಹಲವು ಬಾರಿ ಪ್ರಸಾರವಾಗಿದೆ. ಈಗಲೂ ಅದನ್ನು ಜನರು ಇಷ್ಟಪಟ್ಟು ನೋಡುತ್ತಿದ್ದಾರೆ. ನಾವು ತೆಲುಗು ಮಂದಿ ಕೂಡ ತೆಲುಗು ಟೆಲಿವಿಷನ್ ಪ್ರೀಮಿಯರ್‌ಗೆ ಕಾಯುತ್ತಿದ್ದೇವೆ. ಪ್ರಸಾರ ಮಾಡಲು ಇದು ಸೂಕ್ತ ಸಮಯ. ಯಾವಾಗ ಪ್ರಸಾರ ಮಾಡುತ್ತೀರಿ ಎಂದು ತೆಲುಗು ಯಶ್ ಫ್ಯಾನ್ಸ್ ಕ್ಲಬ್ ಕೇಳಿದ ಪ್ರಶ್ನೆಗೆ ನಿರ್ಮಾಪಕ ಕಾರ್ತಿಕ್ ಗೌಡ, ಶೀಘ್ರದಲ್ಲಿಯೇ ತೆಲುಗಿನಲ್ಲಿ ಪ್ರಸಾರವಾಗಲಿದೆ ಎಂದಿದ್ದಾರೆ.

  English summary
  KGF chapter 1 movie become the first Hindi dubbed Kannada movie to get highest TRP on its 8th time telecast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X